Advertisement

Pakistan Cricket Team: ಕೋಚ್‌ ಆಫ‌ರ್‌ ತಿರಸ್ಕರಿಸಿದ ವಾಟ್ಸನ್‌, ಸಮ್ಮಿ

12:19 AM Mar 18, 2024 | Team Udayavani |

ಕರಾಚಿ: ತನ್ನ ಕ್ರಿಕೆಟ್‌ ತಂಡಕ್ಕೆ ಮತ್ತೆ ನೂತನ ಕೋಚ್‌ ಒಬ್ಬರನ್ನು ಹುಡುಕಬೇಕಾದ ಸಂಕಟ ಪಾಕಿಸ್ಥಾನ ಕ್ರಿಕೆಟ್‌ ಮಂಡಳಿಯದ್ದಾಗಿದೆ. ಸಂಭಾವ್ಯರ ಯಾದಿಯಲ್ಲಿದ್ದ ಆಸ್ಟ್ರೇಲಿಯದ ಶೇನ್‌ ವಾಟ್ಸನ್‌ ಮತ್ತು ವೆಸ್ಟ್‌ ಇಂಡೀಸ್‌ನ ಡ್ಯಾರಿಲ್‌ ಸಮ್ಮಿ ಇಬ್ಬರೂ ಪಿಸಿಬಿ ಆಫ‌ರ್‌ ತಿರಸ್ಕರಿಸಿದ್ದೇ ಇದಕ್ಕೆ ಕಾರಣ.
ಇವರಲ್ಲಿ ಡ್ಯಾರನ್‌ ಸಮ್ಮಿ ಹಿಂದೆ ಸರಿದಿರುವುದಕ್ಕೆ ಕಾರಣ ನೀಡಿದ್ದಾರೆ. ತಾನು ಈಗಾಗಲೇ ವೆಸ್ಟ್‌ ಇಂಡೀಸ್‌ನ ಸೀಮಿತ ಓವರ್‌ಗಳ ಕ್ರಿಕೆಟ್‌ ತಂಡಗಳ ಪ್ರಧಾನ ಕೋಚ್‌ ಆಗಿ ನೇಮಕಗೊಳ್ಳಲಿದ್ದು, ಇದಕ್ಕಾಗಿ ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿ ಜತೆ ಒಪ್ಪಂದವನ್ನೂ ಮಾಡಿಕೊಂಡಾಗಿದೆ ಎಂದಿದ್ದಾರೆ.

Advertisement

ವಾಟ್ಸನ್‌ ನಿಗೂಢ ನಡೆ
ಆದರೆ ಶೇನ್‌ ವಾಟ್ಸನ್‌ ನಡೆ ನಿಗೂಢವಾಗಿದೆ. ಇವರಿಗೆ ಪಿಸಿಬಿ ದಾಖಲೆ 2 ಮಿಲಿಯನ್‌ ಡಾಲರ್‌ (16.58 ಕೋಟಿ ರೂ.) ವೇತನ ನೀಡುವುದಕ್ಕೆ ಸಮ್ಮತಿಸಿತ್ತು. ಇದು ತಿಂಗಳಿಗೆ 4.6 ಕೋಟಿ ರೂ.ಗಳಷ್ಟಾಗುತ್ತಿತ್ತು. ಆದರೂ ವಾಟ್ಸನ್‌ ಹಿಂದೆ ಸರಿದು ಶನಿವಾರ ರಾತ್ರಿ ತವರಿಗೆ ವಾಪಸಾಗಿದ್ದಾರೆ. ಇದು ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವಿದೆ.

ಕೋಚ್‌ ಒಡಂಬಡಿಕೆಗೆ ಸಂಬಂಧಪಟ್ಟ ಕೆಲವು ಆಂತರಿಕ ವಿಷಯಗಳು ಪಾಕಿಸ್ಥಾನ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗಗೊಂಡದ್ದು ವಾಟ್ಸನ್‌ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next