Advertisement

16 ಭಾರತೀಯ ಮೀನುಗಾರರನ್ನು ಬಂಧಿಸಿದ ಪಾಕಿಸ್ಥಾನ

09:13 PM Sep 30, 2022 | Team Udayavani |

ಇಸ್ಲಾಮಾಬಾದ್‌: ಪಾಕಿಸ್ಥಾನದ ಜಲಪ್ರದೇಶದಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಪಾಕಿಸ್ಥಾನದ ಅಧಿಕಾರಿಗಳು ಮಂಗಳವಾರ 16 ಭಾರತೀಯ ಮೀನುಗಾರರನ್ನು ಬಂಧಿಸಿದ್ದು, ಎರಡು ಟ್ರಾಲರ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

Advertisement

ಪಾಕಿಸ್ಥಾನದ ಕಡಲ ವಲಯಗಳಲ್ಲಿ ದಿನನಿತ್ಯದ ಕಣ್ಗಾವಲು ಸಂದರ್ಭದಲ್ಲಿ ಅದರ ಒಂದು ಹಡಗು “16 ಸಿಬಂದಿಗಳೊಂದಿಗೆ ಎರಡು ಭಾರತೀಯ ಮೀನುಗಾರಿಕಾ ದೋಣಿಗಳನ್ನು ವಶಕ್ಕೆ ಪಡೆದಿದೆ ಎಂದು ಪಾಕಿಸ್ಥಾನದ ಕಡಲ ಭದ್ರತಾ ಸಂಸ್ಥೆ (PMSA) ಹೇಳಿದೆ.

ಪಾಕಿಸ್ಥಾನದ ಕಾನೂನು ಮತ್ತು ಯುಎನ್ ಕನ್ವೆನ್ಷನ್ ಆಫ್ ಲಾ ಅಟ್ ಸೀ ಅನ್ನು ಉಲ್ಲಂಘಿಸಿದ್ದಕ್ಕಾಗಿ ಭಾರತೀಯ ಮೀನುಗಾರರನ್ನು ಬಂಧಿಸಲಾಗಿದೆ ಎಂದು ಅದು ಹೇಳಿದೆ.

ಪ್ರಾಥಮಿಕ ತನಿಖೆಯ ನಂತರ, ದೋಣಿಗಳನ್ನು ಕರಾಚಿಗೆ ಎಳೆದುಕೊಂಡು ಹೋಗಲಾಯಿತು ಮತ್ತು ಮುಂದಿನ ಕಾನೂನು ಔಪಚಾರಿಕತೆಯನ್ನು ಪೂರ್ಣಗೊಳಿಸಲು ಬಂಧಿತ ಮೀನುಗಾರರನ್ನು ಡಾಕ್ಸ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next