Advertisement

IMF: ಶ್ರೀಮಂತರಿಗೆ ತೆರಿಗೆ ವಿಧಿಸಲು ಪಾಕ್‌ಗೆ ತಾಕೀತು

12:20 AM Sep 22, 2023 | Team Udayavani |

ವಾಷಿಂಗ್ಟನ್‌: ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವ ಪಾಕಿಸ್ಥಾನ ದಲ್ಲಿನ ಹಣದುಬ್ಬರವು ಬಡವರ ಮೇಲೆ ಬರೆ ಎಳೆದಂತಾಗಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿರುವ ಶ್ರೀಮಂತರಿಂದ ಹೆಚ್ಚೆಚ್ಚು ತೆರಿಗೆ ಸಂಗ್ರಹಿಸಿ, ಬಡವರನ್ನು ರಕ್ಷಿಸಿ ಎಂದು ಪಾಕಿಸ್ಥಾನ ಸರಕಾರಕ್ಕೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜೀವಾ ಆಗ್ರಹಿಸಿದ್ದಾರೆ.

Advertisement

ವಿಶ್ವಸಂಸ್ಥೆ 78ನೇ ಸಾಮಾನ್ಯ ಸಭೆಯ ಹಿನ್ನೆಲೆಯಲ್ಲಿ ಪಾಕಿಸ್ಥಾನ ಹಂಗಾಮಿ ಪ್ರಧಾನಿ ಅನ್ವಾರುಲ್ಲಾ ಹಕ್‌ ಕಾಕರ್‌ ಅವರು ಕ್ರಿಸ್ಟಲಿನಾ ಅವರನ್ನು ಭೇಟಿಯಾಗಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕ್ರಿಸ್ಟಲಿನಾ, ಸದ್ಯದ ಮಟ್ಟಿಗೆ ಪಾಕಿಸ್ಥಾನದ ಬಡಜನರು ನಮ್ಮ ಆದ್ಯತೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಉಪಕ್ರಮದ ಭಾಗವಾಗಿ ಶ್ರೀಮಂ ತರಿಂದ ಹೆಚ್ಚಿಗೆ ತೆರಿಗೆ ಸಂಗ್ರಹಿಸಿ, ಬಡವರನ್ನು ರಕ್ಷಿಸುವಂತೆ ಕೇಳಿದ್ದೇವೆ. ಬಹುಶಃ ಪಾಕಿಸ್ಥಾನದ ಜನರೂ ಇದನ್ನೇ ಬಯಸುತ್ತಾರೆಂದು ಭಾವಿಸುತ್ತೇನೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next