Advertisement
2008ರಲ್ಲಿ ನಡೆದ ಭಯೋತ್ಪಾದಕ ದಾಳಿ ಕುರಿತ ಸುಮಾರು 880 ಪುಟಗಳ ಪಟ್ಟಿಯಲ್ಲಿ, ಮುಹಮ್ಮದ್ ಅಮ್ಜದ್ ಖಾನ್ ಹೆಸರು ಉಲ್ಲೇಖವಾಗಿದ್ದು, ಈತ 2008ರ ಭಯೋತ್ಪಾದಕ ದಾಳಿ ನಡೆಸಲು ನಿಟ್ಟಿನಲ್ಲಿ ಅಲ್ ಫೌಜ್ ಎಂಬ ಬೋಟ್ ಅನ್ನು ಖರೀದಿಸಿದ್ದ. ಅಷ್ಟೇ ಅಲ್ಲ ಅಮ್ಜದ್ ಯಮಹಾ ಮೋಟಾರ್ ಬೋಟ್ ಎಂಜಿನ್, ಲೈಫ್ ಜಾಕೆಟ್ಸ್ ಅನ್ನು ಕರಾಚಿಯಲ್ಲಿ ಖರೀದಿಸಿದ್ದು, ನಂತರ ಮುಂಬೈನಲ್ಲಿ ದಾಳಿ ನಡೆಸಲು ಬಳಸಿಕೊಂಡಿದ್ದರು.
Related Articles
Advertisement
ಈ ಪಟ್ಟಿಯಲ್ಲಿ 1,210 ಹೈಪ್ರೊಫೈಲ್ ಹಾಗೂ ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಹೆಸರುಗಳು ನಮೂದಾಗಿದೆ. ಆದರೆ ಇದರಲ್ಲಿ ಹಫೀಜ್ ಸಯೀದ್, ಮಸೂದ್ ಅಜರ್ ಅಥವಾ ದಾವೂದ್ ಇಬ್ರಾಹಿಂ ಹೆಸರು ಉಲ್ಲೇಖಿಸಿಲ್ಲ ಎಂದು ವರದಿ ಹೇಳಿದೆ.
26/11 ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ನನ್ನು ಅಂತಾರಾಷ್ಟ್ರೀಯ ಉಗ್ರ ಎಂದು ವಿಶ್ವಸಂಸ್ಥೆ ಘೋಷಿಸಿ ಪಟ್ಟಿಗೆ ಸೇರಿಸಿತ್ತು. ಭಯೋತ್ಪಾದಕ ಚಟುವಟಿಕೆಗೆ ಆರ್ಥಿಕ ನೆರವು ನೀಡಿದ ಆರೋಪದಡಿ ಪಾಕಿಸ್ತಾನ ಕೋರ್ಟ್ ಸಯೀದ್ ನನ್ನು ದೋಷಿ ಎಂದು ತೀರ್ಪು ನೀಡಿ ಐದು ವರ್ಷ ಜೈಲುಶಿಕ್ಷೆ ಆದೇಶ ನೀಡಿತ್ತು.
ಆದರೆ ದಾವೂದ್ ಇಬ್ರಾಹಿಂ ತನ್ನ ನೆಲದಲ್ಲಿ ಆಶ್ರಯ ನೀಡಲಾಗಿದೆ ಎಂಬುದನ್ನು ಮಾತ್ರ ಪಾಕಿಸ್ತಾನ ಈವರೆಗೂ ಒಪ್ಪಿಕೊಂಡಿಲ್ಲ. ದಾವೂದ್ ಕರಾಚಿಯಲ್ಲಿ ವಾಸವಾಗಿದ್ದಾನೆ ಎಂಬುದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಅಲ್ಲದೇ ವಿಶ್ವಸಂಸ್ಥೆಯ ಉಗ್ರರ ಪಟ್ಟಿಯಲ್ಲಿರುವ ಭಯೋತ್ಪಾದಕರ ವಿಳಾಸ ಕರಾಚಿ ಮತ್ತು ದಕ್ಷಿಣ ಸಿಂಧ್ ಪ್ರಾಂತ್ಯದ್ದಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:5 ದಶಕಗಳ ಕಾಲ ಪ್ರಧಾನಮಂತ್ರಿ: ಬಹರೈನ್ ಪ್ರಧಾನಿ ಖಲೀಫಾ ಬಿನ್ ಸಲ್ಮಾನ್ ನಿಧನ
ಪಟ್ಟಿಯಲ್ಲಿರುವ 161 ಮೋಸ್ಟ್ ವಾಂಟೆಡ್ ಉಗ್ರರು ಬಲೂಚಿಸ್ತಾನದವರು, ಖೈಬರ್ ಪಖ್ತುನ್ ಖಾವಾದ 737 ಉಗ್ರರು, ಸಿಂಧ್ ಪ್ರಾಂತ್ಯದ 100, ಪಂಜಾಬ್ ಪ್ರಾಂತ್ಯದ 122, ಇಸ್ಲಾಮಾಬಾದ್ ನ 32 ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ 30 ಉಗ್ರರು ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿದ್ದಿರುವುದಾಗಿ ವರದಿ ವಿವರಿಸಿದೆ.