Advertisement
ಗುರುವಾರ “ಅಡಿಲೇಡ್ ಓವಲ್’ನಲ್ಲಿ ಅಹರ್ನಿಶಿಯಾಗಿ ನಡೆದ ಮುಖಾಮುಖೀಯಲ್ಲಿ ಟಾಸ್ ಗೆದ್ದು ಬ್ಯಾಟಿಂಗಿಗೆ ಇಳಿದ ಸ್ಮಿತ್ ಬಳಗ 7 ವಿಕೆಟಿಗೆ 369 ರನ್ ರಾಶಿ ಹಾಕಿದರೆ, ಪಾಕಿಸ್ಥಾನ 49.1 ಓವರ್‌ಗಳಲ್ಲಿ 9 ವಿಕೆಟಿಗೆ 312 ರನ್ ಗಳಿಸಿತು. 10 ರನ್ ಮಾಡಿದ ವೇಳೆ ಗಾಯಾಳಾಗಿ ಕ್ರೀಸ್ ತೊರೆದ ಶೋಯಿಬ್ ಮಲಿಕ್ ಮತ್ತೆ ಆಡಲಿಳಿಯಲಿಲ್ಲ.
ಆಸೀಸ್ ಸರದಿಯ ವೈಶಿಷ್ಟವೆಂದರೆ ಎಡಗೈ ಆರಂಭಿಕರಾದ ಡೇವಿಡ್ ವಾರ್ನರ್-ಟ್ರ್ಯಾವಿಸ್ ಹೆಡ್ ಜೋಡಿಯ ಅಮೋಘ ಆಟ. ಇವರು 42ನೇ ಓವರ್ ತನಕ ಕ್ರೀಸಿಗೆ ಫೆವಿಕಾಲ್ ಹಾಕಿಕೊಂಡು ನಿಂತುಬಿಟ್ಟರು. ಇಬ್ಬರೂ ಶತಕ ಸಂಭ್ರಮ ಆಚರಿಸುವ ಜತೆಗೆ ಮೊದಲ ವಿಕೆಟಿಗೆ 284 ರನ್ ಸೂರೆಗೈದು ಆಸೀಸ್ ದಾಖಲೆಯನ್ನೂ ಸ್ಥಾಪಿಸಿದರು. ವಾರ್ನರ್ ಗಳಿಕೆ 128 ಎಸೆತಗಳಿಂದ 179 ರನ್. ಅವರ ಈ ಜೀವನಶ್ರೇಷ್ಠ ಬ್ಯಾಟಿಂಗ್ ವೇಳೆ 19 ಬೌಂಡರಿ, 5 ಸಿಕ್ಸರ್ ಸಿಡಿಯಿತು. ಇದು ಈ ಸರಣಿಯಲ್ಲಿ ವಾರ್ನರ್ ಬಾರಿಸಿದ ಸತತ 2ನೇ ಶತಕ. ಜ. 22ರ ಸಿಡ್ನಿ ಪಂದ್ಯದಲ್ಲಿ 130 ರನ್ ಮಾಡಿದ್ದರು. ಇದರೊಂದಿಗೆ ಪ್ರಸಕ್ತ ಸರಣಿಯಲ್ಲಿ ವಾರ್ನರ್ 367 ರನ್ ಪೇರಿಸಿದಂತಾಯಿತು.
Related Articles
Advertisement
ಇನ್ನೊಂದೆಡೆ ಹೆಡ್ 20ನೇ ಪಂದ್ಯದಲ್ಲಿ ಮೊದಲ ಸೆಂಚುರಿ ಸಂಭ್ರಮವನ್ನಾ ಚರಿಸಿದರು. ಶತಕಕ್ಕೆ 121 ಎಸೆತ ಎದುರಿಸಿದ ಹೆಡ್, 137 ಎಸೆತಗಳಿಂದ 128 ರನ್ ಹೊಡೆದರು. ಬೀಸಿದ್ದು 9 ಬೌಂಡರಿ ಹಾಗೂ 3 ಸಿಕ್ಸರ್. ತಂಡದ ಒಟ್ಟು ಮೊತ್ತದಲ್ಲಿ 307 ರನ್ ಇವರಿಬ್ಬರ ಬ್ಯಾಟಿನಿಂದಲೇ ಹರಿದು ಬಂದಿತ್ತು! ಉಳಿದ 7 ಮಂದಿ ಸೇರಿ ಗಳಿಸಿದ್ದು ಕೇವಲ 51 ರನ್ ಮಾತ್ರ. ಇವರಲ್ಲಿ ಔಟಾಗದೆ 18 ರನ್ ಮಾಡಿದ ಫಾಕ್ನರ್ ಅವರದೇ ಹೆಚ್ಚಿನ ಗಳಿಕೆ. .
ಬಾಬರ್ ಆಜಂ ನೂರರಾಟಪಾಕಿಸ್ಥಾನ ಪರಾಭವಗೊಂಡರೂ ಬಾಬರ್ ಆಜಂ ಅವರ ಶತಕದಾಟ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಆಜಂ 109 ಎಸೆತಗಳಿಂದ ಸರಿಯಾಗಿ 100 ರನ್ ಮಾಡಿ ಔಟಾದರು (7 ಬೌಂಡರಿ. 1 ಸಿಕ್ಸರ್). ಇದು ಆಸ್ಟ್ರೇಲಿಯ ವಿರುದ್ಧ ಅವರದೇ ನೆಲದಲ್ಲಿ ಪಾಕ್ ಆಟಗಾರನೊಬ್ಬ 1981ರ ಬಳಿಕ ಬಾರಿಸಿದ ಮೊದಲ ಶತಕ. 36 ವರ್ಷಗಳ ಹಿಂದಿನ ಸಿಡ್ನಿ ಪಂದ್ಯದಲ್ಲಿ ಜಹೀರ್ ಅಬ್ಟಾಸ್ 108 ರನ್ ಹೊಡೆದಿದ್ದರು.