Advertisement

ಪಾಕ್‌ಗೆ ಬೇಕಂತೆ ಭಾರತದ ಜೊತೆ “ಉತ್ತಮ ಆರ್ಥಿಕ ಸಂಬಂಧ’

09:22 AM Jan 13, 2022 | Team Udayavani |

ನವದೆಹಲಿ: ಭಾರತದ ಜತೆಗೆ ಯಾವತ್ತೂ ಕಾಲು ಕೆರೆದುಕೊಂಡು ಬರುವ ಪಾಕಿಸ್ತಾನ ಇದೀಗ “ಮಧುರ ಬಾಂಧವ್ಯ’ದ ಮಾತುಗಳನ್ನಾಡುತ್ತಿದೆ.

Advertisement

ಜಮ್ಮು ಮತ್ತು ಕಾಶ್ಮೀರ ನಮ್ಮದು ಎಂದು ಹೇಳಿಕೊಳ್ಳುತ್ತಿರುವ ಪಾಕಿಸ್ತಾನ ಇದುವರೆಗೆ, ಭಾರತದ ಜತೆಗೆ ಹೊಂದಿರುವ ಭಿನ್ನಾಭಿಪ್ರಾಯಗಳ ಪಟ್ಟಿಯಲ್ಲಿ ಕಾಶ್ಮೀ ರಕ್ಕೇ ಮೊದಲ ಸ್ಥಾನ ನೀಡಿತ್ತು.  ಈಗ ಅದಕ್ಕೆ ಎರಡನೇ ಹಂತದ ಪ್ರಾಶಸ್ತ್ಯ ನೀಡಲು ಯೋಜಿಸಿದೆ.

ಈ ಬಗ್ಗೆ ಅಧಿಕೃತ ಘೋಷಣೆ ಆಗಿಲ್ಲ ಎನ್ನುವುದು ಗಮನಾರ್ಹ. ಹಲವು ರೀತಿಯ ಆರ್ಥಿಕ ಸಂಕಷ್ಟಕ್ಕೆ ಈಡಾಗಿರುವ ಪಾಕಿಸ್ತಾನ, ಭಾರತದ ಜತೆಗೆ ಅತ್ಯುತ್ತಮ ಬಾಂಧವ್ಯ ಹೊಂದಬೇಕು. ವಿಶೇಷವಾಗಿ ಆರ್ಥಿಕ ವಿಚಾರಗಳಲ್ಲಿ ನವದೆಹಲಿಯ ಜತೆಗೆ ಬಿಗುಮಾನ ಬಿಟ್ಟು ವ್ಯವಹರಿಸಬೇಕು ಎಂಬ ಅಂಶ ಪ್ರಸ್ತಾಪಿಸಲಾಗಿದೆ.

ಇದನ್ನೂ ಓದಿ:ಹೆಬ್ಟಾವು ರಸ್ತೆ ದಾಟಿದ್ದರಿಂದಲೇ ಟ್ರಾಫಿಕ್‌ ಜಾಮ್‌ !-ವಿಡಿಯೋ ವೈರಲ್‌

ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಪಾಕಿಸ್ತಾನದ ಹೊಸ ರಾಷ್ಟ್ರೀಯ ಭದ್ರತಾ ನೀತಿಯಲ್ಲಿ ಈ ಅಂಶ ಉಲ್ಲೇಖಿಸಲಾಗಿದೆ. 100 ಪುಟಗಳ ಕೈಪಿಡಿಯಲ್ಲಿ ಜಮ್ಮು ಮತ್ತು ಕಾಶ್ಮೀರ ವಿಚಾರಕ್ಕೆ ಮೊದಲ ಪ್ರಾಶಸ್ತ್ಯದ ಬದಲು ಎರಡನೇ ಹಂತದ ಮನ್ನಣೆ ನೀಡಬೇಕು ಎಂದು ಉಲ್ಲೇಖಿಸಲಾಗಿದೆ.

Advertisement

“ಮುಂದಿನ 100 ವರ್ಷಗಳ ಕಾಲ ಭಾರತದ ಜತೆಗೆ ಪಾಕಿಸ್ತಾನ ವೈರತ್ವ ಬಯಸುವುದಿಲ್ಲ. ಅತ್ಯಂತ ಸನಿಹದಲ್ಲಿರುವ ನೆರೆಯ ರಾಷ್ಟ್ರಗಳ ಜತೆಗೆ ಉತ್ತಮ ಬಾಂಧವ್ಯ ಹೊಂದುವುದು ಅಗತ್ಯ. ಹಿಂದಿನ ವರ್ಷಗಳಂತೆ ಮಾತುಕತೆ ನಡೆದು, ಬಾಂಧವ್ಯ ಸರಿಹೋದರೆ, ಭಾರತದ ಜತೆಗೆ ಉತ್ತಮ ವ್ಯಾಪಾರ ಮತ್ತು ವಾಣಿಜ್ಯಿಕ ಬಾಂಧವ್ಯದಿಂದ ಅನುಕೂಲವೇ ಆಗಿ ಬರಲಿದೆ’ ಎಂದು ಆ ಕೈಪಿಡಿಯಲ್ಲಿ ಪ್ರಸ್ತಾಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next