ಕರಾಚಿ: ಪಾಕಿಸ್ಥಾನದ ಸಿಂಧ್ ಪ್ರಾಂತ್ಯದಲ್ಲಿ ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ವ್ಯಾನ್ ಪ್ರವಾಹ ನೀರಿನಿಂದ ತುಂಬಿದ ಆಳವಾದ ಕಂದಕಕ್ಕೆ ಬಿದ್ದ ಪರಿಣಾಮ ಒಂದೇ ಕುಟುಂಬದ 12 ಮಕ್ಕಳು ಸೇರಿದಂತೆ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ರಾತ್ರಿ ಭಕ್ತರು ಸೆಹ್ವಾನ್ ಷರೀಫ್ನಲ್ಲಿರುವ ಸೂಫಿ ಮಸೀದಿ ಕಡೆಗೆ ಹೋಗುತ್ತಿದ್ದಾಗ ಖೈರ್ಪುರ ಬಳಿಯ ಸಿಂಧೂ ಹೆದ್ದಾರಿಯ ಪಕ್ಕದ 30 ಅಡಿ ಅಗಲದ ಕಂದಕಕ್ಕೆ ವ್ಯಾನ್ ಬಿದ್ದಿದ್ದು, ಅಲ್ಲಿ ಇತ್ತೀಚಿನ ಪ್ರವಾಹದ ಸಂದರ್ಭದಲ್ಲಿ ಪ್ರವಾಹದ ನೀರು ಸಂಗ್ರಹವಾಗಿತ್ತು.
“ಎಲ್ಲಾ ಪ್ರಯಾಣಿಕರು ಒಂದೇ ಕುಟುಂಬಕ್ಕೆ ಸೇರಿದವರು ಮತ್ತು ಝಿಯಾರತ್ ಗಾಗಿ ಮಸೀದಿಗೆ ಭೇಟಿ ನೀಡುತ್ತಿದ್ದರು. ಮಾರ್ಗದುದ್ದಕ್ಕೂ ಬ್ಯಾರಿಕೇಡ್ಗಳನ್ನು ಇಟ್ಟಿರುವುದನ್ನು ನೋಡಲು ವ್ಯಾನ್ ಚಾಲಕ ವಿಫಲನಾಗಿದ್ದಾನೆ ” ಎಂದು ಡೆಪ್ಯುಟಿ ಕಮಿಷನರ್ ಫರಿದುದ್ದೀನ್ ಮುಸ್ತಫಾ ಅವರನ್ನು ಉಲ್ಲೇಖಿಸಿ ಡಾನ್ ಪತ್ರಿಕೆ ವರದಿ ಮಾಡಿದೆ.
“ಇತ್ತೀಚಿನ ಪ್ರವಾಹದ ಸಮಯದಲ್ಲಿ ಪ್ರವಾಹದ ನೀರು ಸಂಗ್ರಹವಾದ ಹೆದ್ದಾರಿಯ ಪಕ್ಕದಲ್ಲಿ ಒಂದು ಕಂದಕವಿತ್ತು.” ಪೊಲೀಸರ ಪ್ರಕಾರ, ಮೃತದೇಹಗಳನ್ನು ಮೇಲಕ್ಕೆತ್ತಲಾಗಿದೆ.