Advertisement

Pak Cricket; ಆಯ್ಕೆ ಸಮಿತಿ ವಿಸರ್ಜಿಸಿದ ಪಿಸಿಬಿ: ಅಫ್ರಿದಿ ನಾಯಕತ್ವ ಅನುಮಾನ

12:38 AM Mar 25, 2024 | Team Udayavani |

ಲಾಹೋರ್‌: ಪಾಕಿಸ್ಥಾನ ತನ್ನ ರಾಷ್ಟ್ರೀಯ ಕ್ರಿಕೆಟ್‌ ಆಯ್ಕೆ ಸಮಿತಿಯನ್ನು ವಿಸರ್ಜಿಸಿದೆ. ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ ಸಮೀಪಿಸುತ್ತಿರುವ ಹೊತ್ತಿನಲ್ಲಿ ಪಿಸಿಬಿ ಇಂಥದೊಂದು ಕ್ರಮಕ್ಕೆ ಮುಂದಾದದ್ದು ಅಚ್ಚರಿಗೆ ಕಾರಣವಾಗಿದೆ.

Advertisement

ರವಿವಾರ ಪಿಸಿಬಿ ಅಧ್ಯಕ್ಷ ಮೊಹ್ಸಿನ್‌ ನಖೀÌ ಮತ್ತು ಮುಖ್ಯ ಆಯ್ಕೆಗಾರ ವಹಾಬ್‌ ರಿಯಾಜ್‌ ನಡುವೆ ನಡೆದ ಸಭೆಯ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ. ಟಿ20 ವಿಶ್ವಕಪ್‌ ಪಂದ್ಯಾವಳಿಗೂ ಸ್ವಲ್ಪ ಮೊದಲು ನೂತನ ಆಯ್ಕೆ ಸಮಿತಿಯನ್ನು ರಚಿಸುವುದಾಗಿ ಪಿಸಿಬಿ ಮೂಲಗಳು ತಿಳಿಸಿವೆ.

ಅಫ್ರಿದಿ ನಾಯಕತ್ವ ಅನುಮಾನ
ಇದೇ ವೇಳೆ ವೇಗಿ ಶಾಹಿನ್‌ ಶಾ ಅಫ್ರಿದಿ ಪಾಕಿಸ್ಥಾನ ಟಿ20 ನಾಯಕರಾಗಿ ಮುಂದು ವರಿಯುವ ಸಾಧ್ಯತೆ ಕಡಿಮೆ ಎಂಬುದಾಗಿ ಮೊಹ್ಸಿನ್‌ ನಖೀÌ ಸೂಚನೆ ನೀಡಿದ್ದಾರೆ. ಕೀಪರ್‌ ಮೊಹಮ್ಮದ್‌ ರಿಜ್ವಾನ್‌ ಸೀಮಿತ ಓವರ್‌ಗಳ ತಂಡದ ನಾಯಕರಾಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next