Advertisement

ಮತ್ತೆ ಅರಬ್ಬರ ನಾಡಿನಲ್ಲಿ ನಡೆಯುತ್ತಾ ಏಷ್ಯಾಕಪ್?‌: ಪಾಕ್‌ ಗೆ ಮುಖಭಂಗ

10:42 AM Feb 05, 2023 | Team Udayavani |

ನವದೆಹಲಿ: 2023ನೇ ಸಾಲಿನ ಏಷ್ಯಾಕಪ್‌ ಏಕದಿನ ಪಂದ್ಯಾವಳಿಯ ಅತಿಥ್ಯವಹಿಸಿರುವ ಪಾಕಿಸ್ತಾನಕ್ಕೆ ಮತ್ತೆ ಹಿನ್ನೆಡೆ ಆಗಿದೆ. ಶನಿವಾರ (ಫೆ.4 ರಂದು) ಬಹ್ರೇನ್‌ನಲ್ಲಿ ನಡೆದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆಯಲ್ಲಿ ಏಷ್ಯಾಕಪ್‌ ಪಂದ್ಯಾವಳಿ ಪಾಕ್‌ ನಲ್ಲಿ ನಡೆಯುವುದು ಅನುಮಾನ ಎನ್ನುವುದರ ಕುರಿತು ಚರ್ಚೆಯಾಗಿದೆ.

Advertisement

ಬಹ್ರೇನ್‌ನಲ್ಲಿ ನಡೆದ ಸಭೆಯಲ್ಲಿ ಎಸಿಸಿ ಮುಖ್ಯಸ್ಥ ಜಯ್ ಶಾ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥ ನಜಮ್ ಸೇಥಿ ಮತ್ತು ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಈ ಸಭೆಯಲ್ಲಿ ಹಿಂದೆ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಅವರು, ಭಾರತ ತಂಡ ಏಷ್ಯಾಕಪ್ ಆಡಲು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎನ್ನುವ ಮಾತನ್ನು ಮತ್ತೊಮ್ಮೆ ಹೇಳಿದ್ದಾರೆ. ಇದರಿಂದ ಪಾಕ್‌ ಗೆ ಹಿನ್ನೆಡೆಯಾಗಿದೆ.

ಈ ವರ್ಷ ಸೆಪ್ಟೆಂಬರ್‌ ನಲ್ಲಿ 50 ಮಾದರಿಯಲ್ಲಿ ಏಕದಿನ ಏಷ್ಯಾಕಪ್‌ ನಡೆಯಲಿದೆ. ಕ್ರಮದ ಪ್ರಕಾರ ಪಾಕಿಸ್ತಾನ ಈ ಬಾರಿ ಅತಿಥ್ಯ ವಹಿಸಬೇಕಿತ್ತು. ಆದರೆ ಭಾರತ ಪಾಕ್‌ ಗೆ ಪ್ರಯಾಣಿಸಲು ನಿರಾಕರಿಸಿದ ಕಾರಣ ಪಾಕ್‌ ನಿಂದ ಏಷ್ಯಾಕಪ್‌ ಬೇರೆಡೆ ಸ್ಥಳಾಂತರ ಆಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಕುಡಿದು ಬಂದು ಪತ್ನಿಗೆ ಹಲ್ಲೆ,ನಿಂದನೆ: ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ವಿರುದ್ಧ FIR

ಮಾರ್ಚ್‌ನಲ್ಲಿ ನಡೆಯುವ ಮತ್ತೊಂದು ಎಸಿಸಿ ಸಭೆಯ ನಂತರ ಏಷ್ಯಾ ಕಪ್ ಆತಿಥೇಯರ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಸಭೆಯಲ್ಲಿ ಹೇಳಲಾಗಿದೆ.

Advertisement

ವರದಿಯ ಪ್ರಕಾರ ಯುಎಐನಲ್ಲಿ ನಡೆಯಬಹುದು ಎನ್ನಲಾಗಿದೆ.

ಈ ಹಿಂದೆ ಭಾರತ ಏಷ್ಯಾಕಪ್‌ ನಲ್ಲಿ ಭಾಗಿಯಾಗದೆ ಇದ್ದರೆ, ಪಾಕ್‌ ಈ ವರ್ಷ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್‌ ನಲ್ಲಿ ಭಾಗವಹಿಸುವುದಿಲ್ಲಎಂದು ಪಿಸಿಬಿಯ ಅಧ್ಯಕ್ಷರಾಗಿದ್ದಾಗ ರಮೀಜ್‌ ರಾಜಾ ಹೇಳಿದ್ದರು. ಅದೇ ಮಾತನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಈಗಿನ ಮುಖ್ಯಸ್ಥ ನಜಮ್ ಸೇಥಿ  ಕೂಡ ಜಯ್‌ ಶಾ ಅವರಿಗೆ ಶನಿವಾರದ ಸಭೆಯಲ್ಲಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next