Advertisement

Pak ಉಗ್ರರ ಬಳಿ ಈಗ ಚೀನ ಅತ್ಯಾಧುನಿಕ ಎನ್‌ಕ್ರಿಪ್ಟ್ ಅಲ್ಟ್ರಾ ಹ್ಯಾಂಡ್‌ಸೆಟ್‌!

01:04 AM Jun 24, 2024 | Team Udayavani |

ಹೊಸದಿಲ್ಲಿ: ಜಮ್ಮು-ಕಾಶ್ಮೀರದಲ್ಲಿ ನಡೆದ ಎನ್‌ಕೌಂಟರ್‌ ವೇಳೆ ಹತರಾದ ಉಗ್ರರ ಬಳಿ ಚೀನದ ಅತ್ಯಾಧುನಿಕ ಎನ್‌ಕ್ರಿಪ್ಟ್ (ಗೂಢಲಿಪೀಕರಣ) ಮಾಡ ಲಾದ ಟೆಲಿಕಾಂ ಗೇರ್‌ “ಅಲ್ಟ್ರಾ ಸೆಟ್‌’ ಮೊಬೈಲ್‌ ಹ್ಯಾಂಡ್‌ಸೆಟ್‌ಗಳು ದೊರೆತಿವೆ. ಈ ಸಾಧನಗಳನ್ನು ಪಾಕಿಸ್ಥಾನ ಸೇನೆ ಬಳಸುತ್ತಿದ್ದು, ಅದೀಗ ಉಗ್ರರ ಕೈಗೂ ದೊರೆತಿದೆ ಎಂದು ಭಾರತೀಯ ಅಧಿಕಾ ರಿಗಳು ತಿಳಿಸಿದ್ದಾರೆ.

Advertisement

ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರಿಂದ ವಶಪಡಿಸಿಕೊಳ್ಳಲಾದ ಹ್ಯಾಂಡ್‌ಸೆಟ್‌ಗಳು ಉಗ್ರರಿಗೆ ಪಾಕಿಸ್ಥಾನವು ತನ್ನ ನೆಲದಲ್ಲಿ ತರಬೇತಿ ನೀಡುತ್ತಿರುವುದನ್ನು ಸೂಚಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹ್ಯಾಂಡ್‌ಸೆಟ್‌ಗಳನ್ನು ಪಾಕಿಸ್ಥಾನ ಸೇನೆಗಾಗಿ ಚೀನದ ಕಂಪೆನಿಗಳು ತಯಾರಿಸಿ ಕೊಡುತ್ತವೆ.

ಈ ಸಾಧನಗಳು ಸಂದೇಶ ರವಾನೆ ಮತ್ತು ಸ್ವೀಕರಿಸುವುದಕ್ಕಾಗಿ ರೇಡಿಯೋ ತರಂಗಗಳಲ್ಲಿ ಕಾರ್ಯನಿರ್ವಹಿಸುತ್ತವೆ. ಪ್ರತೀ ಅಲ್ಟ್ರಾಸೆಟ್‌ ಮೊಬೈಲ್‌ ಗಡಿಯುದ್ದಕ್ಕೂ ಇರುವ ನಿಯಂತ್ರಣ ಕೇಂದ್ರಕ್ಕೆ ಸಂಪರ್ಕಿತವಾಗಿರುತ್ತದೆ. ಈ ಸಂದೇಶಗಳಿಗಾಗಿ ಚೀನ ಉಪಗ್ರಹಗಳನ್ನು ಬಳಸಲಾಗುತ್ತದೆ. ಸಂದೇಶಗಳನ್ನು ಬೈಟ್‌ಗಳಿಗೆ ತಗ್ಗಿಸಿ ಪಾಕಿಸ್ಥಾನದ ಮಾಸ್ಟರ್‌ ಸರ್ವರ್‌ ಮೂಲಕ ಹ್ಯಾಂಡ್‌ಸೆಟ್‌ಗಳಿಗೆ ರವಾನಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next