Advertisement

ಅಯೋಧ್ಯೆಯಲ್ಲಿ ಪಾಕ್‌ ಹಸ್ತಕ್ಷೇಪ

06:00 AM Nov 23, 2017 | Team Udayavani |

ಹೊಸದಿಲ್ಲಿ: ಅಯೋಧ್ಯೆ ರಾಮಮಂದಿರ ವಿಚಾರದಲ್ಲಿ ಪಾಕಿಸ್ಥಾನ ಹಿಂದಿನಿಂದಲೂ ಕೈವಾಡ ಹೊಂದಿದೆ ಎಂದು ಶಿಯಾ ಕೇಂದ್ರೀಯ ವಕ್ಫ್ ಮಂಡಳಿಯ ಮುಖ್ಯಸ್ಥ ಸೈಯದ್‌ ವಸೀಂ ರಿಜ್ವಿ ಹೇಳಿದ್ದಾರೆ. ಪಾಕ್‌ ಹಸ್ತಕ್ಷೇಪದಿಂದಾಗಿಯೇ ಇಷ್ಟು ವರ್ಷಗಳಾದರೂ ಸಮಸ್ಯೆ ಬಗೆಹರಿದಿಲ್ಲ. ಮುಸ್ಲಿಮರ ಪರವಾಗಿ ನ್ಯಾಯಾಲಯದಲ್ಲಿ ವಾದಿಸುತ್ತಿರುವವರಿಗೆ ಪಾಕಿಸ್ಥಾನದ ನೇರ ಸಂಪರ್ಕವಿದೆ. ಅವರಿಗೆ ಭಾರತದಲ್ಲಿ ರಕ್ತಪಾತ ಉಂಟು ಮಾಡಬೇಕಿದೆ ಎಂದು ಆರೋಪಿಸಿದ್ದಾರೆ.

Advertisement

1992ರಲ್ಲಿ ಬಾಬ್ರಿ ಮಸೀದಿ ಧ್ವಂಸಗೊಳಿಸಿದಾಗ ಭಾರತಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪಾಕ್‌ನಲ್ಲಿ ದೇಗುಲಗಳನ್ನು ಧ್ವಂಸ ಮಾಡಲಾಯಿತು. 2005ರಲ್ಲಿ ಅಯೋಧ್ಯೆಯ ಮೇಲೆ ದಾಳಿ ನಡೆದಿದ್ದೂ ಪಾಕಿಸ್ಥಾನ ಪ್ರಚೋದಿತ ಎಂದು ಅವರು ಟೀಕಿಸಿದ್ದಾರೆ. ಕೆಲವೇ ದಿನಗಳ ಹಿಂದಷ್ಟೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಿ, ಲಕ್ನೋನಲ್ಲಿ ಮಸೀದಿ ನಿರ್ಮಿಸುವ ಪ್ರಸ್ತಾಪವನ್ನು ಶಿಯಾ ವಕ್ಫ್ ಮಂಡಳಿ ಮಂಡಿಸಿತ್ತು.

ಮುಲಾಯಂ ಸಮರ್ಥನೆ: ಅಯೋಧ್ಯೆಯಲ್ಲಿ 1990ರ ಅಕ್ಟೋಬರ್‌ನಲ್ಲಿ ಕರಸೇವಕರ ಮೇಲೆ ನಡೆದ ಗುಂಡಿನ ದಾಳಿಯನ್ನು ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್‌ ಯಾದವ್‌ ಸಮರ್ಥಿಸಿಕೊಂಡಿದ್ದಾರೆ. ದೇಶದ ಏಕತೆ, ಸಮಗ್ರತೆಗೆ ಇನ್ನಷ್ಟು ಜನರ ಬಲಿ ಕೊಡಲೂ ನಾನು ಸಿದ್ಧನಿದ್ದೆ ಎಂದಿದ್ದಾರೆ. ರಾಮಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಿಸಲು ವಿಶ್ವ ಹಿಂದೂ ಪರಿಷತ್‌ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಲಕ್ಷಗಟ್ಟಲೆ ಕರಸೇವಕರು ಅಯೋಧ್ಯೆಗೆ ಆಗಮಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next