ಕರಾಚಿ/ಮುಂಬಯಿ: ಭಾರತದ ಮೋಸ್ಟ್ ವಾಂಟೆಡ್ ಪಾತಕಿ ದಾವೂದ್ ಇಬ್ರಾಹಿಂಗೆ ರವಿವಾರ ವಿಷ ಪ್ರಾಶನ ಮಾಡಲಾಗಿದೆ ಎಂಬ ವರದಿಗಳ ನಡು ವೆಯೇ, ಆತ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಹೇಳಲಾಗಿ ರುವ ಕರಾ ಚಿ ಯ ಆಗಾ ಖಾನ್ ಆಸ್ಪತ್ರೆ ಯಲ್ಲಿ ಬಂದೋ ಬಸ್ತ್ ಬಿಗಿಗೊಳಿಸಲಾ ಗಿದೆ. ವಿಷ ಪ್ರಾಶನದ ಬಗ್ಗೆ ವದಂತಿಗಳು ಹಬ್ಬಿದ್ದರೂ, ಗಂಭೀ ರ ಆರೋಗ್ಯ ಸಮಸ್ಯೆಯಿಂದ ಎರಡು ದಿನಗಳ ಹಿಂದೆಯೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂಬ ಅಂಶ ಈಗ ಬಲವಾಗತೊಡಗಿದೆ.
ಜತೆಗೆ ಆತ ಚಿಕಿತ್ಸೆ ಪಡೆಯುತ್ತಿರುವ ವಿಭಾಗವು ಪೊಲೀಸರ ಭದ್ರಕೋಟೆ ಯಾಗಿ ಮಾರ್ಪಾಡಾಗಿದ್ದು, ಚಿಕಿತ್ಸೆ ನೀಡುವ ವೈದ್ಯರು, ನರ್ಸ್ ಮತ್ತು ನಿಗದಿತ ಆಸ್ಪತ್ರೆ ಸಿಬಂದಿ, ಕುಟುಂಬ ಸದಸ್ಯರನ್ನು ಮಾತ್ರ ವಾರ್ಡ್ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಜತೆಗೆ ಇಡೀ ಮಹಡಿಯಲ್ಲಿ ಆತ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದು, ಮಹ ಡಿಗೆ ಇತ ರರ ಪ್ರವೇಶ ನಿರ್ಬಂಧಿಸಲಾಗಿದೆ.
ಮುಂಬಯಿ ಪೊಲೀಸರು ಕೂಡ ಪಾತಕಿ ದಾವೂದ್ ಇಬ್ರಾಹಿಂ ಆರೋಗ್ಯ ಸ್ಥಿತಿ ಏನಾಗಿದೆ ಎಂಬುದರ ಬಗ್ಗೆ ಆತನ ಬಂಧುಗಳಾಗಿರುವ ಅಲಿಶಾ ಪಾರ್ಕರ್ ಮತ್ತು ಸಾಜಿದ್ ವಾಗ್ಲೆ ಎಂಬವರ ಮೂಲಕ ಮಾಹಿತಿ ಸಂಗ್ರಹಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಈ ನಡುವೆ ದಾವೂದ್ ಕೊರೊನಾ ಸೋಂಕಿನಿಂದ, ಹೃದಯಾಘಾತದಿಂದ ಅಸುನೀಗಿರುವ ಬಗ್ಗೆ ವದಂತಿಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ.
ದಾವೂದ್‌ಗೆ ಏನೂ ಆಗಿಲ್ಲ ಎಂದ ಛೋಟಾ ಶಕೀಲ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮೃತಪಟ್ಟಿದ್ದಾನೆಂಬ ಸುದ್ದಿ ಕೇವಲ ವದಂತಿ ಅಷ್ಟೇ ಎಂದು ಆತನ ಸಹಚರ ಛೋಟಾ ಶಕೀಲ್ ಮಾಧ್ಯಮಗಳಿಗೆ ತಿಳಿಸಿದ್ದಾನೆ. “ಸುದ್ದಿಗಳನ್ನು ನೋಡಿ ನಾನೂ ಭಯ ಭೀತನಾಗಿದ್ದೆ. ಆದರೆ ಅಂಥದ್ದೇನೂ ನಡೆದಿಲ್ಲ, ದಾವೂದ್ ಸುರಕ್ಷಿತನಾಗಿ, ಆರೋಗ್ಯಪೂರ್ಣನಾಗಿದ್ದಾನೆ’ ಎಂದು ಆತ ಸಿಎನ್‌ಎನ್ ನ್ಯೂಸ್ 18ಗೆ ಮಾಹಿತಿ ನೀಡಿದ್ದಾನೆ.