Advertisement

ಪುತ್ತೂರಿನಲ್ಲಿ ಪಾಕ್‌ ಧ್ವಜ ಸುಟ್ಟು ಪ್ರತಿಭಟನೆ

01:50 PM Dec 30, 2017 | Team Udayavani |

ಪುತ್ತೂರು: ಕುಲಭೂಷಣ್‌ ಜಾದವ್‌ ಪತ್ನಿಯ ಮಾಂಗಲ್ಯ, ಬಿಂದಿ ತೆಗೆದಿರಿಸಿ ಗಾಜಿನ ಮುಂದೆ ಪತಿ ಜತೆ ಮಾತನಾಡಲು ಬಿಟ್ಟ ಪಾಕಿಸ್ಥಾನ, ಭಾರತೀಯ ನಂಬಿಕೆಯ ಮೇಲೆ ದಾಳಿ ಮಾಡುವ ಕೆಲಸ ಮಾಡಿದೆ ಎಂದು ಬಜರಂಗದಳ ವಿಭಾಗ ಸಂಚಾಲಕ ಮುರಳೀಕೃಷ್ಣ ಹಸಂತಡ್ಕ ಹೇಳಿದರು. ಶುಕ್ರವಾರ ಸಂಜೆ ಪುತ್ತೂರು ಬಸ್‌ ನಿಲ್ದಾಣದ ಬಳಿಕ ಬಜರಂಗದಳ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.

Advertisement

ಕುಲಭೂಷಣ್‌ ಜಾದವ್‌ ಅಕಸ್ಮಾತ್ತಾಗಿ ಪಾಕಿಸ್ಥಾನದಲ್ಲಿ ಸೆರೆ ಸಿಕ್ಕಿದ್ದಾರೆ. ಇವರು ಯಾವುದೇ ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂದು ಅಂತಾರಾಷ್ಟ್ರೀಯ ನ್ಯಾಯಾಲಯ ಹೇಳಿದ್ದು, ಬಿಡುಗಡೆ ಮಾಡುವಂತೆ ಸೂಚಿಸಿದೆ. ಆದರೆ ಇದನ್ನು ಪಾಕಿಸ್ಥಾನ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಭೂಪಟದಿಂದ ಪಾಕಿಸ್ಥಾನದ ಹೆಸರನ್ನು ಕಿತ್ತು ಹಾಕುವಷ್ಟು ಸಾಮರ್ಥ್ಯ ಭಾರತಕ್ಕಿದೆ. ಇದನ್ನು ಪಾಕಿಸ್ಥಾನ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು. ಕುಲಭೂಷಣ್‌ ಜಾದವ್‌ ಅವರ ಪತ್ನಿ ಹಾಗೂ ತಾಯಿಯನ್ನು ಅವಮಾನ ಮಾಡಿಸಿದ ಕ್ರಮ ಮರುಕಳಿಸದಂತೆ ಎಚ್ಚರಿಕೆ ಕೈಗೊಳ್ಳಬೇಕಾಗಿದೆ ಎಂದು ಎಚ್ಚರಿಸಿದರು.

ಮಾಂಗಲ್ಯ ಹಾಗೂ ಬಿಂದಿ ಭಾರತೀಯ ಸಂಸ್ಕೃತಿಯ ಪ್ರತಿಬಿಂಬ. ಸ್ವಾಭಿಮಾನದ ಸಂಕೇತವೂ ಹೌದು. ಜಾದವ್‌ ಅವರನ್ನು ಭೇಟಿ ಮಾಡಲು ತೆರಳುವಾಗ ಬಿಂದಿ, ಮಾಂಗಲ್ಯ ತೆಗೆಸಿ, ಕನ್ನಡಿ ಮುಂದಿನಿಂದ ಮಾತನಾಡುವಂತೆ ಸೂಚಿಸಲಾಗಿದೆ. ತಾಯಂದಿರನ್ನು ಯಾವ ರೀತಿಯಾಗಿ ನೋಡಿಕೊಳ್ಳಬೇಕು ಎನ್ನುವುದನ್ನು ವಿಶ್ವಕ್ಕೆ ಹೇಳಿಕೊಟ್ಟ
ದೇಶ ಭಾರತ. ಮಾನವೀಯತೆಯನ್ನೂ ಮರೆತು, ಪಾಕ್‌ ಅವಮಾನ ಮಾಡಿದೆ. ಇದು ಕುಲಭೂಷಣ್‌ ಜಾದವ್‌ ಅವರ ಕುಟುಂಬಕ್ಕೆ ಆದ ಅವಮಾನವಲ್ಲ ಇಡೀ ದೇಶಕ್ಕೆ ಆದ ಅವಮಾನ ಎಂದರು.

ಗಡಿಯಲ್ಲಿ ಖ್ಯಾತೆ ತೆಗೆಯುವ ಪಾಕಿಸ್ತಾನಕ್ಕೆ ಸರ್ಜಿಕಲ್‌ ಸ್ಟ್ರೈಕ್‌ ಮೂಲಕ ಭಾರತ ಈಗಾಗಲೇ ಉತ್ತರ ಕೊಟ್ಟಿದ್ದೇವೆ.
ಮತ್ತೂಮ್ಮೆ ಸರ್ಜಿಕಲ್‌ ಸ್ಟ್ರೈಕ್‌ ಮೂಲಕ ಕೊನೆ ಎಚ್ಚರಿಕೆಯನ್ನು ನೀಡಲಾಗಿದೆ. ಇದೀಗ ಭಾರತಕ್ಕೆ ಸ್ವಾಭಿಮಾನಿ ನಾಯಕ ಸಿಕ್ಕಿದ್ದಾನೆ. ಭಾರತ ಇದೀಗ ಜಗದ್ಗುರು ಆಗುವತ್ತ ಹೆಜ್ಜೆ ಇಡುತ್ತಿದೆ. ಇದನ್ನು ಸಹಿಸದ ಪಾಕ್‌ ಬೇರೆ ದಾರಿ ಕಾಣದೇ, ನಂಬಿಕೆಗಳ ಮೇಲೆ ಸವಾರಿ ಮಾಡುವ ಕೆಲಸದಲ್ಲಿ ನಿರತವಾಗಿದೆ ಎಂದರು.

ವಿಹಿಂಪ ಜಿಲ್ಲಾ ಕಾರ್ಯದರ್ಶಿ ಸತೀಶ್‌ ಭಟ್‌ ಬಿ.ಎಸ್‌., ಪುತ್ತೂರು ಪ್ರಖಂಡ ಅಧ್ಯಕ್ಷ ಜನಾರ್ದನ ಬೆಟ್ಟ, ವಿಹಿಂಪ ಜಿಲ್ಲಾ
ಕಾರ್ಯದರ್ಶಿ ಅಜಿತ್‌ ರೈ ಹೊಸಮನೆ, ಬಜರಂಗದಳ ಪುತ್ತೂರು ಪ್ರಖಂಡ ಸಹ ಸಂಚಾಲಕ ಹರೀಶ್‌ ದೋಳ್ಪಾಡಿ, ಜಿಲ್ಲಾ ಸಹಸಂಚಾಲಕ ಶ್ರೀಧರ್‌ ತೆಂಕಿಲ, ನಗರ ಸಂಚಾಲಕ ಹರಿಪ್ರಸಾದ್‌ ರೆಂಜಾಳ, ಪ್ರಖಂಡ ಸಂಚಾಲಕ ನಿತೀನ್‌ ನಿಡ್ಪಳ್ಳಿ , ಮುಖಂಡರಾದ ಮೋಹಿನಿ ದಿವಾಕರ್‌, ಅರ್ಪಣಾ ಶಿವಾನಂದ್‌, ಜಯಂತಿ ನಾಯಕ್‌, ಪ್ರಭಾ ಹರೀಶ್‌, ಮಾಧವ ಪೂಜಾರಿ, ಬಾಲಚಂದ್ರ ಸೂತ್ರಬೆಟ್ಟು, ಜಿತೇಶ್‌ ಬಲಾ°ಡ್‌, ಕಿರಣ್‌ ಕುಮಾರ್‌, ಪ್ರಶಾಂತ್‌, ಸಹಜ್‌ ರೈ ಉಪಸ್ಥಿತರಿದ್ದರು.

Advertisement

ಪಾಕ್‌ ಧ್ವಜಕ್ಕೆ ಬೆಂಕಿ
ಪ್ರತಿಭಟನೆಯ ಕೊನೆಗೆ ಪಾಕಿಸ್ಥಾನದ ಧ್ವಜಕ್ಕೆ ಬೆಂಕಿ ಹಾಕಿ ಸುಡಲಾಯಿತು. ಪಾಕಿಸ್ಥಾನದ ವಿರುದ್ಧ ಧಿಕ್ಕಾರ ಕೂಗಿ,
ಘೋಷಣೆ ಹಾಕಲಾಯಿತು. ಪ್ರತಿಭಟನೆಯ ಪ್ರಾರಂಭದಲ್ಲೇ ಪಾಕ್‌ ಧ್ವಜವನ್ನು ನೆಲದಲ್ಲಿ ಹಾಕಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next