ಕರಾಚಿ: ಯಾರ ಅದೃಷ್ಟ ಹೇಗೆ ಇರುತ್ತೆ ಅಂತ ಹೇಳಲು ಸಾಧ್ಯವಿಲ್ಲ, ಏನೂ ಇಲ್ಲದವನು ರಾತ್ರಿ ಬೆಳಗಾಗುವುದರೊಳಗೆ ಶ್ರೀಮಂತನಾದ ಅದೆಷ್ಟೋ ಸಂಗತಿಗಳು ಇವೆ ಅದೇ ರೀತಿ ಪಾಕಿಸ್ತಾನದ ಕರಾಚಿಯಲ್ಲಿ ಮೀನುಗಾರನೊಬ್ಬ ರಾತ್ರಿ ಬೆಳಗಾಗುವುದರೊಳಗೆ ಕೋಟ್ಯಾಧಿಪತಿಯಾಗಿದ್ದಾನೆ.
ಅಂದಹಾಗೆ ಕೇವಲ ಮೀನು ಹಿಡಿದ ಎಲ್ಲರೂ ಒಂದೇ ದಿನದಲ್ಲಿ ಕೋಟ್ಯಾಧಿಪತಿಗಳು ಆಗುತ್ತಿದ್ದರೆ ಇಷ್ಟು ಹೊತ್ತಿಗೆ ಅದೆಷ್ಟೋ ಮಂದಿ ಕೋಟ್ಯಾಧಿಪತಿಗಳು ಆಗುತ್ತಿದ್ದರು ಆದರೆ ಈ ಮೀನುಗಾರನ ಅದೃಷ್ಟ ಬೇರೆ ರೀತಿಯಾಗಿತ್ತು.
ಬಡ ಕುಟುಂಬದಿಂದ ಬಂದು ಮೀನುಗಾರಿಕಾ ವೃತ್ತಿಯನ್ನೇ ಮಾಡಿಕೊಂಡು ಬಂದಿರುವ ಹಾಜಿ ಬಲೋಚ್ ಮತ್ತು ಅವರ ಕೆಲಸಗಾರರು ಸೋಮವಾರ ಅರಬ್ಬಿ ಸಮುದ್ರ ಮೀನುಗಾರಿಕೆಗೆ ತೆರಳಿದ ವೇಳೆ ಗೋಲ್ಡನ್ ಫಿಶ್ ಅಥವಾ “ಸೋವಾ” ಎಂದು ಕರೆಯಲ್ಪಡುವ ಮೀನುಗಳು ಸಿಕ್ಕಿದೆ.
“ಇದನ್ನು ಶುಕ್ರವಾರ ಬೆಳಗ್ಗೆ ಕರಾಚಿ ಬಂದರಿನಲ್ಲಿ ಹರಾಜು ಹಾಕಿದ್ದಾರೆ ಈ ವೇಳೆ ಮೀನು 70 ಮಿಲಿಯನ್ ರೂಪಾಯಿಗಳಿಗೆ ಮಾರಾಟವಾಯಿತು” ಎಂದು ಮೀನುಗಾರರ ಮುಬಾರಕ್ ಖಾನ್ ಹೇಳಿದ್ದಾರೆ.
ಸೋವಾ ಮೀನನ್ನು ಬೆಲೆಬಾಳುವ ಮೀನುಗಳು ಮತ್ತು ಈ ಮೀನುಗಳು ಸಿಗುವುದೂ ಅತಿ ಅಪರೂಪವೆಂದು ಹೇಳಲಾಗಿದೆ ಈ ಮೀನಿನಲ್ಲಿ ಕೆಲ ಕಾಯಿಲೆಗಳನ್ನು ಗುಣಪಡಿಸುವ ಔಷಧೀಯ ಗುಣಗಳನ್ನು ಹೊಂದಿವೆ ಎಂದು ಹೇಳಲಾಗುತ್ತದೆ. ಅಷ್ಟು ಮಾತ್ರವಲ್ಲದೆ ಮೀನಿನ ದಾರದಂತಹ ವಸ್ತುವನ್ನು ಶಸ್ತ್ರಚಿಕಿತ್ಸಾ ವಿಧಾನಗಳಲ್ಲಿಯೂ ಬಳಸಲಾಗುತ್ತದೆ ಎಂದು ಹೇಳಲಾಗಿದೆ.
ಒಂದು ಮೀನು ಸಾಮಾನ್ಯವಾಗಿ 20 ರಿಂದ 40 ಕೆಜಿ ತೂಕದ ಇದ್ದು 1.5 ಮೀಟರ್ ಉದ್ದ ಇರುತ್ತದೆ, ಈ ಮೀನುಗಳಿಗೆ ಪೂರ್ವ ಏಷ್ಯಾದ ದೇಶಗಳಲ್ಲಿ ಹೆಚ್ಚು ಬೇಡಿಕೆಯಿದೆ. ಒಂದು ಮೀನು 7 ಮಿಲಿಯನ್ ರೂಪಾಯಿಗೆ ಮಾರಾಟವಾಗಿದೆ. ಸಂತಾನೋತ್ಪತ್ತಿ ಸಮಯದಲ್ಲಿ ಮಾತ್ರ ಮೀನುಗಳು ಕರಾವಳಿಯ ಸಮೀಪಕ್ಕೆ ಬರುತ್ತವೆ ಎನ್ನಲಾಗಿದೆ.
ಈ ಕುರಿತು ಹೇಳಿಕೆ ನೀಡಿರುವ ಹಾಜಿ ಮೀನು ಹರಾಜಿನಲ್ಲಿ ಸಿಕ್ಕಿದ ಹಣವನ್ನು ತನ್ನ ಏಳು ಸಿಬಂದಿಗಳೊಂದಿಗೆ ಹಂಚಿಕೊಳ್ಳುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: Gmail Accuonts: ಮುಂದಿನ ತಿಂಗಳು ಗೂಗಲ್ ನಿಂದ ಲಕ್ಷಾಂತರ ಜಿ ಮೇಲ್ ಖಾತೆ ರದ್ದಾಗಬಹುದು!