Advertisement

ಪಾಕ್‌ ಡ್ರೋಣ್‌ ಹೊಡೆದು ಉರುಳಿಸಿದರೆ 1 ಲಕ್ಷ ಇನಾಮು : ಭಾರತೀಯ ಸೇನೆ ನಿರ್ಧಾರ

08:10 PM Dec 30, 2022 | Team Udayavani |

ನವದೆಹಲಿ: ಭಾರತ-ಪಾಕಿಸ್ತಾನದ ಗಡಿಯಲ್ಲಿ ಪಾಕ್‌ ಡ್ರೋನ್‌ ಹೊಡೆದುರುಳಿಸುವ ಗಡಿ ಭದ್ರತಾ ಪಡೆ(ಬಿಎಸ್‌ಎಫ್)ಯ ತಂಡಕ್ಕೆ ಒಂದು ಲಕ್ಷ ರೂ. ನಗದು ಬಹುಮಾನ ನೀಡಲು ಸೇನೆ ನಿರ್ಧರಿಸಿದೆ.

Advertisement

ಜತೆಗೆ ಗಡಿಯಲ್ಲಿ ಜಾಮರ್‌ಗಳನ್ನು, ಸ್ಪೂಫ‌ರ್ಗಳನ್ನು ಅಳವಡಿಸಲು ಹಾಗೂ ಗಸ್ತು ಹೆಚ್ಚಿಸಲು ಭಾರತೀಯ ಸೇನೆ ಮುಂದಾಗಿದೆ. ಪಾಕಿಸ್ತಾನದಿಂದ ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರ ಮತ್ತು ಮಾದಕ ವಸ್ತುಗಳು ಸಾಗಿಸುತ್ತಿರುವ ಪ್ರಕರಣಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಈ ಕ್ರಮ ಕೈಗೊಂಡಿದೆ.

ಇದೇ ಮಾದರಿಯ ಬಹುಮಾನ ಘೋಷಣೆಯನ್ನು ಏಪ್ರಿಲ್‌ನಲ್ಲಿ ಜಾಲಂಧರ್‌ ಮೂಲದ ಪಂಜಾಬ್‌ ಫ್ರಾಂಟಿಯರ್‌ನ ಯೋಧರು ಮಾಡಿದ್ದರು. ಈ ವರ್ಷದ ಡಿ.25ರ ವರೆಗೆ ಪಂಜಾಬ್‌ಗ ಹೊಂದಿಕೊಂಡು ಇರುವ ಗಡಿಯಲ್ಲಿ 22 ಡ್ರೋನ್‌ಗಳನ್ನು ಹೊಡೆದು ಉರುಳಿಸಿದ್ದಾರೆ. 2020ರಲ್ಲಿ ಜಮ್ಮುವಿನಲ್ಲಿ ಒಂದನ್ನು ಹೊಡೆದು ಹಾಕಲಾಗಿತ್ತು. ಜಮ್ಮು, ಪಂಜಾಬ್‌, ರಾಜಸ್ಥಾನ, ಗುಜರಾತ್‌ಗಳ ಮೂಲಕ ಭಾರತ ಪಾಕಿಸ್ತಾನದ ಜತೆಗೆ 2,289 ಕಿಮೀ ಗಡಿ ಪ್ರದೇಶವನ್ನು ಹೊಂದಿದೆ.

ಇದನ್ನೂ ಓದಿ : ಚಾಮರಾಜನಗರ: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಅಪರಾಧಿಗೆ 20 ವರ್ಷ ಶಿಕ್ಷೆ

Advertisement

Udayavani is now on Telegram. Click here to join our channel and stay updated with the latest news.

Next