ಇಸ್ಲಮಾಬಾದ್ : ಸುಳ್ಳು ಅಫಿಡವಿಟ್ ಪ್ರಕರಣದಲ್ಲಿ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ ವಿಶೇಷ ಕೋರ್ಟ್ ಸೋಮವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಅಕ್ಟೋಬರ್ 31 ರ ವರೆಗೆ ಜಾಮೀನು ಮಂಜೂರು ಮಾಡಲಾಗಿದೆ. ನಿಷೇಧಿತ ಹಣಕಾಸು ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೆ ಸುಳ್ಳು ಅಫಿಡವಿಟ್ ಸಲ್ಲಿಸಿದ ಆರೋಪದ ಮೇಲೆ ಇಮ್ರಾನ್ ಖಾನ್ ಮತ್ತು ಅವರ ಪಕ್ಷದ ನಾಯಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ : 300 ಕಿಮೀ ಸ್ಪೀಡ್… ಫೇಸ್ ಬುಕ್ ಲೈವ್; ಬಿಎಂಡಬ್ಲ್ಯು ನಾಗಾಲೋಟ…ನಾಲ್ವರ ದೇಹ ಛಿದ್ರ, ಛಿದ್ರ!
ಫೆಡರಲ್ ಇನ್ವೆಸ್ಟಿಗೇಶನ್ ಏಜೆನ್ಸಿ ಕಳೆದ ವಾರ 69ವರ್ಷದ ಖಾನ್ ಮತ್ತು ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಇತರ ಹಿರಿಯ ನಾಯಕರ ವಿರುದ್ಧ ಪ್ರಕರಣ ದಾಖಲಿಸಿತ್ತು.
ಎಫ್‌ಐಆರ್ ಪ್ರಕಾರ, ವೂಟನ್ ಕ್ರಿಕೆಟ್ ಲಿಮಿಟೆಡ್‌ನ ಮಾಲೀಕ ಆರಿಫ್ ಮಸೂದ್ ನಖ್ವಿ, ಖಾನ್ ಅವರ ಪಕ್ಷದ ಹೆಸರಿನಲ್ಲಿ ನೋಂದಾಯಿಸಲಾದ ಬ್ಯಾಂಕ್ ಖಾತೆಗೆ ಅಕ್ರಮ ಹಣವನ್ನು ವರ್ಗಾಯಿಸಿದ್ದಾರೆ. ಮಾಜಿ ಪ್ರಧಾನಿ ವಿಶೇಷ ನ್ಯಾಯಾಲಯದಲ್ಲಿ ಸೋಮವಾರ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು, ಅಲ್ಲಿ ನ್ಯಾಯಾಧೀಶ ರಾಜಾ ಆಸಿಫ್ ಮೆಹಮೂದ್ ವಾದವನ್ನು ಆಲಿಸಿದ ನಂತರ 100,000 ರೂ. ನ ಶ್ಯೂರಿಟಿ ಬಾಂಡ್ ಮೇಲೆ ಅಕ್ಟೋಬರ್ 13 ರವರೆಗೆ ಮಧ್ಯಂತರ ಜಾಮೀನು ನೀಡಿದ್ದರು.