Advertisement

ಪ್ರಖ್ಯಾತ ಲೇಖಕ, ಅಂಕಣಕಾರ ತಾರೆಕ್ ಫತಾಹ್ ವಿಧಿವಶ

08:57 PM Apr 24, 2023 | Team Udayavani |

ಒಟ್ಟಾವಾ: ಖ್ಯಾತ ಪಾಕಿಸ್ಥಾನಿ-ಕೆನಡಾ ಅಂಕಣಕಾರ ಮತ್ತು ಲೇಖಕ ತಾರೆಕ್ ಫತಾಹ್ ಅವರು ಕ್ಯಾನ್ಸರ್‌ನೊಂದಿಗೆ ಸುದೀರ್ಘ ಹೋರಾಟದ ನಂತರ 73 ನೇ ವಯಸ್ಸಿನಲ್ಲಿ ಸೋಮವಾರ ನಿಧನ ಹೊಂದಿದರು ಎಂದು ಅವರ ಪುತ್ರಿ ನತಾಶಾ ಫತಾಹ್ ಹೇಳಿದ್ದಾರೆ.

Advertisement

ನತಾಶಾ ತನ್ನ ತಂದೆಯ ನಿಧನದ ಸುದ್ದಿಯನ್ನು ಟ್ವಿಟರ್‌ ನಲ್ಲಿ “ಪಂಜಾಬ್‌ನ ಸಿಂಹ, ಹಿಂದೂಸ್ಥಾನದ ಮಗ ಮತ್ತು ಕೆನಡಾದ ಪ್ರೇಮಿ” ಎಂದು ಬಣ್ಣಿಸಿದ್ದಾರೆ. ಫತಾಹ್ ಸತ್ಯದ ವಾಗ್ಮಿ, ನ್ಯಾಯಕ್ಕಾಗಿ ಹೋರಾಟಗಾರ ಮತ್ತು ತುಳಿತಕ್ಕೊಳಗಾದವರ ಧ್ವನಿ ಎಂದು ಅವರು ಹೇಳಿದರು.

ಫತಾಹ್ ಅವರು ಇಸ್ಲಾಂ ಧರ್ಮದ ಬಗ್ಗೆ ಪ್ರಗತಿಪರ ದೃಷ್ಟಿಕೋನಗಳು ಮತ್ತು ಪಾಕಿಸ್ಥಾನದ ಬಗ್ಗೆ ಅವರ ಬಲವಾದ ನಿಲುವುಗಳಿಗೆ ಹೆಸರುವಾಸಿಯಾಗಿದ್ದರು. ಅವರು ಭಾರತದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ಬೆಂಬಲಿಸುತ್ತಿದ್ದರು.

1949 ರಲ್ಲಿ ಪಾಕಿಸ್ಥಾನದಲ್ಲಿ ಜನಿಸಿದ ಫತಾಹ್ 1980 ರ ದಶಕದ ಆರಂಭದಲ್ಲಿ ಕೆನಡಾಕ್ಕೆ ವಲಸೆ ಹೋಗಿದ್ದರು. ರಾಜಕೀಯ ಕಾರ್ಯಕರ್ತ, ಪತ್ರಕರ್ತ ಮತ್ತು ದೂರದರ್ಶನ ನಿರೂಪಕರಾಗಿ ಕೆಲಸ ಮಾಡಿದ್ದರು. ಅವರು ತಮ್ಮ ವೃತ್ತಿಜೀವನದುದ್ದಕ್ಕೂ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next