Advertisement

ಉಗ್ರ ಹಫೀಜ್‌ನ ತೆಹ್ರೀಕ್‌ ಸಂಘಟನೆಗೆ ಪಾಕ್‌ ನಿಷೇಧ

03:45 AM Jul 02, 2017 | Harsha Rao |

ಇಸ್ಲಾಮಾಬಾದ್‌: ಉಗ್ರರನ್ನು ಪೋಷಿಸಿ, ಬೆಳೆಸುತ್ತಿರುವ ಪಾಕಿಸ್ಥಾನವು ಶನಿವಾರ ಉಗ್ರ ಹಫೀಜ್‌ ಸಯೀದ್‌ನ ಜಮಾತ್‌-ಉದ್‌-ದಾವಾ ಸಂಘಟನೆಯ ಅಂಗಸಂಸ್ಥೆಯಾದ ತೆಹ್ರೀಕ್‌-ಇ-ಆಜಾದಿ ಜಮ್ಮು ಆ್ಯಂಡ್‌ ಕಾಶ್ಮೀರ್‌ಗೆ ನಿಷೇಧ ಹೇರಿದೆ. ಉಗ್ರ ಸಂಘಟನೆಗಳು ಹಾಗೂ ಹಣಕಾಸು ನೆರವು ನೀಡುವವರ ವಿರುದ್ಧ ಕ್ರಮ ಕೈಗೊಳ್ಳಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಒತ್ತಡ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

Advertisement

ಉಗ್ರ ಸಯೀದ್‌ನನ್ನು ಲಾಹೋರ್‌ನಲ್ಲಿ 90 ದಿನಗಳ ಕಾಲ ಗೃಹಬಂಧನದಲ್ಲಿ ಇರಿಸಿದ ಬೆನ್ನಲ್ಲೇ ಅಂದರೆ ಫೆಬ್ರವರಿ 5ರಂದು ಈ ಸಂಘಟನೆಯು ಪಾಕಿಸ್ಥಾನದಾದ್ಯಂತ ಬ್ಯಾನರ್‌ಗಳನ್ನು ಹಿಡಿದು ರ್ಯಾಲಿಗಳನ್ನು ನಡೆಸಿತ್ತು. ಇದಕ್ಕೂ ಕೆಲ ದಿನಗಳ ಮೊದಲು ಸಯೀದ್‌, ತಾನು ತೆಹ್ರೀಕ್‌-ಇ-ಆಜಾದಿ ಎಂಬ ಹೊಸ ಸಂಘಟನೆಯನ್ನು ಹುಟ್ಟುಹಾಕುವುದಾಗಿ ಘೋಷಿಸಿದ್ದ.

ಪಾಕಿಸ್ಥಾನದಲ್ಲಿ ಸದ್ಯ ಜೈಶ್‌, ಅಲ್‌ಖೈದಾ, ತೆಹ್ರೀಕ್‌-ಇ-ತಾಲಿಬಾನ್‌, ಜೆಯುಡಿಯ ಸಶಸ್ತ್ರ ಘಟಕ ಲಷ್ಕರ್‌ಸೇರಿದಂತೆ 64 ಉಗ್ರ ಸಂಘಟನೆಗಳನ್ನು “ಬಹಿಷ್ಕೃತ ಪಟ್ಟಿ’ಗೆ ಸೇರಿಸಲಾಗಿದೆ. ಇತ್ತೀಚೆಗಷ್ಟೇ ನಡೆದ ಶಾಂಘೈ ಸಹಕಾರ ಶೃಂಗದಲ್ಲಿ ಮಾತನಾಡಿದ್ದ ಭಾರತವು, ಉಗ್ರರಿಗೆ ನೆರವು ನೀಡುವವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next