Advertisement

ಪಾಕ್‌ ದಾಳಿ: ಒಬ್ಬ ಯೋಧ, ಇಬ್ಬರು ನಾಗರಿಕರ ಸಾವು

10:41 AM Jan 20, 2018 | |

ಜಮ್ಮು: ಗಡಿಯಲ್ಲಿ ಸತತ ಎರಡನೇ ದಿನವೂ ಪಾಕಿಸ್ಥಾನದ ಅಪ್ರಚೋದಿತ ಗುಂಡಿನ ದಾಳಿ ಮುಂದುವರಿದಿದೆ. ಜಮ್ಮು ಮತ್ತು ಕಾಶ್ಮೀರದ ಸಾಂಬಾ ವಲಯದಲ್ಲಿ ಶುಕ್ರವಾರ ಪಾಕಿಸ್ಥಾನ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಬಿಎಸ್‌ಎಫ್ಯೋಧ ಹುತಾತ್ಮನಾಗಿ, ಇಬ್ಬರು ನಾಗರಿಕರೂ ಮೃತಪಟ್ಟಿದ್ದಾರೆ.

Advertisement

ಶೆಲ್‌ ದಾಳಿಯಿಂದಾಗಿ ಮಧ್ಯಾಹ್ನ ಗಾಯ ಗೊಂಡಿದ್ದ ಬಿಎಸ್‌ಎಫ್ನ ಹೆಡ್‌ಕಾನ್‌ಸ್ಟೆಬಲ್‌ ಸಂಜೆ ವೇಳೆಗೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು. ಜಮ್ಮು ಮತ್ತು ಸಾಂಬಾ ಜಿಲ್ಲೆಗಳಲ್ಲಿ ಗಡಿ ಗ್ರಾಮಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದ್ದು, ಪರಿಣಾಮ ಇಬ್ಬರು ನಾಗರಿಕರು ಸಾವಿಗೀಡಾದರೆ, ಮೂವರು ಗಾಯಗೊಂಡಿದ್ದಾರೆ. 

ಭೇಟಿ ಇಲ್ಲ: ಮುಂದಿನ ವಾರ ದಾವೋಸ್‌ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ಶೃಂಗದ ವೇಳೆ ಪ್ರಧಾನಿ ಮೋದಿ- ಪಾಕ್‌ ಪಿಎಂ ಶಾಹಿದ್‌ ಖಾನ್‌ ಅಬ್ಟಾಸಿ ದ್ವಿಪಕ್ಷೀಯ ಮಾತುಕತೆ ನಡೆಸುವುದಿಲ್ಲ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next