ಜಮ್ಮು: ಗಡಿಯಲ್ಲಿ ಅತಿರೇಕದ ವರ್ತನೆ ತೋರುತ್ತಿರುವ ಪಾಕಿಸ್ಥಾನ ಮಂಗಳವಾರ ಒಂದೇ ದಿನ 4 ಬಾರಿ ಕದನ ವಿರಾಮ ಉಲ್ಲಂ ಸಿದೆ. ಪಾಕಿಸ್ಥಾನದ ದುಂಡಾವರ್ತನೆಯಿಂದ ಗಡಿ ಗ್ರಾಮದ ಜನರು ಭಯಭೀತರಾಗಿದ್ದಾರೆ. ಇದೇ ವೇಳೆ, ನಿರಂತರ ಶೆಲ್ ದಾಳಿಯಿಂದಾಗಿ ನೌಶೇರಾ ವಲಯದಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸರಕಾರಿ ಶಾಲೆಯೊಂದರಲ್ಲಿ ಸಿಲುಕಿದ್ದು, ವಿಷಯ ತಿಳಿಯುತ್ತಿದ್ದಂತೆಯೇ ಅಲ್ಲಿಗೆ ಧಾವಿಸಿದ ಯೋಧರು 12 ಮಂದಿ ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ.
ರಜೌರಿ, ಪೂಂಛ… ಜಿಲ್ಲೆಯಲ್ಲಿ ಗಡಿಯುದ್ದಕ್ಕೂ ಪಾಕ್ ಪಡೆ ಗುಂಡಿನ ದಾಳಿ ನಡೆಸಿದ್ದು,ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.
ಬುಲೆಟ್‌ಪ್ರೂಫ್ ವಾಹನದಲ್ಲಿ ಕರೆತಂದರು: ನೌಶೇರಾದ ಸೆಹಾರ್‌ನ ಶಾಲೆಯಲ್ಲಿ 50 ಮಕ್ಕಳು ಸೋಮವಾರ ಸಿಲುಕಿಕೊಂಡಿದ್ದರು. ಈ ಪೈಕಿ 12 ಮಂದಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳೂ ಇದ್ದರು. ಶೆಲ್‌ಗಳು ನಿರಂತರವಾಗಿ ಬಂದು ಬೀಳುತ್ತಿದ್ದ ಕಾರಣ, ಹೊರಬರ ಲಾ ಗದೇ ಮಕ್ಕಳು ಒಳಗೇ ಉಳಿಯಬೇಕಾಯಿತು. 12 ಮಕ್ಕಳನ್ನು 3 ಬುಲೆಟ್‌ಪ್ರೂಫ್ ವಾಹನಗಳಿಂದ ಕರೆತರಲಾ ಯಿತು. ಶೆಲ್ಲಿಂಗ್‌ನ ತೀವ್ರತೆ ಕಡಿಮೆಯಾದ ಬಳಿಕ ಎಲ್ಲ ವಿದ್ಯಾರ್ಥಿಗಳನ್ನೂ ರಕ್ಷಿಸಲಾಗುವುದು ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.
ನುಸುಳಲು ಯತ್ನಿಸಿದ ಉಗ್ರನ ಹತ್ಯೆ: ಗುಜೇರ್ ವಲಯದಲ್ಲಿ ಒಳನುಸುಳಲು ಯತ್ನಿಸುತ್ತಿದ್ದ ಉಗ್ರನೊಬ್ಬನನ್ನು ಸೇನಾಪಡೆ ಸೋಮವಾರ ಸದೆಬಡಿದಿದೆ.
ಮೇಜರ್‌ನನ್ನು ಗುಂಡಿಕ್ಕಿ ಕೊಂದ ಯೋಧ
ಮೊಬೈಲ್ ಬಳಕೆ ಮಾಡಬೇಡಿ ಎಂದಿದ್ದಕ್ಕೆ ಸೇನೆಯ ಮೇಜರ್‌ವೊಬ್ಬರನ್ನು ಯೋಧನೇ ಗುಂಡಿಕ್ಕಿ ಕೊಂದ ಘಟನೆ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆದಿದೆ. ಸೂಕ್ಷ್ಮ ಪ್ರದೇಶದಲ್ಲಿ ಮೊಬೈಲ್ ಬಳಕೆ ಮಾಡಿದ್ದಕ್ಕೆ ಮೇಜರ್ ಶಿಖರ್ ಥಾಪಾ ಅವರು ಯೋಧ ಕದಿರೇಶನ್ ಜಿ. ಅವರನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ಯೋಧನ ಕೈಯಿಂದ ಮೊಬೈಲನ್ನು ಕಸಿದುಕೊಂಡಿದ್ದಾರೆ. ಆಕ್ರೋಶಗೊಂಡ ಕದಿರೇಶನ್ ಅವರು ಥಾಪಾ ಅವರ ಮೇಲೆ 5 ಸುತ್ತು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ .