Advertisement
“ಕ್ಯಾಂಪಸ್ ಟು ಕಮ್ಯೂನಿಟಿ’ ಬಳಗದ ಸದಸ್ಯರು “ಸ್ಕೂಲ್ ಬೆಲ್’ ಹೆಸರಿನಲ್ಲಿ ಈ ಕಾರ್ಯ ನಡೆಸುತ್ತಿದ್ದಾರೆ. ಈ ಬಳಗದಲ್ಲಿ ಬಹುತೇಕ ಮಂದಿ ಕಾಲೇಜು ವಿದ್ಯಾರ್ಥಿಗಳು ಮತ್ತು ಯುವ ಉದ್ಯೋಗಿಗಳು. ಇವರು ವಾರಾಂತ್ಯದಲ್ಲಿ ಶಾಲೆಗಳಿಗೆ ಭೇಟಿ ನೀಡಿ ಸ್ಥಳೀಯರು, ಎಸ್‌ಡಿಎಂಸಿಗಳ ಸಹಕಾರ ಪಡೆದು ಬಣ್ಣ ಬಳಿದು, ಧನಾತ್ಮಕ ಚಿಂತನೆಯ ಕಲಾಕೃತಿಗಳನ್ನು ಚಿತ್ರಿಸುತ್ತಾರೆ.ಗ್ರಾಮೀಣ ಶಾಲೆಗಳನ್ನು ಆಯ್ದುಕೊಂಡು ಪ್ರತೀ ಶನಿವಾರ – ರವಿವಾರ ಅಲ್ಲೇ ವಾಸ್ತವ್ಯವಿರುತ್ತೇವೆ. ಲ್ಯಾಬ್, ಕ್ರೀಡಾ ಸಾಮಗ್ರಿ ಒದಗಿಸುವುದು, ಪರಿಸರ, ಆಹಾರ, ಶುಚಿತ್ವ ಮತ್ತು ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತೇವೆ. ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಪ್ರಯತ್ನ ಮಾಡುತ್ತೇವೆ ಎಂದು ಬಳಗದ ಸಂಯೋಜಕ ರಘು ಪೂಜಾರಿ ಹೇಳುತ್ತಾರೆ.
“ಸ್ಕೂಲ್ ಬೆಲ್’ ಇವರ ವಿಶಿಷ್ಟ ಕಾರ್ಯಕ್ರಮ. ವಿವಿಧ ಜಿಲ್ಲೆಗಳ 140ಕ್ಕೂ ಅಧಿಕ ಶಾಲೆಗಳಿಗೆ ಆಯಾ ಶಾಲೆಯ ಹಳೇ ವಿದ್ಯಾರ್ಥಿಗಳು, ಎಸ್‌ಡಿಎಂಸಿ ಸದಸ್ಯರು ಮತ್ತು ಸ್ಥಳೀಯರನ್ನು ಸೇರಿಸಿಕೊಂಡು ಸುಣ್ಣ ಬಣ್ಣ ಬಳಿಯುವ ಕಾರ್ಯ ಮಾಡಿದ್ದೇವೆ. “ಕ್ಯಾಂಪಸ್ ಟು ಕಮ್ಯೂನಿಟಿ’ಯಲ್ಲಿ 3,500ಕ್ಕೂ ಅಧಿಕ ಸ್ವಯಂಸೇವಕ ರಿದ್ದಾರೆ. ಆಯಾ ಜಿಲ್ಲೆಯ ಸ್ವಯಂ ಸೇವಕರನ್ನೇ ಇದಕ್ಕೆ ಜೋಡಿಸುತ್ತೇವೆ. ಚಿತ್ರಕಲಾ ವಿದ್ಯಾರ್ಥಿಗಳನ್ನು ಹೆಚ್ಚೆಚ್ಚು ಜೋಡಿಸಿಕೊಳ್ಳುತ್ತಿದ್ದೇವೆ ಎಂದು ರಘು ಪೂಜಾರಿ ವಿವರ ನೀಡಿದ್ದಾರೆ. ಕಲಿಯೋಣ -ಕಲಿಸೋಣ ಬನ್ನಿ
ಕಾಲೇಜು ವಿದ್ಯಾರ್ಥಿಗಳು, ಯುವ ಉದ್ಯೋಗಿಗಳ ಮೂಲಕ ಸರಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ವಾರಾಂತ್ಯದಲ್ಲಿ ಮನೆಪಾಠದ ವ್ಯವಸ್ಥೆಯನ್ನೂ ಕ್ಯಾಂಪಸ್ ಟು ಕಮ್ಯೂನಿಟಿ ಮಾಡುತ್ತಿದೆ.
Related Articles
-ಸೂರ್ಯನಾರಾಯಣ, ಮಾಲೂರು, ಕ್ಯಾಂಪಸ್ ಟು ಕಮ್ಯೂನಿಟಿ
Advertisement
– ರಾಜು ಖಾರ್ವಿ ಕೊಡೇರಿ