Advertisement

ರಸ್ತೆ ಬದಿ ಮರಗಳಿಗೆ ಸುಣ್ಣ

01:23 AM Jul 16, 2019 | Lakshmi GovindaRaj |

ಯಲಹಂಕ: ಮರಗಳಿಗೆ ಗೆದ್ದಲು ಹಿಡಿಯುವುದನ್ನು ತಡೆಯುವ ಉದ್ದೇಶದಿಂದ ವಿದ್ಯಾರಣ್ಯಪುರ ಮುಖ್ಯರಸ್ತೆ ಬದಿಯಲ್ಲಿರುವ 50ಕ್ಕೂ ಹೆಚ್ಚು ಮರಗಳಿಗೆ ಬಿ-ಪ್ಯಾಕ್‌ ಸಂಸ್ಥೆಯ ಸದಸ್ಯರು ಸೋಮವಾರ ಸುಣ್ಣ ಹಚ್ಚಿದರು.

Advertisement

ಮುಖ್ಯ ರಸ್ತೆಯಲ್ಲಿನ ಮರಗಳ ಮೇಲೆ ಅಂಟಿಸಿದ್ದ ಭಿತ್ತಿಪತ್ರಗಳು ಮತ್ತು ಅವುಗಳಿಗೆ ಹೊಡೆದಿದ್ದ ಮೊಳೆಗಳನ್ನು ತೆಗೆದು, ಗೆದ್ದಲು ಹುಳಗಳ ಕಾಟದಿಂದ ರಕ್ಷಣೆ ನೀಡಲು ಮರಗಳಿಗೆ ಸುಣ್ಣ ಹಚ್ಚಲಾಯಿತು.

ಪ್ರಾಣಿ ಪಕ್ಷಿಗಳಿಗೆ ಆಶ್ರಯ ನೀಡುವ ಮರಗಳನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ಮರಗಳ ಮೇಲ್ಮೆ„ಗೆ ಸುಣ್ಣ ಲೇಪಿಸುವುದರಿಂದ ವಾಹನಗಳಿಂದ ಬರುವ ಬಿಸಿಯಾದ ಹೊಗೆಯಿಂದ ಮರಳಿಗೆ ರಕ್ಷಣೆ ಸಿಗುತ್ತದೆ. ಜತೆಗೆ ರಾತ್ರಿ ವೇಳೆ ಸಂಚರಿಸುವ ವಾಹನಗಳ ಚಾಲಕರಿಗೆ ಮರಗಳು ಸ್ಪಷ್ಟವಾಗಿ ಕಾಣುತ್ತವೆ ಎಂದು ಬಿ-ಪ್ಯಾಕ್‌ನ ಜಗದೀಶ್‌ರಾಜ್‌ ಹೇಳಿದರು.

ಕಾರ್ಯಕ್ರಮದಲ್ಲಿ ಬಿ-ಪ್ಯಾಕ್‌ ಸಿವಿಕ್‌ ಮುಖಂಡರು, ಧಾತ್ರಿ ಮಹಿಳಾ ಮತ್ತು ಮಕ್ಕಳ ಕ್ರೀಡಾ ತಂಡ, ಸಿಟಿಜನ್‌ ಆಕ್ಷನ್‌ ಫೋರಂ ಹಾಗೂ ವಿದ್ಯಾರಣ್ಯಪುರ ನಿವಾಸಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next