ತಾಲೂಕಿನ ಯಕ್ಸಂಬಾದ ಪೈಲ್ವಾನ ಶ್ರೀಪತಿ ಶಂಕರ ಖಂಚನಾಳೆ (86) ಸೋಮವಾರ ನೆರೆಯ ಮಹಾರಾಷ್ಟ್ರ ಕೊಲ್ಲಾಪೂರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
Advertisement
ಶ್ರೀಪತಿ ಕಂಚನಾಳೆ 1959ರ ಡಿ. 20ರಂದು ದೆಹಲಿಯ ನ್ಯೂ ರೈಲ್ವೆ ಸ್ಟೇಡಿಯಂನಲ್ಲಿ ನಡೆದ ಕುಸ್ತಿಯಲ್ಲಿ ಪಂಜಾಬದ ಖ್ಯಾತ ಪೈಲ್ವಾನ್ ರುಸ್ತಮ-ಎ-ಪಂಜಾಬ್ ಬತ್ತಾಶಿಂಗ್ ಅವರನ್ನು ಪರಾಭವಗೊಳಿಸಿ ಹಿಂದ್ ಕೇಸರಿ ಆಗಿ ಹೊರಹೊಮ್ಮಿದ್ದರು. ಅಂದಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ ಅವರು ಖಂಚನಾಳೆಯವರಿಗೆ ಹಿಂದ್ ಕೇಸರಿ ಪ್ರಶಸ್ತಿ ನೀಡಿ ಸನ್ಮಾನಿಸಿದ್ದರು.
ಇವರಿಂದ ಕುಸ್ತಿ ಕಲಿತಿದ್ದರು. ಇವರು ಅನೇಕ ವರ್ಷಗಳಿಂದ ಕೊಲ್ಲಾಪೂರ ನಗರದಲ್ಲಿ ವಾಸವಾಗಿ ಅಲ್ಲಿನ ಶಾಹುಪುರಿ ತಾಲಿಮಿನಲ್ಲಿ (ಗರಡಿ ಮನೆ) ಅನೇಕ ಪೈಲ್ವಾನ್‌ಗಳಿಗೆ ಮಾರ್ಗದರ್ಶನ ನೀಡುತ್ತಾ ಪೈಲ್ವಾನ್‌ಗಳನ್ನು ಸಿದ್ಧಪಡಿಸಿದ್ದರು. ಇವರ
ಮಾರ್ಗದರ್ಶನದಲ್ಲಿ ತಯಾರಾದ ಅನೇಕ ಪೈಲ್ವಾನರು ದೇಶ-ವಿದೇಶಗಳಲ್ಲಿ ಇಂದು ಹೆಸರು ಮಾಡಿದ್ದಾರೆ. ಮಂಗಳವಾರ ಮಧ್ಯಾಹ್ನ ಪಂಚಗಂಗಾ ಸ್ಮಶಾನಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿತು. ಮೃತರು ಪತ್ನಿ, ಇಬ್ಬರು ಪುತ್ರರು, ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಇದನ್ನೂ ಓದಿ:ಪರಿಷತ್ ನಲ್ಲಿ ಗೂಂಡಾಗಿರಿ ಮಾಡಿದವರ ಅಮಾನತು ಮಾಡಲಿ: ಸಚಿವ ಎಸ್ ಟಿ ಸೋಮಶೇಖರ್