Advertisement

ಪೈ ಇಂಟರ್‌ನ್ಯಾಷನಲ್‌ ನೂತನ ಮಳಿಗೆ ಆರಂಭ

12:02 AM Oct 06, 2019 | Lakshmi GovindaRaju |

ಬೆಂಗಳೂರು: ದಕ್ಷಿಣ ಭಾರತದ ಮುಂಚೂಣಿ ಗೃಹೋಪಯೋಗಿ ವಸ್ತುಗಳ ಮಾರಾಟ ಸಂಸ್ಥೆ “ಪೈ ಇಂಟರ್‌ನ್ಯಾಷನಲ್‌’ ತನ್ನ 219ನೇ ವಾಣಿಜ್ಯ ಮಳಿಗೆ “ಪೈ ಇಂಟರ್‌ನ್ಯಾಷನಲ್‌ ಎಲೆಕ್ಟ್ರಾನಿಕ್ಸ್‌ ಮಲ್ಟಿ ಬ್ರಾಂಡ್‌ ಸ್ಟೋರ್‌ ಮತ್ತು ಫ‌ರ್ನಿಚರ್’ ಕನಕಪುರ ಮುಖ್ಯ ರಸ್ತೆಯ ಜೆ.ಪಿ ನಗರ 9ನೇ ಹಂತದ ರಘುವನಹಳ್ಳಿಯಲ್ಲಿ ಶನಿವಾರ ಆರಂಭಿಸಿದೆ.

Advertisement

ಒಂದೇ ಕಡೆ ಮಲ್ಟಿಬ್ರಾಂಡ್‌ ಉತ್ಪನ್ನಗಳು ಮತ್ತು ಫ‌ರ್ನಿಚರ್ ಉತ್ಪನ್ನಗಳು ಲಭ್ಯವಿರುವ ಪೈ ಇಂಟರ್‌ನ್ಯಾಷನಲ್‌ ಮಳಿಗೆ ಇದಾಗಿದೆ. 5ಮಹಡಿ ಕಟ್ಟಡದ ಮಳಿಗೆಯಲ್ಲಿ 2 ಮಹಡಿಯಲ್ಲಿ ಮೊಬೈಲ್‌, ಎಲೆಕ್ಟ್ರಾನಿಕ್ಸ್‌ ಗೃಹೋಪಯೋಗಿ ವಸ್ತುಗಳಾದ ಟಿವಿ ,ಫ್ರಿಜ್‌, ವಾಷಿಂಗ್‌ ಮಿಷನ್‌ ಮತ್ತಿತರ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ. ಇನ್ನುಳಿದ 3 ಮಹಡಿಗಳಲ್ಲಿ ಆಕರ್ಷಕ ಡೈನಿಂಗ್‌ ಹಾಗೂ ಕಾಫಿ ಟೇಬಲ್‌, ಕುರ್ಚಿ, ಹಾಸಿಗೆ, ಮಂಚ ಸೇರಿ ವಿವಿಧ ಪೀಠೊಪಕರಣಗಳು ಲಭ್ಯವಿವೆ.

ನೂತನ ಮಳಿಗೆಯನ್ನು ಕಂದಾಯ ಸಚಿವ ಆರ್‌.ಅಶೋಕ್‌ ಉದ್ಘಾಟಿಸಿ, ಈ ವೇಳೆ ಮಾತನಾಡಿದ ಅವರು, ನಗರದ ಹೊರವಲಯದ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪೈ ತನ್ನ ಮಳಿಗೆಯನ್ನು ರಘುವನಹಳ್ಳಿಯಲ್ಲಿ ಆರಂಭಿಸಿದೆ. ಮಲ್ಟಿಬ್ರ್ಯಾಂಡ್‌ ಉತ್ಪನ್ನ ಮತ್ತು ಫರ್ನಿಚರ್ ಒಂದೇ ಸೂರಿನಡಿ ಉತ್ತಮ ಗುಣಮಟ್ಟದಲ್ಲಿ ಲಭ್ಯವಿರುವುದು ಗ್ರಾಹಕರಿಗೆ ಇನ್ನಷ್ಟು ಪ್ರಯೋಜನವಾಗಲಿದೆ ಎಂದು ಹೇಳಿದರು.

ಶಾಸಕ ಎಂ.ಕೃಷ್ಣಪ್ಪ ಮಾತನಾಡಿ, ನಗರದ ಹೊರಹೊಲಯದಲ್ಲಿಯೇ ಎಲ್ಲಾ ಗೃಹೋಪಯೋಗಿ ವಸ್ತುಗಳು ಲಭ್ಯವಿರುವುದರಿಂದ ಈ ಭಾಗದ ನಿವಾಸಿಗಳು ನಗರಕ್ಕೆ ಬಂದು ಟ್ರಾಫಿಕ್‌ನಲ್ಲಿ ಅಲೆದಾಡಬೇಕಿಲ್ಲ. ಜತೆಗೆ ನಗರದ ಕೇಂದ್ರಭಾಗಕ್ಕೆ ಹೊರ ಭಾಗದ ಜನರು ಬಂದು ಟ್ರಾಫಿಕ್‌ ದಟ್ಟಣೆ ಹೆಚ್ಚಾಗುವುದು ನಿಯಂತ್ರಿಸುವಲ್ಲಿ ಇಂತಹ ವಾಣಿಜ್ಯ ಮಳಿಗೆಗಳು ಸಹಕಾರಿಯಾಗುತ್ತವೆ. ಉತ್ತಮ ಗುಣಮಟ್ಟದ ವಸ್ತುಗಳಿರುವುದರಿಂದ ಪೈ ಮಳಿಗೆಯಲ್ಲಿ ನಂಬಿಕೆಯಿಂದ ಗ್ರಾಹಕರು ಖರೀದಿಸಬಹುದು ಎಂದರು.

ಪೈ ಇಂಟರ್‌ ನ್ಯಾಷನಲ್‌ ಎಲೆಕ್ಟ್ರಾನಿಕ್‌ ಲಿಮಿಟೆಡ್‌ನ‌ ವ್ಯವಸ್ಥಾಪಕ ನಿರ್ದೇಶಕ ರಾಜ್‌ಕುಮಾರ್‌ ಪೈ ಮಾತನಾಡಿ, 2000ನೇ ಇಸವಿಯಲ್ಲಿ ಬೆಂಗಳೂರಿನ ಇಂದಿರಾನಗರದಲ್ಲಿ ಪೈ ಮೊದಲ ಮಳಿಗೆ ಆರಂಭವಾಯಿತು. ಕಳೆದ 18 ವರ್ಷಗಳಲ್ಲಿ ಸಂಸ್ಥೆ ಕರ್ನಾಟಕ, ತೆಲಂಗಾಣ, ಆಂದ್ರಪ್ರದೇಶಗಳಲ್ಲಿ ವಿಸ್ತರಿಸಿದ್ದು, ಇಂದು 219ನೇ ಮಳಿಗೆ ಆರಂಭಿಸಲು ಹೆಮ್ಮೆ ಎನಿಸುತ್ತಿದೆ. ಸಂಸ್ಥೆಗೆ ಗ್ರಾಹಕರ ಹಿತವೇ ಮುಖ್ಯವಾಗಿದ್ದು, ಹೀಗಾಗಿಯೇ ನೂರಕ್ಕೆ ನೂರು ಗುಣಮಟ್ಟದ ಉತ್ಪನ್ನಗಳಿಗೆ ನಾವು ಆದ್ಯತೆ ನೀಡುತ್ತಿದ್ದೇವೆ ಎಂದರು.

Advertisement

ಆಕರ್ಷಕ ಪೀಠೊಪಕರಣಗಳು: ವಿಶೇಷ ಕುಶನರಿ ಸೋಫಾಗಳು, ಮಲೇಶಿಯನ್‌ ಪೀಠೊಪಕರಣಗಳು ಗ್ರಾಹಕರನ್ನು ಹೆಚ್ಚು ಆಕರ್ಷಿಸುತ್ತಿದೆ. ಈ ಎಲ್ಲಾ ಉತ್ಪನ್ನಗಳು ಮಧ್ಯಮ ವರ್ಗದವರಿಗೆಂದು ಪೈ ವಿಶೇಷ ಬೆಲೆಯಲ್ಲಿ ಲಭ್ಯವಿವೆ.

ಏಳು ಕೋಟಿ ಮೌಲ್ಯದ ಬಹುಮಾನ ಗೆಲ್ಲುವ ಅವಕಾಶ: ನವರಾತ್ರಿ ಹಾಗೂ ದೀಪಾವಳಿ ಹಿನ್ನೆಲೆ ಪೈ ಇಂಟರ್‌ನ್ಯಾಷನಲ್‌ನಲ್ಲಿ ಮೆಗಾ ಫೆಸ್ಟಿವಲ್‌ ಸೇಲ್‌ ನಡೆಯುತ್ತಿದ್ದು, ಅದೃಷ್ಟಶಾಲಿ ಗ್ರಾಹಕರಿಗಾಗಿ ಏಳು ಕೋಟಿ ರೂ. ಮೌಲ್ಯದ ಬಹುಮಾನಗಳನ್ನು ನೀಡಲಾಗುತ್ತಿದೆ. ಕಳೆದ ಸೆಪ್ಟೆಂಬರ್‌ 28ರಿಂದ ಆರಂಭವಾದ ಮೆಗಾ ಫೆಸ್ಟಿವಲ್‌ ಸೇಲ್‌ ನವೆಂಬರ್‌ವರೆಗೂ ನಡೆಯಲಿದೆ. ಈ ವೇಳೆ ಪೈ ಇಂಟರ್‌ನ್ಯಾಷನಲ್‌ನ ಯಾವುದೇ ಮಳಿಗೆಯಲ್ಲಿ ಕನಿಷ್ಠ 2,000 ರೂ. ಖರೀದಿಗೆ ಒಂದು ಲಕ್ಕಿ ಡ್ರಾ ಕೂಪನ್‌ ಲಭ್ಯವಾಗಲಿದೆ. ನವೆಂಬರ್‌ನಲ್ಲಿ ಸೇಲ್‌ ಮುಗಿದ ಬಳಿಕ ಕೂಪನ್‌ ಪಡೆದ ಗ್ರಾಹಕರ ಜೆನ್ಯೂನ್‌ ಲಕ್ಕಿ ಡ್ರಾ ನಡೆಸಿ ಅದೃಷ್ಟ ಶಾಲಿ ಬಹುಮಾನ ವಿತರಿಸಲಾಗುತ್ತದೆ.

ಈ ಬಾರಿ ಬಂಪರ್‌ ಬಹುಮಾನವಾಗಿ 20 ಕಾರುಗಳು, ಮೊದಲ ಬಹುಮಾನವಾಗಿ 160 ಸುಜುಕಿ ಆಕ್ಸಿಸ್‌ 125 ಬೈಕ್‌ (ದ್ವಿಚಕ್ರವಾಹನ) ನಿಗದಿ ಪಡಿಸಲಾಗಿದೆ. ಉಳಿದಂತೆ 8,000 ಅದೃಷ್ಟ ಶಾಲಿ ಗ್ರಾಹಕರು 1,000 ರೂ. ಪೈ ಇಂಟರ್‌ನ್ಯಾಷನಲ್‌ ಕೂಪನ್‌, 80,000 ಗ್ರಾಹಕರು 500 ರೂ. ಪೈ ಇಂಟರ್‌ನ್ಯಾಷನಲ್‌ ಕೂಪನ್‌ ಪಡೆಯಲಿದ್ದಾರೆ. ಒಟ್ಟಾರೆ 88,180 ಅದೃಷ್ಟ ಶಾಲಿ ಗ್ರಾಹಕರಿಗೆ ಏಳು ಕೋಟಿ ರೂ.ಮೌಲ್ಯದ ಬಹುಮಾನ ನೀಡಲಾಗುತ್ತಿದೆ ಎಂದು ಪೈ ಇಂಟರ್‌ ನ್ಯಾಷನಲ್‌ ಎಲೆಕ್ಟ್ರಾನಿಕ್‌ ಲಿಮಿಟೆಡ್‌ನ‌ ವ್ಯವಸ್ಥಾಪಕ ನಿರ್ದೇಶಕ ರಾಜ್‌ಕುಮಾರ್‌ ಪೈ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next