Advertisement

ಸೆನ್ಸಾರ್‌ ಮಂಡಳಿಯಿಂದ ನಿಹಲಾನಿ ಔಟ್‌

08:00 AM Aug 12, 2017 | Team Udayavani |

ನವದೆಹಲಿ: ಪದೇ ಪದೆ ವಿವಾದಕ್ಕೆ ಆಹಾರವಾಗುತ್ತಿದ್ದ ಕಾರಣಕ್ಕಾಗಿ ಸೆನ್ಸಾರ್‌ ಮಂಡಳಿ ಅಧ್ಯಕ್ಷ ಸ್ಥಾನದಿಂದ ಪಹ್ಲಾಜ್‌ ನಿಹಲಾನಿ ಅವರನ್ನು ತೆಗೆದುಹಾಕಲಾಗಿದೆ. 

Advertisement

ಅವರ ಸ್ಥಾನಕ್ಕೆ ಕವಿ, ಸಿನಿ ಹಾಡು ಬರಹಗಾರ ಪ್ರಸೂನ್‌ ಜೋಷಿ ಅವರನ್ನು ನೇಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ಈ ಬಗ್ಗೆ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದ್ದು, ತಿಂಗಳ ಹಿಂದೆಯೇ ಅವರನ್ನು ಕೆಲಸದಿಂದ ಬಿಡುಗಡೆಗೊಳಿಸ ಲಾಗುವುದು ಎಂದು ತಿಳಿಸಲಾಗಿತ್ತು ಎಂದು ವರದಿ ಮಾಡಿದೆ. 2015 ಜನವರಿಯಲ್ಲಿ ನಿಹಲಾನಿ ಅವರನ್ನು ಸೆನ್ಸರ್‌ ಮಂಡಳಿ ಅಧ್ಯಕ್ಷರಾಗಿ ನೇಮಕ ಮಾಡಲಾಗಿದ್ದು, ಬಳಿಕ ಒಂದಿಲ್ಲೊಂದು ಕಾರಣಕ್ಕೆ ವಿವಾದ ಸೃಷ್ಟಿಗೆ ಕಾರಣವಾಗಿದ್ದಾರೆ. ಅಲ್ಲದೇ ಅತಿಯಾದ ಸೆನ್ಸರ್‌ಶಿಪ್‌ ಹೇರಿಕೆ ಸರ್ಕಾರಕ್ಕೆ ಸಾಕಷ್ಟು ಮುಜುಗರ ತಂದೊಡ್ಡಿತ್ತು ಎನ್ನಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next