Advertisement

ಭಾವೈಕ್ಯತೆಗೆ ಸಾಕ್ಷಿಯಾದ ಪಾದಗಟ್ಟಿ ಗಣೇಶ ಪೂಜೆ

11:16 AM Sep 09, 2019 | Suhan S |

ಶಿಗ್ಗಾವಿ: ಇಲ್ಲಿನ ಪಾದಗಟ್ಟಿಯಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿ ವೇದಿಕೆಯಲ್ಲಿ ಮೊಹರಂ ಹಾಗೂ ಗಣೇಶ ಚತುರ್ಥಿ ಪ್ರಯುಕ್ತ ಹಿಂದೂ-ಮುಸ್ಲಿಂ ಬಾಂಧವರು ಒಟ್ಟಾಗಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಾವೈಕ್ಯತೆ ಮೆರೆದರು.

Advertisement

ಪೂಜಾ ಕಾರ್ಯಕ್ರಮದ ಸಾನ್ನಿಧ್ಯವಹಿಸಿದ್ದ ವಿರಕ್ತಮಠದ ಸಂಗನಬಸವ ಸ್ವಾಮೀಜಿ ಮಾತನಾಡಿ, ಸ್ವಾತಂತ್ರ್ಯ ಹೋರಾಟ ಕಾಲಘಟ್ಟದಲ್ಲಿ ಜಾತಿ ಭೇದ ಮರೆತು ಏಲ್ಲರೂ ಹೋರಾಡಿದ ಫಲವಾಗಿ ನಮಗೆ ಸ್ವಾತಂತ್ರ್ಯ ಲಭಿಸಿದೆ. ಆಚರಣೆ ಹಾಗೂ ಪದ್ಧತಿಗಳಲ್ಲಿ ವಿವಿಧತೆ ಇರಬಹುದು. ಆದರೆ, ಪೂಜೆ ಅರ್ಪಣೆ ಆ ಭಗವಂತನಿಗೆ ಸಲ್ಲಬೇಕು. ನಾವೆಲ್ಲ ಒಂದು ಎಂಬ ಭಾವನೆಯಿಂದ ಬಾಳಬೇಕಿದೆ. ಇದಕ್ಕೆ ಪುಷ್ಟಿ ತುಂಬುವ ರೀತಿಯಲ್ಲಿ ಶಿಗ್ಗಾವಿ ಪಟ್ಟಣದ ಹಿಂದೂ-ಮುಸ್ಲಿಂ ಬಾಂಧವರು ಒಗ್ಗೂಡಿ ಗಜಾನನಿಗೆ ವಿಶೇಷ ಪೂಜೆ ಸಲ್ಲಿಸುವುದು ಭವಿಷ್ಯದಲ್ಲಿ ಒಳ್ಳೆಯ ಬೆಳವಣಿಗೆಯಾಗಿದೆ. ಇದು ಕನಕ. ಶರೀಫ್‌ ಶಿವಯೋಗಿಗಳು ನಡೆದಾಡಿದ ಸೌಹಾರ್ದತೆಯ ನಾಡು ಎಂಬುದಕ್ಕೆ ನಿಜಾರ್ಥ ಬಂದಂತಾಗಿದೆ ಎಂದರು.

ಮುಸ್ಲಿಂ ಬಾಂಧವರಿಂದ ಶರಬತ್‌ ವಿತರಣೆ ಸೇವೆ ಮಾಡಲಾಯಿತು. ಹಿರಿಯರಾದ ಅಬ್ದುಲ್ವಾಹಿದ್‌ ಮುಲ್ಲಾ, ಜಿಲಾನಿ ಜಂಗ್ಲಿ, ಇಮಾಮ್‌ಹುಸೇನ ಅದಂಬಾಯಿ, ಮಕ್ಬುಲ್ಅಹ್ಮದ್‌ ಗುಜ್ಜರ, ಪ್ರಶಾಂತ ಬಡ್ಡಿ, ಮುಕ್ತಿಯಾರಖಾನ್‌ ತಿಮ್ಮಾಪೂರ, ಮುನ್ವರ್‌ ಬೇಗ್‌ ಮಿರ್ಜಾ, ಅಬ್ದುಲ್ಲಾ ಗೊಟಗೋಡಿ, ವೆಂಕಟೇಶ ಬಂಡಿವಡ್ಡರ, ಹಜರೇಸಾಬ್‌ ಲಕ್ಷೆ ್ಮೕಶ್ವರ, ಶಿವರಾಜ ಕ್ಷೌರದ, ಅಬ್ದುಲ್ ಗಫರ್‌ ಗುಜ್ಜರ, ಆಸೀಫ್‌ ನೆರ್ತಿ, ಮಲಿಕ್‌ಜಾನ್‌ ಸವಣೂರ, ಶಾಹನು ಹಲಗಿಬಡಿ, ಮೌಲಾಲಿ ಟಪಾಲ, ರಹೀಮ್‌ಖಾನ್‌ ಸೂರಣಗಿ, ಗುಲಾಂಅಹ್ಮದ್‌ ಹಾಗೂ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next