Advertisement

ಭತ್ತ ಕಟಾವು ಯಂತ್ರಗಳ ದುಬಾರಿ ಬಾಡಿಗೆ ! ಸರಕಾರದ ನಿಯಂತ್ರಣ ಏಕಿಲ್ಲ?

01:25 AM Nov 01, 2020 | sudhir |

ಕೋಟ: ಕರಾವಳಿಯಲ್ಲಿ ಮಳೆಯ ಪ್ರಮಾಣ ತಣ್ಣಗಾಗಿದ್ದು ಭತ್ತದ ಕಟಾವು ಚುರುಕು ಪಡೆದಿದೆ. ಹೊರ ರಾಜ್ಯ, ಜಿಲ್ಲೆಗಳಿಂದ ಆಗಮಿಸಿದ ಕಟಾವು ಯಂತ್ರಗಳಿಗೆ ಕೆಲಸ ಆರಂಭವಾಗಿದ್ದು ಮುಂದಿನ ದಿನಗಳಲ್ಲಿ ಕಟಾವು ಮತ್ತಷ್ಟು ವೇಗ ಪಡೆಯಲಿದೆ.

Advertisement

ಸರಕಾರಿ ಬಾಡಿಗೆ ಸೇವಾ ಕೇಂದ್ರಗಳ ಮೂಲಕ ಕಾರ್ಯನಿರ್ವಹಿಸುವ ಯಂತ್ರಗಳು ಗಂಟೆಗೆ 1,800 ರೂ. ದರದಲ್ಲಿ ಕಟಾವು ನಡೆಸುತ್ತಿವೆ. ಆದರೆ ಈ ಯಂತ್ರಗಳ ಸಂಖ್ಯೆ ಸಾಕಷ್ಟು ಸೀಮಿತವಾಗಿವೆ. ಹೀಗಾಗಿ ಹೆಚ್ಚಿನ ಕಟಾವು ನಡೆಸಲು ಅಸಾಧ್ಯವಾಗಿದ್ದು ಖಾಸಗಿ ಯಂತ್ರಗಳನ್ನು ಅವಲಂಬಿಸಬೇಕಾಗಿದೆ. ಆದರೆ ಖಾಸಗಿ ಯಂತ್ರಗಳು ಬಾಡಿಗೆ ಸೇವಾ ಕೇಂದ್ರದ ದರದಲ್ಲಿ ಕಟಾವು ನಡೆಸು ವಂತೆ ಮಾರ್ಗದರ್ಶನ ನೀಡಿದರೂ ಅದನ್ನು ಪರಿಗಣಿಸದೆ ಗಂಟೆಗೆ 2000-2300, 2400ರೂ ತನಕ ಮೊತ್ತವನ್ನು ವಿಧಿಸುತ್ತಿರುವುದು ಹೊರೆಯಾಗುತ್ತಿದೆ. ಹೀಗಾಗಿ ಬಾಡಿಗೆ ನಿಯಂತ್ರಣಕ್ಕೆ ಆಡಳಿತ ವ್ಯವಸ್ಥೆ ಸೂಕ್ತ ಕ್ರಮಕೈಗೊಳ್ಳುವ ಅಗತ್ಯವಿದೆ ಎನ್ನುವುದು ರೈತರ ಬೇಡಿಕೆಯಾಗಿದೆ.

ಹೊರ ಜಿಲ್ಲೆಯಿಂದ ಕಡಿಮೆ ದರಕ್ಕೆ ಯಂತ್ರಗಳನ್ನು ತರಿಸಿಕೊಂಡು ಅವುಗಳಿಗೆ ತಮ್ಮದೇ ಆದ ಬಾಡಿಗೆಯನ್ನು ಫಿಕ್ಸ್‌ ಮಾಡಿ ಕಮಿಷನ್‌ ಪಡೆಯುವ ಮಧ್ಯವರ್ತಿಗಳ ಹಾವಳಿ ಬಾಡಿಗೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಒಂದು ವೇಳೆ ರೈತರು ಸಂಘಟಿತರಾಗಿ ಹೋರಾಟ ನಡೆಸಿದಲ್ಲಿ ಬಾಡಿಗೆ ದರದಲ್ಲಿ ಸ್ವಲ್ಪಮಟ್ಟಿನ ಇಳಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಇದನ್ನೂ ಓದಿ ;ಹೊಟೇಲ್‌ನಲ್ಲಿ “ಗುಂಡು ಹಾರಾಟ’: ಮೂವರಿಗಾಗಿ ಶೋಧ

ದೂರು ಬಂದರೆ ಪರಿಶೀಲಿಸಿ ಕ್ರಮ
ಖಾಸಗಿ ಭತ್ತ ಕಟಾವು ಯಂತ್ರಗಳು ದುಬಾರಿ ಬಾಡಿಗೆ ಪಡೆಯುತ್ತಿರುವ ಕುರಿತು ದೂರುಗಳು ಬಂದಿಲ್ಲ. ರೈತರಿಂದ ದೂರುಗಳು ಬಂದರೆ ಕಾನೂನಿನಲ್ಲಿರುವ ಅವಕಾಶಗಳು° ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು. ಜಿ. ಜಗದೀಶ್‌, ಡಿಸಿ, ಉಡುಪಿ

Advertisement

ದಾವಣಗೆರೆ ಮಾದರಿ ಸೂಕ್ತ
ದಾವಣಗೆರೆ ಜಿಲ್ಲೆಯಲ್ಲಿ ಕೋವಿಡ್‌ ಸಂದರ್ಭದಲ್ಲೂ ಖಾಸಗಿ ಭತ್ತ ಕಟಾವು ಯಂತ್ರಗಳ ಮಾಲಕರು ಪ್ರತಿ ಗಂಟೆಗೆ 2,500 ರೂ.ಗಳಿಂದ 3,000 ಗಳವರೆಗೆ ಬಾಡಿಗೆ ಹಣ ನಿಗದಿಪಡಿಸಿದ್ದಕ್ಕೆ ರೈತರಿಗೆ ಆರ್ಥಿಕ ಹೊರೆಯಾಗುತ್ತಿದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಪ್ರತಿ ಗಂಟೆಗೆ 1,800 ರೂ. ದರ ಮೀರದಂತೆ ಬಾಡಿಗೆಯನ್ನು ನಿಗದಿಪಡಿಸಿಬೇಕು. ತಪ್ಪಿದಲ್ಲಿ ಮಾಲಕರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ದಾವಣಗೆರೆ ಡಿಸಿಯವರು ಆದೇಶಿಸಿದ್ದಾರೆ. ಇದೇ ಮಾದರಿಯಲ್ಲಿ ಅವಿಭಜಿತ ದ.ಕ. ಜಿಲ್ಲೆಯಲ್ಲೂ ಕಟಾವು ಯಂತ್ರಗಳ ಬಾಡಿಗೆ ನಿಯಂತ್ರಣಕ್ಕೆ ಕ್ರಮಕೈಗೊಳ್ಳುವುದು ರೈತರ ನಿಲುವು ಆಗಿದೆ.

ದಾವಣಗೆರೆ ಮಾದರಿಗೆ ಯತ್ನ
ಖಾಸಗಿ ಭತ್ತ ಕಟಾವು ಯಂತ್ರಗಳು ದುಬಾರಿ ಬಾಡಿಗೆ ವಿಧಿಸು ವು ದರಿಂದ ರೈತರಿಗೆ ಹೊರೆ ಯಾಗುತ್ತಿರುವುದು ಗಮನಕ್ಕೆ ಬಂದಿದ್ದು ಕರಾವಳಿ ಯಲ್ಲೂ ದಾವಣಗೆರೆ ಜಿಲ್ಲೆಯ ಮಾದರಿ  ಯಲ್ಲಿ ನಿಗದಿತ ಬಾಡಿಗೆ ಪಡೆಯುವಂತೆ ಕಟಾವು ಯಂತ್ರದ ಮಾಲಕ ರಿಗೆ ಎಚ್ಚರಿಕೆ ನೀಡಲು ಇರುವ ಅವಕಾಶ ಗಳ ಕುರಿತು ಪರಿಶೀಲಿಸಿ ಕ್ರಮ  ಕೈಗೊಳ್ಳಲಾಗುವುದು.
– ಕೋಟ ಶ್ರೀನಿವಾಸ ಪೂಜಾರಿ, ದ.ಕ. ಜಿಲ್ಲೆ ಉಸ್ತುವಾರಿ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next