Advertisement

ಪಾದೂರು ಪೈಪ್‌ಲೈನ್‌: ನರೇಗಾ ಯೋಜನೆಗೆ ಅಡ್ಡಿ 

10:28 AM Dec 17, 2017 | Team Udayavani |

ಪಡುಪಣಂಬೂರು: ಗ್ರಾಮೀಣ ಭಾಗದಲ್ಲಿ ಹಾದುಹೋಗಿ ರುವ ಪಾದೂರು ಕಚ್ಚಾ ತೈಲದ ಪೈಪ್‌ ಲೈನ್‌ ಕಾಮಗಾರಿಯಿಂದ ರಾಷ್ಟ್ರೀಯ ಗ್ರಾಮೀಣ ಉದ್ಯೊಗ ಖಾತರಿ (ನರೇಗಾ) ಯೋಜನೆಯ ಕಾಮಗಾರಿಗೆ ಅಡ್ಡಿಯಾಗಿದೆ ಎಂದು ತೋಕೂರು ಗ್ರಾಮಸ್ಥರು ಪಡು ಪಣಂಬೂರು ಗ್ರಾ.ಪಂ.ನಲ್ಲಿ ನಡೆದ ಸಾಮಾಜಿಕ ಪರಿಶೋಧನ ಗ್ರಾಮ ಸಭೆಯಲ್ಲಿ ಆರೋಪಿಸಿದರು.

Advertisement

ಗ್ರಾಮಸ್ಥರಾದ ರಾಘವ ಹೆಬ್ಟಾರ್‌ ಮಾತನಾಡಿ, ಸಾರ್ವಜನಿಕ ಕಾಮಗಾರಿಯಲ್ಲಿ ತೋಕೂರು ಗ್ರಾಮದಲ್ಲಿ ಮಳೆ ನೀರು ಸರಾಗ ಹರಿಯಲು ಚರಂಡಿಯ ಹೂಳೆ ತ್ತಿದೆ. ಆದರೆ ಪಾದೂರು ಪೈಪ್‌ಲೈನ್‌ ಕಾಮಗಾರಿ ನಡೆಸುವಾಗ ಬೇಕಾದಂತೆ ಅಗೆದು ಚರಂಡಿಯಲ್ಲಿಯೇ ಮಣ್ಣನ್ನು ತುಂಬಿಸಿರುವುದರಿಂದ ಯೋಜನೆಯಲ್ಲಿನ ಕಾಮಗಾರಿಗೆ ಅಡ್ಡಿಯಾಗಿದ್ದು, ಮೇಲ್ನೋಟಕ್ಕೆ ಕಾಮಗಾರಿಯೇ ನಡೆದಿಲ್ಲ ಎಂಬಂತಾಗಿದೆ ಎಂದರು.

ಈ ಬಗ್ಗೆ ಸಾಕಷ್ಟು ಚರ್ಚೆ ನಡೆದು ನೇರ ವಾಗಿ ಕಾಮಗಾರಿ ನಡೆಸಲು ಸೂಚಿಸಿದ ಇಲಾಖೆಗೆ ಪತ್ರವನ್ನು ಬರೆದು ಇಲಾಖೆಯಿಂದಲೇ ಚರಂಡಿಯ ಹೂಳೆತ್ತಲು ಪ್ರಯತ್ನ ನಡೆಸಲಾಗುವುದು. ಸಾಧ್ಯವಾಗದಿದ್ದಲ್ಲಿ ಕ್ರಿಮಿನಲ್‌ ಮೊಕದ್ದಮೆಯನ್ನೂ ಸಹ ಹಾಕಲು ಅವಕಾಶ ಇದೆ. ಜಿ.ಪಂ. ಸಭೆಯಲ್ಲೂ ಸಹ ಪ್ರಸ್ತಾಪಿಸುವೆ ಎಂದು ಜಿ.ಪಂ. ಸದಸ್ಯ ವಿನೋದ್‌ ಕುಮಾರ್‌ ಬೊಳ್ಳೂರು ಪ್ರತಿಕ್ರಿಯಿಸಿದರು.

ರಿಯಾಯಿತಿ ದರದಲ್ಲಿ ಸಸಿ
ನೋಡೆಲ್‌ ಅಧಿಕಾರಿಯಾಗಿ ಸಭೆಯ ಅಧ್ಯಕ್ಷತೆ ವಹಿಸಿದ್ದ ವಲಯ ಅರಣ್ಯಾಧಿಕಾರಿ ಚಿದಾನಂದಪ್ಪ ಮಾತನಾಡಿ, ಗ್ರಾಮಸ್ಥರ ಸಹಭಾಗಿತ್ವದಲ್ಲಿ ಯೋಜನೆ ಯಶಸ್ಸಾಗುತ್ತಿದೆ. ತಾಂತ್ರಿಕ ಸಮಸ್ಯೆಗಳು ಮುಂದಿನ ಹಂತದಲ್ಲಿ ಪರಿಹಾರವಾಗಬೇಕು, ಈಗಲೇ ಅನೇಕ ಪಂಚಾಯತ್‌ ವ್ಯಾಪ್ತಿಯ ಗ್ರಾಮದಲ್ಲಿ ನೀರಿನ ಸಮಸ್ಯೆ ಕಾಣುತ್ತಿರುವುದರಿಂದ ಅಂತರ್ಜಲ ಹೆಚ್ಚಿಸಲು ಖಾಲಿಬಿಟ್ಟ ಜಮೀನಿನಲ್ಲಿ ಕಾಡು ಬೆಳೆಸಿ. ಇದರಿಂದ ಅಂತರ್ಜಲ ಮಟ್ಟ ಹೆಚ್ಚುತ್ತದೆ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಸಸಿಗಳನ್ನು ನೀಡುವ ವ್ಯವಸ್ಥೆ ಇದೆ ಎಂದರು.

ಪಂ. ಸದಸ್ಯೆ ಕುಸುಮಾವತಿ ಮಾತನಾಡಿ, ಫಲಾನುಭವಿಯೊಬ್ಬರು ಮದುವೆಯಾಗಿದ್ದರೂ ಸಹ, ತವರು ಮನೆಯಲ್ಲಿಯೇ ಆಕೆಯ ಪಡಿತರ, ಆಧಾರ್‌ ಕಾರ್ಡ್‌ನ ದಾಖಲೆ ಉಳಿದಿದೆ. ಆದರೂ ಕೂಲಿ ಹಣವು ಮರು ವಸೂಲಿಯಾಗಬೇಕು ಎಂದು ನಮೂದಿಸಿರುವುದು ಸರಿಯಲ್ಲ ಎಂದರು. ಸದಸ್ಯ ಉಮೇಶ್‌ ಪೂಜಾರಿ ಮಾತನಾಡಿ, ಕುಡಿಯುವ ನೀರಿನ ಬಾವಿಗಳಿಗೆ ನರೇಗಾ ಯೋಜನೆಯಲ್ಲಿ ದುರಸ್ಥಿಗೆ ಅವಕಾಶ ನೀಡಬೇಕು ಎಂಬ ಬೇಡಿಕೆ ಇನ್ನೂ
ಈಡೇರಿಲ್ಲ ಎಂದರು.

Advertisement

ಪಡುಪಣಂಬೂರು ಗ್ರಾಮ ಪಂಚಾಯತ್‌ ಅಧ್ಯಕ್ಷ ಮೋಹನ್‌ದಾಸ್‌, ಉಪಾಧ್ಯಕ್ಷೆ ಸುರೇಖಾ ಕರುಣಾಕರ್‌, ಸದಸ್ಯರಾದ ಸಂಪಾವತಿ, ಪುಷ್ಪಾವತಿ, ವನಜಾ, ಮಂಜುಳಾ, ಸಂಪನ್ಮೂಲ ವ್ಯಕ್ತಿಗಳಾದ ಉಷಾರಾಣಿ, ಮಂಗಳಶ್ರೀ ಉಪಸ್ಥಿತರಿದ್ದರು. ಪಂಚಾಯತ್‌ ಪಿಡಿಒ ಅರುಣ್‌ ಪ್ರದೀಪ್‌ ಡಿ’ಸೋಜಾ ಸ್ವಾಗತಿಸಿದರು. ಹೆಚ್ಚುವರಿ ತಾಲೂಕು ಸಂಯೋಜಕಿ ಸಿಮಿತ್ತಲ್‌ ವರದಿ ವಾಚಿಸಿದರು. ಕಾರ್ಯದರ್ಶಿ ಲೋಕನಾಥ ಭಂಡಾರಿ ವಂದಿಸಿದರು. ಯೋಜನೆಯ ಅಧಿಕಾರಿ ಸುನೀತಾ ನಿರೂಪಿಸಿದರು

ಉತ್ತಮ ಪ್ರಗತಿ
ಪಡುಪಣಂಬೂರು ಗ್ರಾ.ಪಂ.ನಲ್ಲಿ ಪ್ರಸ್ತುತ ವರ್ಷದಲ್ಲಿ 59 ಕಾಮಗಾರಿ ನಡೆದಿದ್ದು, 17.78 ಲಕ್ಷ ರೂ. ವಿನಿಯೋಗವಾಗಿದೆ. ಕಾಮಗಾರಿ ನಿರ್ವಹಣೆ ಉತ್ತಮವಾಗಿದೆ. ಪಾರದರ್ಶಕವಾಗಿ ನಾಮಫಲಕ ಎಲ್ಲ ಕಡೆಗಳಲ್ಲಿ ಹಾಕಲಾಗಿದೆ. ಹೊಸ ಯೋಜನೆಗಳಿಗೆ ಗ್ರಾಮಸ್ಥರು ಅಧಿಕೃತ ಅರ್ಜಿ ಹಾಕುವುದು ಅಗತ್ಯ.
ಪವಿತ್ರಾ ಶೆಟ್ಟಿ,
  ತಾಲೂಕು ಸಂಯೋಜಕರು

ಶೌಚಾಲಯ ನಿರ್ಮಿಸಲು ಅವಕಾಶ
ಬಸವ, ಇಂದಿರಾ ವಸತಿ ಯೋಜನೆಯಲ್ಲಿ ಈ ಹಿಂದೆ ಮನೆ ನಿರ್ಮಿಸಿದವರು ಶೌಚಾಲಯ ನಿರ್ಮಿಸಿಕೊಳ್ಳಲು ನರೇಗಾ ಯೋಜನೆಯಲ್ಲಿ ಅವಕಾಶ ನೀಡಬೇಕು. ಹೊಸದಾಗಿ ನಿರ್ಮಿಸಲು ಸಹ ಸೂಕ್ತ ಸುತ್ತೂಲೆಯ ನಿರ್ದೇಶನ ಇಲ್ಲ. ವಸತಿ ಯೋಜನೆಗೆ ಪೂರಕವಾಗಿ ನರೇಗಾ ಯೋಜನೆ
ಇದ್ದಲ್ಲಿ ಫಲಾನುಭವಿಗಳಿಗೆ ಸಹಾಯವಾಗುತ್ತದೆ.
ಅರುಣ್‌ ಪ್ರದೀಪ್‌
   ಡಿ’ಸೋಜಾ, ಪಂ. ಪಿಡಿಒ

ನೀರಿನ ಸಮಸ್ಯೆಗೆ
ಯೋಜನೆಯಿಂದ ಅತಿಹೆಚ್ಚು ಕಾಂಕ್ರೀಟ್‌ ರಸ್ತೆ ನಿರ್ಮಾಣವಾಗಿದೆ. ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪರೋಕ್ಷವಾಗಿ ನೆರವಾಗಿದೆ. ಕೆರೆಗಳ ಪುನರುಜ್ಜೀವನಗೊಳಿಸಿರುವುದರಿಂದ ನೀರಿನ ಸಮಸ್ಯೆಗೆ ಪರ್ಯಾಯವಾಗಿ ಪರಿಹಾರ ಸಿಗಲಿದೆ. ಕಾಮಗಾರಿ ನಡೆದು ಹಣ ಬಿಡುಗಡೆಯಲ್ಲಿ ವಿಳಂಬ ಸರಿಯಲ್ಲ.
ಮೋಹನ್‌ದಾಸ್‌,
   ಪಂ. ಅಧ್ಯಕ್ಷರು

ಉಪುನೀರು ಸಮಸ್ಯೆ 
ಕದಿಕೆ ಕಡಪುರ ಎಂಬಲ್ಲಿ ಕಿಂಡಿ ಅಣೆ ಕಟ್ಟಿನಿಂದ ಉಪ್ಪು ನೀರು ಹರಿದು, ಸುತ್ತ ಮುತ್ತ ಬಾವಿಯಲ್ಲಿ ಉಪ್ಪು ನೀರು ಶೇಖರಣೆಯಾಗಿದೆ ಎಂದು ಗ್ರಾಮಸ್ಥರಾದ ಖಾದರ್‌ ದೂರಿದಾಗ ಅದು ನರೇಗಾ ಯೋಜನೆಯಲ್ಲಿ ನಡೆದಿದ್ದಲ್ಲ. ಇತರ ಇಲಾಖೆಯಿಂದ ನಡೆದ ಕಾಮಗಾರಿ ಆದರೂ ಆ ಪ್ರದೇಶಕ್ಕೆ ಮಣ್ಣು ತುಂಬಿಸಿ ಸಮಸ್ಯೆಗೆ ಸ್ಪಂದಿಸಲಾಗುವುದು ಎಂದು ಅಧ್ಯಕ್ಷರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next