Advertisement
ಪಡುಪಣಂಬೂರು ಗ್ರಾ.ಪಂ.ಗೆ ಇತರ ಉನ್ನತ ಅಧಿ ಕಾರಿಗಳೊಂದಿಗೆ ದಿಢೀರ್ ಭೇಟಿ ನೀಡಿ ಗ್ರಾ.ಪಂ.ನೆಲ್ಲೆಡೆ ವೀಕ್ಷಣೆ ನಡೆಸಿ ಅವರು ಮಾತನಾಡಿದರು. ದ.ಕ. ಜಿ.ಪಂ. ಸಿಇಒ ಡಾ| ಕುಮಾರ್, ಪಡುಪಣಂಬೂರು ಗ್ರಾ.ಪಂ ಅಧ್ಯಕ್ಷೆ ಮಂಜುಳಾ, ಪಿಡಿಒ ರಮೇಶ್ ನಾಯ್ಕ ಗ್ರಾ.ಪಂ.ನ ಸಾಧನೆ, ಯೋಜನೆಗಳ ಅನುಷ್ಠಾನ, ಅವುಗಳ ನಿರ್ವಹಣೆಯ ಬಗ್ಗೆ ವಿವರಿಸಿದರು.
ಉಮಾ ಮಹಾದೇವನ್ ಅವರು ಮಂಗಳವಾರ ಮಂಗಳೂರು ತಾಲೂಕಿನ ಕಂದಾವರ ಮತ್ತು ಮೂಲ್ಕಿ ತಾಲೂಕಿನ ಪಡುಪಣಂಬೂರು, ಕೆಮ್ರಾಲ್ ಹಾಗೂ ಪೆರ್ಮುದೆ ಗ್ರಾ.ಪಂ., ಡಿಜಿಟಲ್ ಲೈಬ್ರೆರಿ, ಪುಸ್ತಕ ಗೂಡುಗಳಿಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತ ಪಡಿಸಿದರು. ಅನಂತರ ಕಂದಾವರ ಗ್ರಾಮ ಪಂಚಾಯತಿ ಸಂಜೀವಿನಿ ಘಟಕದ ಆಹಾರ ತಯಾರಿಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.
Related Articles
ಉದ್ಯೋಗದಲ್ಲಿ ತೊಡಗಿಕೊಂಡಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಜಿ.ಪಂ. ಸಿಇಒ ಡಾ| ಕುಮಾರ್ ಹಾಗೂ ಇತರ ಅಧಿಕಾರಿಗಳು ಈ
ಸಂದರ್ಭದಲ್ಲಿದ್ದರು.
Advertisement
ಗ್ರಾಮದೆಲ್ಲೆಡೆ ಸುತ್ತಾಡಿದರುಉಮಾ ಮಹಾದೇವನ್ ಪಡುಪಣಂಬೂರು ಗ್ರಾ.ಪಂ. ಕಚೇರಿಯನ್ನು ವೀಕ್ಷಿಸಿ ಮೆಚ್ಚುಗೆ ಸೂಚಿಸಿದರು. ಬಳಿಕ ಡಿಜಿಟಲ್ ಗ್ರಂಥಾಲಯದಲ್ಲಿ ಮಕ್ಕಳೊಂದಿಗೆ ಹರಟಿದರು, ಚೆಸ್ ಆಡಿಸಿದರು. ಘನತ್ಯಾಜ್ಯ ಘಟಕದ ನಿರ್ವಹಣೆ, ಬಸ್ ನಿಲ್ದಾಣಗಳಲ್ಲಿ ತೆರೆಯಲಾಗಿರುವ ಪುಸ್ತಕ ಗೂಡು ವೀಕ್ಷಿಸಿದರು. ಅಂಗನವಾಡಿ ಮಕ್ಕಳೊಂದಿಗೆ ಮಾತುಕತೆ ನಡೆಸಿದರು. ಅನುಷ್ಠಾನಗೊಂಡಿರುವ ಯೋಜನೆಗಳ ಬಗ್ಗೆ ಪರಿಶೀಲಿಸಿ, ಪ್ರಶ್ನಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಾ.ಪಂ. ಸಿಬಂದಿ ಹಾಗೂ ಸದಸ್ಯರ ನಡುವಿನ ಬಾಂಧವ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿ, ಇನ್ನಷ್ಟು ಉತ್ತಮ ವಿನೂತನ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಸುಸ್ಥಿರ ಅಭಿವೃದ್ಧಿಯನ್ನು ಕಾಪಾಡಿಕೊಳ್ಳುವ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು.