Advertisement
3 ವರ್ಷಗಳ ಹಿಂದೆ ರಾಜ್ಯ ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷರಾಗಿದ್ದ ಕೆ. ಗೋಪಾಲ ಪೂಜಾರಿಯವರು ಪಡುಕೋಣೆ – ನಾಡಗುಡ್ಡೆಯಂಗಡಿ – ಹರ್ಕೂರು ಮೂರುಕೈ – ಕಟ್ಟಿನಮಕ್ಕಿ – ಬಂಟ್ವಾಡಿ ಮೂಲಕವಾಗಿ ಕುಂದಾಪುರ ಮಾರ್ಗಕ್ಕೆ ಸರಕಾರಿ ಬಸ್ ನೀಡಿದ್ದರು. ಆದರೆ ಕಳೆದ 2 ವರ್ಷಗಳಿಂದ ಇಲ್ಲಿಗೆ ಆ ಸರಕಾರಿ ಬಸ್ ಬರುತ್ತಿಲ್ಲ. ಇದರಿಂದ ಕುಂದಾಪುರ ಕಡೆಗೆ ಹೋಗುವ ಜನ ಸಾಮಾನ್ಯರು, ಅದರಲ್ಲೂ ಪ್ರಮುಖವಾಗಿ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ಪಡುಕೋಣೆ, ನಾಡಗುಡ್ಡೆಯಂಗಡಿ, ಹಡವು, ಬಡಾಕೆರೆ, ಸೇನಾಪುರ ಭಾಗಕ್ಕೆ ಹಿಂದೆ ಪ್ರತಿ ದಿನ 10-12 ಖಾಸಗಿ ಬಸ್‌ಗಳು ಬರುತ್ತಿದ್ದವು. ಆದರೆ ಈಗ ಕೇವಲ 3-4 ಬಸ್‌ಗಳು ಮಾತ್ರ ಬರುತ್ತಿವೆ. ಹಿಂದೆ 30 ಟ್ರಿಪ್ ಬಸ್ ಇದ್ದ ಮಾರ್ಗದಲ್ಲಿ ಈಗ ಬರೀ 10 ಟ್ರಿಪ್ ಕೂಡ ಇಲ್ಲ ಎನ್ನುವುದು ಊರವರ ಆರೋಪ. ನೇತಾಡುವ ಅನಿವಾರ್ಯತೆ
ಬೆಳಗ್ಗೆ ಸಂಜೆ ವೇಳೆ ಈ ಮಾರ್ಗದಲ್ಲಿ ಬಸ್‌ಗಳ ಸಂಖ್ಯೆ ಕಡಿಮೆ ಇರುವುದರಿಂದ ಕೆಲಸಕ್ಕೆ, ಜನ, ಶಾಲಾ- ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಫುಟ್‌ಬೋರ್ಡ್‌ಗಳಲ್ಲಿ ನೇತಾಡಿಕೊಂಡು ಹೋಗುತ್ತಾರೆ.
Related Articles
ಪಡುಕೋಣೆ, ನಾಡಗುಡ್ಡೆಯಂಗಡಿ ಭಾಗಕ್ಕೆ ಈ ಹಿಂದೆ ಹತ್ತಾರು ಬಸ್‌ಗಳು ಬರುತ್ತಿದ್ದವು. ಆದರೆ ಈಗ ಈ ಹೊಂಡಗಳಿಂದ ಕೂಡಿದ ರಸ್ತೆಯಿಂದಾಗಿ ಪರ್ಮಿಟ್ ಇದ್ದರೂ ಬಸ್ ಬರುತ್ತಿಲ್ಲ. ಒಂದು ಸರಕಾರಿ ಬಸ್ ಕೂಡ ಬರುತ್ತಿಲ್ಲ. ಈಗ ಕೆಲವೇ ಬಸ್‌ಗಳು ಇರುವುದರಿಂದ, ಅದು ಕೂಡ ಸಣ್ಣ ಬಸ್ ಆಗಿರುವುದರಿಂದ ಎಲ್ಲ ಬಸ್‌ಗಳು ಬೆಳಗ್ಗೆ ಹಾಗೂ ಸಂಜೆ ವೇಳೆ ತುಂಬಿದ್ದು, ನೇತಾಡಿಕೊಂಡು ಹೋಗುತ್ತಿದ್ದಾರೆ. ಈ ಮಾರ್ಗದಲ್ಲಿ ಬೆಳಗ್ಗೆ ಹಾಗೂ ಸಂಜೆ ಸರಕಾರಿ ಬಸ್ ನೀಡಲಿ.
-ಅರವಿಂದ ಪೂಜಾರಿ,
ಹೊಯ್ಸಳ ಕಲ್ಚರಲ್ ಟ್ರಸ್ಟ್ ನಾಡ
Advertisement
ಸೂಕ್ತ ಕ್ರಮಕೆಲವು ಪರವಾನಿಗೆಯಿದ್ದರೂ, ಅದು ಟೈಮಿಂಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಈ ಬಗ್ಗೆ ಮಾಹಿತಿ ತಿಳಿದುಕೊಂಡು, ವಿಚಾರಿಸಲಾಗುವುದು. ಎಲ್ಲೆಲ್ಲ ಸ್ಥಗಿತ ಗೊಂಡಿದೆ. ಆ ಬಗ್ಗೆ ಶೀಘ್ರ ಮಾಹಿತಿ ಪಡೆಯಲಾಗುವುದು. ಆ ಭಾಗದ ಜನರಿಗೆ ತೊಂದರೆಯಾಗದಂತೆ ಸೂಕ್ತ ಕ್ರಮಕ್ಕೆ ಪ್ರಯತ್ನಿಸಲಾಗುವುದು.
-ರಾಮಕೃಷ್ಣ ರೈ ಪ್ರಾದೇಶಿಕ ಸಾರಿಗೆ ಆಯುಕ್ತರು, ಉಡುಪಿ ಬಸ್ ಮೊಟಕು
ಪಡುಕೋಣೆಯಿಂದ ಗುಡ್ಡೆ
ಯಂಗಡಿಯಾಗಿ ಹಕೂìರು ಮೂರುಕೈ ವರೆಗಿನ 4 ಕಿ.ಮೀ. ರಸ್ತೆಯ ದುಃಸ್ಥಿತಿಯಿಂದಾಗಿ ಈ ಮಾರ್ಗ ದಲ್ಲಿ ಬರುತ್ತಿದ್ದ ಬಸ್‌ಗಳು ಒಂದೊಂ ದಾಗಿಯೇ ಸಂಚಾರವನ್ನು ಮೊಟಕು ಗೊಳಿಸುತ್ತಾ ಬಂದಿವೆ. ಆದರೆ ಈಗ ರಸ್ತೆ ಕಾಮಗಾರಿಗೆ ಅನುದಾನ ಮಂಜೂರಾಗಿ, ಕಾಮಗಾರಿಯೂ ಆರಂಭವಾಗು ತ್ತಿದ್ದು, ಇನ್ನಾದರೂ ಈ ಭಾಗದಲ್ಲಿ ಹಿಂದೆ ಬರುತ್ತಿದ್ದ ಬಸ್‌ಗಳ ಸಂಚಾರ ಮತ್ತೆ ಆರಂಭವಾಗಲಿ ಎನ್ನುವುದು ಊರವರ ಆಗ್ರಹವಾಗಿದೆ. – ಪ್ರಶಾಂತ್ ಪಾದೆ