Advertisement

ಪಶು ಚಿಕಿತ್ಸಾಲಯಗಳಲ್ಲಿ ವೈದ್ಯರಿಲ್ಲ, ಸಿಬಂದಿ ಕೊರತೆ !

06:45 AM Jul 12, 2018 | |

ಪಡುಬಿದ್ರಿ: ಗ್ರಾಮೀಣ ಭಾಗದಲ್ಲಿ ಕೃಷಿಕರಿಗೆ, ಹೈನುಗಾರ ನೆರವು ನೀಡುವ ಉದ್ದೇಶದಿಂದ ಪಶು ಆಸ್ಪತ್ರೆಗಳನ್ನೇನೋ ಸ್ಥಾಪಿಸಲಾಗಿದೆ. ಆದರೆ, ಅವರಿಗೆ ನೆರವಾಗುವ ಮೂಲ ಉದ್ದೇಶಕ್ಕೇ ಈಗ ಹಿನ್ನಡೆಯಾಗಿದೆ. ಕಾರಣ ಸಿಬಂದಿ ಕೊರತೆ. 

Advertisement

ಜಿಲ್ಲೆಯಲ್ಲೇ ಸಿಬಂದಿ ಕೊರತೆ 
ಉಡುಪಿ ಜಿಲ್ಲೆಯಾದ್ಯಂತ ಪಶು ಆಸ್ಪತ್ರೆಗಳಿಗೆ ತೀರ ಸಿಬಂದಿ ಕೊರತೆ ಇದೆ. 1991ರಿಂದ ಇಲಾಖೆ ಸಿಬಂದಿ ಕೊರತೆಯನ್ನು ತೀವ್ರವಾಗಿ ಎದುರಿಸುತ್ತಿದೆ. 2005ರಿಂದ ಸಿಬಂದಿ ನೇಮಕವಾಗದೇ ಇದ್ದು, ಇತ್ತೀಚೆಗಷ್ಟೇ ನೇಮಕಾತಿ ನಡೆದಿದೆ. 

ಗ್ರಾಮೀಣ ಪಶು ಚಿಕಿತ್ಸಾಲಯ, ಪಶು ಚಿಕಿತ್ಸಾಲಯ, ಪಶು ಆಸ್ಪತ್ರೆ ಮತ್ತು ಜಿಲ್ಲಾ ಕೇಂದ್ರದ ಪಾಲಿ ಕ್ಲಿನಿಕ್‌ಗಳು ಜನತೆಗೆ ಕೈಗೆಟುಕುವ ರೀತಿಯಲ್ಲಿ ಸೇವೆ ಸಲ್ಲಿಸಲು ಪಶು ವೈದ್ಯಕೀಯ ಇಲಾಖೆಯ ಮೂಲಕ ಅಲ್ಲಲ್ಲಿ ಸ್ಥಾಪಿತವಾಗಿವೆ. ಆದರೆ ಸಮಗ್ರವಾಗಿ ವಿವಿಧೆಡೆಗಳ ಪಶು ಚಿಕಿತ್ಸಾಲಯಗಳಲ್ಲಿ  ಒಟ್ಟಾರೆ ಸಿಬಂದಿ ಕೊರತೆ ಅಪಾರ ಪ್ರಮಾಣದಲ್ಲಿದೆ. 2005ರಿಂದ ನಡೆಯದ ನೇಮಕಾತಿ ಇದೀಗ ಮೂರು ತಿಂಗಳ ಹಿಂದೆಯಷ್ಟೇ ನಡೆದಿದೆ ಎಂದು ಉಡುಪಿ ಜಿಲ್ಲಾ ಪಶು ಆಸ್ಪತ್ರೆಯ ತಾ|  ಉಪ ನಿರ್ದೇಶಕ ಡಾ|  ಚಂದ್ರಕಾಂತ್‌ ಹೇಳುತ್ತಾರೆ. ಕೆಲವೆಡೆಗಳಲ್ಲಿ ವೈದ್ಯರು ವಿಶೇಷ ಕರ್ತವ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 

1991ರಿಂದಲೇ ತಾವು ಇಲಾಖೆಯಲ್ಲಿ ಇಂತಹಾ ಸಿಬಂದಿ ಕೊರತೆಯೊಂದಿಗೇ ಕರ್ತವ್ಯ ನಿರ್ವಹಿಸುತ್ತಿರುವುದಾಗಿಯೂ,ಈಗಷ್ಟೇ ಉಡುಪಿ ತಾಲೂಕಿಗೆ ಮೂವರು ವೈದ್ಯರ ನಿಯೋಜನೆ ಆಗಿದ್ದರೂ ಇನ್ನೂ ಇಲಾಖೆಯಲ್ಲಿ ಒಟ್ಟು ಮಂಜೂರಾದ ಸಿಬಂದಿ ಸಂಖ್ಯೆಯ ಕೇವಲ 30 ಶೇಕಡಾದಷ್ಟು ಮಾತ್ರ ಸಿಬಂದಿಗಳಿರುವುದಾಗಿ ತಾ| ಉಪ ನಿರ್ದೇಶಕ ಡಾ| ಚಂದ್ರಕಾಂತ್‌ ಹೇಳಿದರು. 

ತೀವ್ರ ಬೇಡಿಕೆಯ ಕಲ್ಯಾಣಪುರ ಪಶು ಚಿಕಿತ್ಸಾಲಯದಲ್ಲಿ ಖಾಯಂ ಹುದ್ದೆ ಹೊಂದಿರುವ ಡಾ| ನವೀನ್‌ ಕುಮಾರ್‌ ಪಡುಬಿದ್ರಿಯಲ್ಲಿ ದಿನ ಬಿಟ್ಟು ದಿನದಂತೆ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ಪಡು ಬಿದ್ರಿಯಲ್ಲಿ ಸಹಾಯಕ ಇನ್ಸ್‌ಪೆಕ್ಟರ್‌ ಶಿವಪುತ್ರಯ್ಯ ಗುರುಸ್ವಾಮಿ ಕಚೇರಿಯ ಪೂರ್ಣಕಾಲಿಕ ಕರ್ತವ್ಯ ನಿರ್ವಹಿಸುತ್ತಿದ್ದು ಇಲ್ಲೂ ಎರಡು “ಡಿ’ ಗ್ರೂಪ್‌ ಸಿಬಂದಿ ಕೊರತೆಯಿದೆ. ಆದರೂ ಎಲ್ಲೂ ನ್ಯೂನ್ಯತೆಯಿಲ್ಲದಂತೆ ಪಶುಗಳ ಆರೋಗ್ಯ ಸೇವೆಯನ್ನು ಸಂಭಾಳಿಸಲಾಗುತ್ತಿದೆ. ಪಶು (ರಾಸು)ಗಳ ಸಂಖ್ಯೆ ಕರಾವಳಿ ಬೆಲ್ಟ್ನಲ್ಲಿ ಕಡಿಮೆಯಾಗಿದೆ. ಮಲೆನಾಡು ಪ್ರದೇಶದಲ್ಲಿ ಉತ್ತಮವಿದೆ. ಈ ಹಿಂದೆ ಮಲೆನಾಡು ಕಿಡ್‌ಗಳು ಎಂಬ ಸ್ಥಳೀಯ ದನಗಳಿದ್ದವು. ಈಗ ಅವುಗಳ ಸಂಖ್ಯೆಯೂ ಕುಸಿತಗೊಂಡಿದೆ. ಈಗ ದನಗಳ ಸಂಖ್ಯೆ ಕಡಿಮೆಯಾಗಿದ್ದರೂ ಅಧಿಕ ಇಳುವರಿಯ ಕ್ರಾಸ್‌ ಬ್ರಿàಡ್‌ಗಳಿಂದಾಗಿ ಹಾಲಿನ ಉತ್ಪಾದನೆಯೇನೂ ಕಡಿಮೆಯಾಗಿಲ್ಲ ಎಂಬ ವಿಚಾರ ಡಾ| ಚಂದ್ರಕಾಂತ್‌ ತಿಳಿಸಿದರು. 

Advertisement

ಕಾಪು ತಾ| ಸ್ಥಿತಿಗತಿ
ಕಾಪು ತಾ|  ಕಟಪಾಡಿಯಲ್ಲಿನ ಪಶು ಚಿಕಿತ್ಸಾಲಯ ದಲ್ಲಿ ಯಾವುದೇ ಸಿಬಂದಿಗಳಿಲ್ಲ. ಶಿರ್ವದಲ್ಲಿ ವೈದ್ಯರೊಬ್ಬರೇ ಇದ್ದಾರೆ. ಪಡು ಬೆಳ್ಳೆಯಲ್ಲೂ ಯಾವ ಸಿಬಂದಿಗಳೂ ಇಲ್ಲ. ಶಿರ್ವದ ವೈದ್ಯರೇ ಪಡುಬೆಳ್ಳೆಗೆ ವಿಶೇಷ ಕರ್ತವ್ಯದಲ್ಲಿದ್ದಾರೆ. ಕಾಪು ತಾ| ಪಶು ಆಸ್ಪತ್ರೆಗೆ 6 ಹುದ್ದೆಗಳಿದ್ದು ಕೇವಲ ಓರ್ವ ವೈದ್ಯರು ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಿ ಮೂಲದ ಸಿಬಂದಿ ನೇಮಕವಾಗದೇ ಇದ್ದರೂ ಈಗ ಕೆಲವೆಡೆಗಳಲ್ಲಿ ಹೊರ ಗುತ್ತಿಗೆ ನೀಡಲಾಗುತ್ತಿದೆ ಎಂಬ ಅಂಶಗಳು ಉಲ್ಲೇಖನೀಯ. 

ಮೂಕ ಪ್ರಾಣಿಗಳ, ಸಾಕು ಪ್ರಾಣಿಗಳ ಸೇವೆಗಾಗಿ ಪಶು ವೈದ್ಯರ ಹಾಗೂ ಅರ್ಹ ಸಿಬಂದಿ ನೇಮಕವಾಗದೇ ಪಡುಬಿದ್ರಿಯಂತಹ ಕೆಲವು ಪ್ರಮುಖ ಪ್ರದೇಶಗಳಲ್ಲಿ ಈ ಪ್ರಾಣಿಗಳ ತುರ್ತು ಸೇವೆಗೆ ತುಂಬಾ ಕ್ಲಿಷ್ಟ ಸನ್ನಿವೇಶಗಳು ಎದುರಾಗುತ್ತಿವೆ ಎಂದು ತಮ್ಮ ಮನೆಯಲ್ಲೇ 11 ಬೆಕ್ಕುಗಳು, 5 ನಾಯಿಗಳನ್ನು ಸಾಕುತ್ತಿರುವ ಪ್ರಕಾಶ್‌ ರಾವ್‌ ಹೇಳುತ್ತಾರೆ. ಇದೇ ವೇಳೆ ರಾಸುಗಳ ಸಂಖ್ಯೆ ತುಲನಾತ್ಮಕವಾಗಿ ಕಡಿಮೆಯಾಗಿದ್ದು ಪಡುಬಿದ್ರಿಪಶು ಚಿಕಿತ್ಸಾಲಯದ ವ್ಯಾಪ್ತಿಯ ಆಸುಪಾಸಿನ ಗ್ರಾಮೀಣ ಭಾಗಗಳಲ್ಲಿನ ರಾಸುಗಳ ಸಂಖ್ಯೆ ಈ ಕೆಳಗಿನಂತಿದೆ.

ಪಡುಬಿದ್ರಿ ಪಶು ಚಿಕಿತ್ಸಾಲಯ ವ್ಯಾಪ್ತಿ
– ಪಾದೆಬೆಟ್ಟು ಗ್ರಾಮ: 257 ದನಗಳು, 4 ಕೋಣಗಳು
– ನಡಾÕಲು ಗ್ರಾಮ: 488 ದನಗಳು, 202 ಮೇಕೆಗಳು
– ಹೆಜಮಾಡಿ ಗ್ರಾಮ: 459 ದನಗಳು
ಎಲ್ಲೂರು ಗ್ರಾಮೀಣ ಪಶು ಚಿಕಿತ್ಸಾಲಯ ವ್ಯಾಪ್ತಿ
– ಅದಮಾರು ಗ್ರಾಮ: 587 ದನಗಳು, 4 ಕೋಣಗಳು
– ತೆಂಕ ಗ್ರಾಮ: 306 ದನಗಳು
– ಬಡಾ ಗ್ರಾಮ: 428 ದನಗಳು.
ಪಲಿಮಾರು ಗ್ರಾ. ಪಶು ಚಿಕಿತ್ಸಾಲಯ ವ್ಯಾಪ್ತಿ
– ಪಲಿಮಾರು ಗ್ರಾಮ: 482 ದನಗಳು, 7 ಕೋಣಗಳು, 79 ಹಂದಿಗಳು
– ನಂದಿಕೂರು ಗ್ರಾಮ: 330 ದನಗಳು, 6 ಕೋಣಗಳು
ಇವುಗಳ ಹೊರತಾಗಿರುವ ಸಾಕು ಪ್ರಾಣಿಗಳು ಅಪಾರವಾಗಿದ್ದು ಈಚೆಗೆ ಒಂದು ವಿದ್ಯುತ್‌ ಶಾಕ್‌ ಆಗಿ ತೊಂದರೆಗೀಡಾದ ಮಂಗನಿಗೂ ಪಡುಬಿದ್ರಿ ಪಶು ಚಿಕಿತ್ಸಾಲಯದಲ್ಲಿ ರಾತ್ರಿಯ ವೇಳೆಯಲ್ಲೂ ಚಿಕಿತ್ಸೆಯನ್ನಿತ್ತು ಅರಣ್ಯ ಇಲಾಖೆ ಸಿಬಂದಿ ಅದನ್ನು ಕಾಡಿಗೆ ಬಿಟ್ಟಿರುವುದೂ ಮನೆ ಮಾತಾಗಿದೆ. ಆದರೂ ಇಲಾಖೆಗೆ ವೈದ್ಯರ, ಸಿಬಂದಿ ನೇಮಕವಾಗಲಿ. ಮೂಕ ಪ್ರಾಣಿಗಳಿಗೂ ಸುವರ್ಣ ಯುಗ ನಿರ್ಮಾಣ ವಾಗಲಿ ಎಂಬುದು “ಉದಯವಾಣಿ’ ಆಶಯ.

ಮುದರಂಗಡಿ ಪ್ರಾಥಮಿಕ 
ಪಶು ಚಿಕಿತ್ಸಾ ಕೇಂದ್ರ

ಇರಬೇಕಾದ ಹುದ್ದೆಗಳು – 2
ಡಿ ದರ್ಜೆ ನೌಕರ 1 ಖಾಲಿ
ಪಶು ವೈದ್ಯಕೀಯ ಪರೀಕ್ಷಕರು 1 (ಅದಮಾರು ಪಶು ವೈದ್ಯಕೀಯ ಪರೀಕ್ಷಕರು ಹೆಚ್ಚುವರಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.)
ಅದಮಾರು ಪ್ರಾಥಮಿಕ 
ಪಶು ಚಿಕಿತ್ಸಾ ಕೇಂದ್ರ

ಇರಬೇಕಾದ ಹುದ್ದೆಗಳು – 2
ಪಶು ವೈದ್ಯಕೀಯ ಪರೀಕ್ಷಕರು 1
ಡಿ ದರ್ಜೆ ನೌಕರ 1 ಖಾಲಿ ಇದೆ.
ವಸಂತ ಮಾದರ್‌ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಸಿಬಂದಿ ಕೊರತೆಯಿದ್ದರೂ ಕಾರ್ಯ ಪ್ರಗತಿ
ಪಶು ವೈದ್ಯಕೀಯ ಇಲಾಖೆಯಲ್ಲಿ ಒಟ್ಟಾರೆ ಇರಬೇಕಾಗಿದ್ದ 376 ಸಿಬಂದಿಯಲ್ಲಿ ಈಗ ನಾವಿರುವುದು ಕೇವಲ 106 ಮಂದಿ ಮಾತ್ರ. ಈ ಸಿಬಂದಿ ಕೊರತೆಯಡಿಯಲ್ಲೂ ಒಬ್ಬರ ಮೇಲೆ ಇಬ್ಬರ ಭಾರ ಬೀಳುವಂತಹ ಕರ್ತವ್ಯಗಳನ್ನು ನಿರ್ವಹಿಸಿ ಜಿಲ್ಲಾವಾರು ಪ್ರತಿ ಪರಿಶೀಲನ ಸಭೆಯಲ್ಲಿ ಇಲಾಖಾ ಪ್ರಗತಿಯು ಶೇ.75ಕ್ಕಿಂತಲೂ ಅಧಿಕವಾಗಿದೆ . ಬ್ರಹ್ಮಾವರ, ಬೈಂದೂರು ಸಹಿತ ಜಿಲ್ಲೆಯ ಎಲ್ಲೆಡೆಗಳಲ್ಲಿ ಸಿಬಂದಿಗಳ ಕೊರತೆ ನಮ್ಮನ್ನು ಕಾಡುತ್ತಿದೆ. ಪಶುವೈದ್ಯರ ಸಂಖ್ಯೆ ಇಡಿಯ ಜಿಲ್ಲೆಯಲ್ಲಿ ಈಗ 18ಮಂದಿಯಷ್ಟು ಕೊರತೆಯಿದೆ. ಪಶು ವೈದ್ಯಕೀಯ ಪರೀಕ್ಷರ ಸಂಖ್ಯೆ ಸುಮಾರು 50ರಷ್ಟು ಕೊರತೆಯಿದೆ. ಸದ್ಯ ಈ ಬಾರಿಯಷ್ಟೇ ನೇಮಕಾತಿಗೊಂಡಿರುವ ವೈದ್ಯರಲ್ಲಿ 5 ಮಂದಿ ಉಡುಪಿ ಜಿಲ್ಲೆಗೆ ನೇಮಕಗೊಂಡಿದ್ದು ಬೈರಂಪಳ್ಳಿ, ಕಳೂ¤ರು ಸಂತೆಕಟ್ಟೆ, ಪಳ್ಳಿ, ಪೆರ್ಡೂರು, ನೀರೇ ಬೈಲೂರುಗಳಲ್ಲಿ ಇವರು ಮುಂದಿನ ದಿನಗಳಲ್ಲಿ ಕರ್ತವ್ಯ ನಿರ್ವಹಿಸಲಿರುವರು.
– ಡಾ | ಸುಬ್ರಹ್ಮಣ್ಯ ಉಡುಪ
ಪಶು ವೈದ್ಯಕೀಯ ಇಲಾಖಾ ಜಿಲ್ಲಾ ಉಪ ನಿರ್ದೇಶಕ 

– ಆರಾಮ

Advertisement

Udayavani is now on Telegram. Click here to join our channel and stay updated with the latest news.

Next