Advertisement

Padubidri ; ಗಾಂಜಾ ಮಾರಾಟ: ಆರೋಪಿ ಬಂಧನ; 1.720ಕೆಜಿ ಗಾಂಜಾ, ಮೊಬೈಲ್‌ ವಶ

06:22 PM Sep 01, 2023 | Team Udayavani |

ಪಡುಬಿದ್ರಿ: ನಂದಿಕೂರು ಕೈಗಾರಿಕಾ ಪ್ರದೇಶದ ರಸ್ತೆ ಬದಿಯ ಮೋರಿಯಲ್ಲಿ ಕುಳಿತು ತನ್ನ ಗಾಂಜಾ ಮಾರಾಟ ವ್ಯವಹಾರಕ್ಕೆ ಹವಣಿಸುತ್ತಿದ್ದ ಬಳ್ಕುಂಜೆ ನಿವಾಸಿ ಅನ್ಸಿಫ್‌(29) ಎಂಬಾತನನ್ನು ಸೆ. 1ರಂದು ಹಗಲು ಗಸ್ತಿನಲ್ಲಿದ್ದ ಪಡುಬಿದ್ರಿ ಠಾಣಾ ಕ್ರೈಂ ಪಿಎಸ್‌ಐ ಸುದರ್ಶನ್‌ ದೊಡ್ಡಮನಿ ಹಾಗೂ ಸಿಬಂದಿಗಳು ಬಂಧಿಸಿದ್ದಾರೆ.

Advertisement

ಆತನಿಂದ 77000ರೂ. ಮೌಲ್ಯದ 1.720ಕೆಜಿ ಗಾಂಜಾ ಹಾಗೂ ಮೊಬೈಲ್‌ ಒಂದನ್ನು ವಶಪಡಿಸಿಕೊಳ್ಳಲಾಗಿದೆ.

ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣವು ದಾಖಲಾಗಿದ್ದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next