ಪಡುಬಿದ್ರಿ : ಬೆಳ್ಳಂಬೆಳಗ್ಗೆ ಪಡುಬಿದ್ರಿ ಪೇಟೆಯಲ್ಲಿ ಕಳ್ಳತನಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಹಿಡಿಯಲು ಬಂದ ಪೊಲೀಸ್ ಕಾನ್ಸ್ ಸ್ಟೇಬಲ್ ಮೇಲೆ ಕಬ್ಬಿಣ ರಾಡ್ ನಿಂದ ಹಲ್ಲೆಮಾಡಿ ಪರಾರಿಯಾದ ಘಟನೆ ಬುಧವಾರ ಬೆಳಿಗ್ಗೆ ಸಂಭವಿಸಿದೆ.
ಘಟನೆಯಲ್ಲಿ ಪಿಸಿ ಯೋಗೀಶ್ ಅವರ ಮೂಗಿಗೆ ಗಂಭೀರ ಗಾಯಗೊಂಡರೂ ಕಳ್ಳನನ್ನು ಬೆಂಬತ್ತಿದರೂ ಆತ ಅಬ್ಬೇಡಿ ರಸ್ತೆಯಲ್ಲಿ ಓಡಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.
ಗಂಭೀರ ಗಾಯಗೊಂಡ ಪಿಸಿ ಯೋಗೀಶ್ ಅವರ ಮೂಗಿಗೆ ಒಂಬತ್ತು ಹೊಲಿಗೆಗಳನ್ನು ಹಾಕಲಾಗಿದೆ.
ಘಟನೆ ವಿವರ : ಪಡುಬಿದ್ರಿ ಪೇಟೆಯಲ್ಲಿ ಬೆಳ್ಳಂಬೆಳಗ್ಗೆ ಓರ್ವ ಯುವಕ ಅನುಮಾನಾಸ್ಪದವಾಗಿ ಅತ್ತಿತ್ತ ಓಡಾಡುತ್ತಿರುವುದನ್ನು ಅಲ್ಲಿನ ಸ್ಥಳೀಯರು ಗಮನಿಸಿದ್ದಾರೆ ಅನುಮಾನಗೊಂಡ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಿದ್ದಾರೆ, ಅಷ್ಟೊತ್ತಿಗೆ ಇಬ್ಬರು ಪೊಲೀಸರು ವ್ಯಕ್ತಿಯ ಬಳಿ ತೆರಳಿದ್ದಾರೆ ಆದರೆ ಪೊಲೀಸರು ಹತ್ತಿರ ಬರುವುದನ್ನು ಗಮನಿಸಿದ ವ್ಯಕ್ತಿ ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡ್ ನಿಂದ ಪಿಸಿ ಯೋಗೀಶ್ ಅವರ ಮೇಲೆ ಹಲ್ಲೆ ನಡೆಸಿದ್ದಾನೆ, ಆದರೂ ಬೆಂಬಿಡದ ಪೊಲೀಸರು ಆತನನ್ನು ಹಿಡಿಯಲು ಪ್ರಯತ್ನಿಸಿದರೂ ಆತ ಪಕ್ಕದಲ್ಲೇ ಇದ್ದ ಅಬ್ಬೇಡಿ ರಸ್ತೆಯಲ್ಲಿ ಓಡಿ ಪರಾರಿಯಾಗಿದ್ದಾನೆ.
ಇದನ್ನೂ ಓದಿ:ಮೊನ್ನೆ ಹೇಗೋ ಬದುಕಿದ್ದೇವೆ; ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಖಂಡಿತ ಮುಳುಗುತ್ತೇವೆ !
ಕಳ್ಳತನಕ್ಕೆ ಯತ್ನಿಸುತ್ತಿದ್ದ ವ್ಯಕ್ತಿ ತುಳು ಭಾಷೆಯಲ್ಲಿ ಮಾತನಾಡುತಿದ್ದ ಎಂದು ಆತನನ್ನು ಗಮನಿಸಿದ ಕೆಲವರು ಹೇಳಿದ್ದಾರೆ.ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಳ್ಳನ ಬಂಧನಕ್ಕೆ ಬಲೆ ಬೀಸಿದ್ದಾರೆ.