Advertisement
2019ರ ಜುಲೈಯಲ್ಲಿ ಹೊರಬಿದ್ದಿದ್ದ ಆದೇಶದ ಪ್ರಕಾರ 13 ತೀರಗಳಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾದ ಸೌಲಭ್ಯಗಳನ್ನು ನಿರ್ಮಿಸಲು ಸಿಆರ್‌ಝಡ್ ನಿಯಮಗಳು, ದ್ವೀಪಗಳ ಸಂರಕ್ಷಣ ವಲಯ ನಿಯಮಗಳು, ದ್ವೀಪಗಳ ನಿಯಂತ್ರಣ ವಲಯ ನಿಯಮಗಳ ಅಡಿಯಲ್ಲಿ ನಾನಾ ಪ್ರಮಾಣ ಪತ್ರಗಳನ್ನು ಪಡೆಯಬೇಕಿತ್ತು. ಆದರೆ ಜ. 9ರಂದು ಕೇಂದ್ರ ಹೊರಡಿಸಿರುವ ಆದೇಶದಲ್ಲಿ ಆ ಪ್ರಮಾಣ ಪತ್ರಗಳಿಂದ ವಿನಾಯಿತಿ ನೀಡಲಾಗಿದೆ. ಜತೆಗೆ ಬ್ಲೂ ಫ್ಲ್ಯಾಗ್ ನಿಯಮಗಳಿಗೆ ಅನುಗುಣವಾಗಿ 18 ಸೌಕರ್ಯಗಳನ್ನು ಕಲ್ಪಿಸಲು ಅನುವು ಮಾಡಿಕೊಡಲಾಗಿದೆ.
ಯಾವುದೇ ಬೀಚ್‌ನಲ್ಲಿ ಪ್ರವಾಸೋದ್ಯಮ ಸಂಬಂಧಿತ ಸೌಲಭ್ಯಗಳನ್ನು ಪರಿಸರಕ್ಕೆ ಹಾನಿಯಾಗದಂತೆ ಪ್ರವಾಸಿಗರ ಸುರಕ್ಷತೆಗೆ ಒತ್ತು ನೀಡುವಂತೆ ಕಲ್ಪಿಸಲಾಗಿದೆಯೋ ಆ ತೀರಗಳಿಗೆ “ಬ್ಲೂ ಫ್ಲಾಗ್’ ಮಾನ್ಯತೆ ನೀಡಲಾಗುತ್ತದೆ. ಡೆನ್ಮಾರ್ಕ್‌ನ ಸಂಸ್ಥೆ ಪ್ರಮಾಣ ಪತ್ರ ನೀಡುತ್ತದೆ. ಇದನ್ನು ಭಾರತ ಸಹಿತ 47 ರಾಷ್ಟ್ರಗಳು ಮಾನ್ಯ ಮಾಡಿವೆ.