ಮಣಿಪಾಲ: ಕರ್ನಾಟಕದ ಪಡುಬಿದ್ರಿ, ಕಾಸರಕೋಡ್, ಕೇರಳದ ಕಪ್ಪಡ್ ಸಮುದ್ರ ತೀರಗಳು ಸಹಿತ ದೇಶದ ಎಂಟು ಬೀಚ್ ಗಳಿಗೆ “ಬ್ಲೂ ಫ್ಲ್ಯಾಗ್’ ಪ್ರಮಾಣಪತ್ರವನ್ನು ನೀಡಲಾಗಿದೆ.
ದೇಶದ ಎಂಟು ಬೀಚ್ ಗಳಿಗೆ ಇಂದು ಬ್ಲೂ ಫ್ಲ್ಯಾಗ್ ಮಾನ್ಯತೆ ನೀಡಲಾಗಿದೆ. ಶಿವರಾಜ್ ಪುರ್ (ಗುಜರಾತ್), ಘೋಗ್ಲಾ (ದಿಯು), ಕಾಸರಕೋಡ್ ( ಕರ್ನಾಟಕ) ಪಡುಬಿದ್ರಿ (ಕರ್ನಾಟಕ), ಕಪ್ಪಡ್( ಕೇರಳ) ಋಷಿಕೊಂಡ ( ಆಂಧ್ರಪ್ರದೇಶ), ಗೋಲ್ಡನ್ ( ಒಡಿಶಾ), ರಾಧಾನಗರ್ (ಅಂಡಾಮಾನ್) ಸಮುದ್ರ ತೀರಗಳಿಗೆ ಮಾನ್ಯತೆ ನೀಡಲಾಗಿದೆ.
ಇದನ್ನೂ ಓದಿ:ಬ್ರಹ್ಮಾವರ ಸೇವಾ ಸಿಂಧು ಕಚೇರಿಗೆ ನುಗ್ಗಿದ ಬಸ್: ತಪ್ಪಿದ ಭಾರಿ ಅನಾಹುತ!
ಏನಿದು ಬ್ಲೂ ಫ್ಲಾಗ್?
ಯಾವುದೇ ಬೀಚ್‌ನಲ್ಲಿ ಪ್ರವಾಸೋದ್ಯಮ ಸಂಬಂಧಿತ ಸೌಲಭ್ಯಗಳನ್ನು ಪರಿಸರಕ್ಕೆ ಹಾನಿಯಾಗದಂತೆ ಪ್ರವಾಸಿಗರ ಸುರಕ್ಷತೆಗೆ ಒತ್ತು ನೀಡುವಂತೆ ಕಲ್ಪಿಸಲಾಗಿದೆಯೋ ಆ ತೀರಗಳಿಗೆ “ಬ್ಲೂ ಫ್ಲಾಗ್’ ಮಾನ್ಯತೆ ನೀಡಲಾಗುತ್ತದೆ.
ಅಂತಾರಾಷ್ಟ್ರೀಯ ಮಟ್ಟದ, ಡೆನ್ಮಾರ್ಕ್ ನಲ್ಲಿರುವ “ಫೌಂಡೇಶನ್ ಫಾರ್ ಎನ್ವಿರಾನ್ಮೆಂಟ್ ಎಜುಕೇಷನ್ ” ಸಂಸ್ಥೆಯು ಪರಿಸರ ಶಿಕ್ಷಣ ಮತ್ತು ಮಾಹಿತಿ, ನೀರಿನ ಗುಣಮಟ್ಟ, ಪರಿಸರ ನಿರ್ವಹಣೆ ಮತ್ತು ಸಂರಕ್ಷಣೆ, ಭದ್ರತೆ ಹಾಗೂ ಸೇವೆ ಎಂಬ ಪ್ರಮುಖ ನಾಲ್ಕು ಭಾಗಗಳಲ್ಲಿ 33 ಮಾನದಂಡಗಳನ್ನಿಟ್ಟುಕೊಂಡು ಈ ಮಾನ್ಯತೆಯನ್ನು ನೀಡುತ್ತದೆ.ಇದನ್ನು ಭಾರತ ಸಹಿತ 47 ರಾಷ್ಟ್ರಗಳು ಮಾನ್ಯ ಮಾಡಿವೆ. ಬ್ಲೂ ಫ್ಲ್ಯಾಗ್ ಮಾನ್ಯತೆ ಪಡೆದ ಬೀಚ್ ಗಳನ್ನು ವಿಶ್ವದ ಅತಿ ಸ್ವಚ್ಛ ಕಡಲ ತಡಿಗಳೆಂದು ಪರಿಗಣಿಸಲಾಗುತ್ತದೆ.