Advertisement

Padubidire: ಕಂಚಿನಡ್ಕ: ಟೋಲ್‌ಗೇಟ್‌ಗೆ ಭೂಮಿಪೂಜೆಗೆ ವಿರೋಧ

01:43 AM Aug 11, 2024 | Team Udayavani |

ಪಡುಬಿದ್ರಿ : ಕಾರ್ಕಳ – ಪಡುಬಿದ್ರಿ ರಾಜ್ಯ ಹೆದ್ದಾರಿ 1ರ ಕಂಚಿನಡ್ಕದಲ್ಲಿ ಟೋಲ್‌ಗೇಟ್‌ಗೆ ಶನಿವಾರ ಭೂಮಿಪೂಜೆ ನಡೆದಿದೆ.
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (ಕೆಆರ್‌ಡಿಸಿಎಲ್‌) ಮೂಲಕ ಕಾರ್ಯಾದೇಶವಾಗಿ ಆ. 16ರಿಂದಲೇ ವಸೂಲಾತಿಗೆ ಸಿದ್ಧಗೊಳ್ಳಬೇಕಾಗಿತ್ತು ಎಂದು ಹೇಳಲಾಗಿದೆ.

Advertisement

ಸ್ಥಳಕ್ಕೆ ಧಾವಿಸಿದ ಕರ್ನಾಟಕ ರಕ್ಷಣ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಅನ್ಸರ್‌ ಅಹಮ್ಮದ್‌, ನಿಝಾಮ್‌, ಮನ್ಸೂರ್‌ ಮತ್ತಿತರರು ಹಾಗೂ ಸ್ಥಳೀಯ ಮುಖಂಡರಾದ ಸಂತೋಷ್‌ ಕುಮಾರ್‌ ಶೆಟ್ಟಿ, ಅಶೋಕ್‌ ಶೆಟ್ಟಿ, ಆರ್‌ಟಿಐ ಕಾರ್ಯಕರ್ತ ರಾಮನಾಥ ಶೆಟ್ಟಿ, ಉದಯಕುಮಾರ್‌ ಶೆಟ್ಟಿ, ಮಾಜಿ ಜಿ. ಪಂ. ಸದಸ್ಯೆ ರೇಶ್ಮಾ ಉದಯ ಶೆಟ್ಟಿ, ಹರೀಶ್‌ ಶೆಟ್ಟಿ ಪಾದೆಬೆಟ್ಟು, ನವೀನ್‌ ಎನ್‌. ಶೆಟ್ಟಿ, ಕರುಣಾಕರ ಪೂಜಾರಿ, ಗಣೇಶ್‌ ಕೋಟ್ಯಾನ್‌ ಮತ್ತಿತರರು ಹಾಗೂ ಟೋಲ್‌ ಉಪ ಗುತ್ತಿಗೆದಾರ ವಿಜಯ್‌ ಖಾರ್ವಿ, ಮಂಜು ಮತ್ತಿತರರ ನಡುವೆ ಮಾತಿನ ಚಕಮಕಿ ನಡೆದಿದೆ.

ಇಂದು ನಡೆಸಿದ್ದ ಭೂಮಿ ಪೂಜೆಯ ಕಲ್ಲನ್ನೂ ಕೊಂಡೊಯ್ಯಬೇಕು ಎಂದು ಟೋಲ್‌ ವಿರೋಧಿಗಳು ಆಗ್ರಹಿಸಿದ್ದು, ಅದರಂತೆ ಗುತ್ತಿಗೆದಾರರು ಆ ಕಲ್ಲನ್ನು ತಮ್ಮ ಜತೆ ಒಯ್ದಿದ್ದಾರೆ. ಪಡುಬಿದ್ರಿ ಎಸ್‌ಐ ಪ್ರಸನ್ನ ನೇತೃತ್ವದ ಪೊಲೀಸರ ತಂಡ ಆಗಮಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡಿತು.

ಟೋಲ್‌ಗೆ ಕಂಚಿನಡ್ಕ ಪ್ರದೇಶವೇ ಅಪ್ರಸ್ತುತ
ಟೋಲ್‌ ನಿರ್ಮಿಸಲು ಮುಂದಾಗಿ ರುವ ಪ್ರದೇಶವು ಅತ್ಯಂತ ಕಡಿದಾದ ತಿರುವಾಗಿದೆ. ಇದು ಎಸ್‌ಇಝೆಡ್‌ ಪ್ರದೇಶವಾಗಿದ್ದು, ಇಲ್ಲಿನ ಹಲವು ಕೈಗಾರಿಕೆಗಳ ಬೃಹತ್‌ ವಾಹನಗಳು ಸಂಚರಿಸುವ ಸ್ಥಳವಾಗಿದೆ. ಈ ಭಾಗವು ಅಪಘಾತ ವಲಯವಾಗಿ ಗುರುತಿಸಲ್ಪಟ್ಟಿದೆ. ಹೆದ್ದಾರಿಯಲ್ಲೇ ಎರಡು ಅಗಲ ಕಿರಿದಾದ ಸೇತುವೆಗಳಿವೆ. ಇಲ್ಲಿನ ಆರೇಳು “ಬ್ಲ್ಯಾಕ್‌ ಸ್ಪಾಟ್‌’ಗಳ ಗಣನೆಗೆ ತೆಗೆದುಕೊಳ್ಳಲಾಗಿಲ್ಲ. ಕೇವಲ 5 ಕಿ.ಮೀ. ವ್ಯಾಪ್ತಿಯಲ್ಲಿ ಹೆಜಮಾಡಿ ಟೋಲ್‌ಗೇಟ್‌ ಕಾರ್ಯವೆಸಗುತ್ತಿದೆ ಎಂದು ಪ್ರತಿಭಟನಾಕಾರ ರಾಮನಾಥ ಶೆಟ್ಟಿ ಟೋಲ್‌ ಗುತ್ತಿಗೆದಾರರಿಗೆ ತಿಳಿಸಿದರು.

ಎಸ್‌ಇಝೆಡ್‌ಗೆ ತೊಂದರೆ
ಕೇಂದ್ರ ಸರಕಾರದ ಎಸ್‌ಇಝೆಡ್‌ನ‌ ಈ ಪ್ರದೇಶದಲ್ಲಿ ರಾಜ್ಯ ಸರಕಾರದ ಮೂಲಕ ಕೆಆರ್‌ಡಿಸಿಎಲ್‌ ಟೋಲ್‌ ಗೇಟ್‌ ನಿರ್ಮಿಸಿದರೆ ಎಸ್‌ಇಝೆಡ್‌ಗೆ ಕಚ್ಚಾವಸ್ತು ಬರುವ ಅನೇಕ ಘನ ವಾಹನಗಳ ಸಂಚಾರಕ್ಕೆ ಅಡೆತಡೆ ಯಾಗಲಿದೆ ಎಂದು ಆಸ್ಪೆನ್‌ ಇನಾ#† ಹೆಡ್‌ ಅಶೋಕ್‌ ಶೆಟ್ಟಿ ಹೇಳಿದರು.

Advertisement

ಶಾಸಕರ ಎಚ್ಚರಿಕೆ
ಈ ನಡುವೆ ಮೈಸೂರಿನಿಂದ ಮೊಬೈಲ್‌ ಮೂಲಕ ಈ ಕುರಿತಾಗಿ ಪ್ರತಿಕ್ರಿಯಿಸಿದ ಕಾಪು ಶಾಸಕ ಸುರೇಶ್‌ ಶೆಟ್ಟಿ ಗುರ್ಮೆ, ಪಡುಬಿದ್ರಿಯಲ್ಲಿ ಇನ್ನೊಂದು ಟೋಲ್‌ಗೇಟನ್ನು ಸ್ಥಳೀಯರ ಮೇಲೆ ಹೇರ ಬಾರದು. ನಾನೇ ಬರುವವರೆಗೆ ಯಾವು
ದೇ ಕೆಲಸ ಕಾರ್ಯಗಳನ್ನು ಮುಂದುವರಿ ಸಬಾರದಾಗಿ ಕೆಆರ್‌ಡಿಸಿಎಲ್‌ ಎಂಜಿನಿ ಯರ್‌ ಮಂಜುನಾಥ್‌ಗೆ ತಿಳಿಸಿದ್ದಾರೆ.
ನಾವು ಸಾರ್ವಜನಿಕ ಗಮನಕ್ಕೆ ತಂದೇ ಕಾಮಗಾರಿ ಮುಂದುವರಿಸುವುದಾಗಿ ಉಪ ಗುತ್ತಿಗೆದಾರರು ಹೇಳಿದ್ದಾರೆ. ಸೋಮವಾರ ಅಧಿಕಾರಿಗಳ ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬರಲಾಗುವು ದೆಂದು ಹೇಳಿ ಮರಳಿದ್ದಾರೆ.

ಹೆಜ್ಜೆಗೊಂದರಂತೆ ಟೋಲ್‌ಗ‌ಳು ಆರಂಭವಾಗುತ್ತಿದ್ದು, ಅಪಘಾತ ವಲ ಯವಾಗಿರುವ ಕಂಚಿನಡ್ಕದಲ್ಲಿ ಟೋಲ್‌ಗೇಟ್‌ ತೆರೆಯಲು ನಾವು ಬಿಡುವುದಿಲ್ಲ. ಹೆದ್ದಾರಿ ಪ್ರಯಾಣಿಕರ ಸುಲಿಗೆ ಮುಂದುವರಿಸಬಾರದು ಎಂದು ಬೆಳಪು ಗ್ರಾ. ಪಂ. ಅಧ್ಯಕ್ಷ ಡಾ| ದೇವಿಪ್ರಸಾದ್‌ ಶೆಟ್ಟಿ ಬೆಳಪು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next