Advertisement

Padubelle: ಅಕ್ರಮ ಮರಳು ಸಾಗಾಟದ ಟೆಂಪೋ ವಶ

09:26 PM Feb 10, 2024 | Team Udayavani |

ಶಿರ್ವ: ಇಲ್ಲಿನ ಪೊಲೀಸ್‌ ಠಾಣಾ ವ್ಯಾಪ್ತಿಯ ಪಡುಬೆಳ್ಳೆ ಸ.ಹಿ.ಪ್ರಾ. ಶಾಲೆಯ ಬಳಿ ಕುಂತಳನಗರ-ಪಡುಬೆಳ್ಳೆ ಮಾರ್ಗವಾಗಿ ಪರವಾನಿಗೆಯಿಲ್ಲದೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಸುಮಾರು 10 ಲಕ್ಷ ರೂ. ಮೌಲ್ಯದ ಟೆಂಪೋ ಮತ್ತು ಚಾಲಕನನ್ನು ಶಿರ್ವ ಪೊಲೀಸ್‌ ಉಪನಿರೀಕ್ಷಕ ಸಕ್ತಿವೇಲು ಇ. ನೇತೃತ್ವದಲ್ಲಿ ಪೊಲೀಸರು ಶುಕ್ರವಾರ ವಶಕ್ಕೆ ಪಡೆದಿದ್ದಾರೆ.

Advertisement

ಟೆಂಪೋದಲ್ಲಿ ಸುಮಾರು 5 ಸಾವಿರ ರೂ. ಮೌಲ್ಯದ ಒಂದೂವರೆ ಯೂನಿಟ್‌ ಅಕ್ರಮ ಮರಳು ಇತ್ತು. ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next