Advertisement

ವಿವಾದಳಿಗೆಲ್ಲಾ ಅಂತ್ಯ ಹಾಡಲಿದೆಯೇ ಪದ್ಮಾವತಿ 2 ನೇ ಟ್ರೈಲರ್‌? 

12:03 PM Dec 01, 2017 | Team Udayavani |

ಮುಂಬಯಿ: ಭಾರಿ ವಿವಾದಕ್ಕೆ ಗುರಿಯಾಗಿ ಬಿಡುಗಡೆಗೆ ಎದುರು ನೋಡುತ್ತಿರುವ ಪದ್ಮಾವತಿ ಚಿತ್ರದ ಇನ್ನೊಂದು ಟ್ರೈಲರ್‌ ಬಿಡುಗಡೆಯಾಗುವ ಸಾಧ್ಯತೆಗಳಿವೆ. 

Advertisement

ಹೊತ್ತಿಕೊಂಡಿರುವ ವಿವಾದದ ಬೆಂಕಿಯನ್ನು ನಂದಿಸುವ ಸಲುವಾಗಿ ಚತ್ರತಂಡ ಇನ್ನೊಂದು ಟ್ರೈಲರ್‌ ಬಿಡುಗಡೆ ಮಾಡುಲು ಮುಂದಾಗಿದ್ದು ಟ್ರೈಲರ್‌ನಲ್ಲಿ ಮುಖ್ಯವಾಗಿ ರಜಪೂತರ ಶೌರ್ಯ ಮತ್ತು ಸಾಹಸ ವರ್ಣಿಸಿ , ಮಹಾರಾವಲ್‌ ರತನ್‌ ಸಿಂಗ್‌ ಮತ್ತು ರಾಣಿ ಪದ್ಮಾವತಿ  ಪಾತ್ರಗಳನ್ನು ಮಾತ್ರ ಪ್ರದರ್ಶಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಡಿಸೆಂಬರ್‌ 1 ರಂದು ಬಿಡುಗಡೆಯಾಗಬೇಕಿದ್ದ ಸಂಜಯ್‌ಲೀಲಾ ಬನ್ಸಾಲಿ ನಿರ್ದೇಶನದ ಭಾರೀ ಬಜೆಟ್‌ನ ಚಿತ್ರ ಕ್ಕೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ಸರ್ಟಿಫಿಕೇಟನ್ನು ಇದುವರೆಗೆ ನೀಡಿಲ್ಲ.

ಚಿತ್ರದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಮತ್ತು ರಾಣಿ ಪದ್ಮಾವತಿ ಗೆ ಸಂಬಂಧ ಕಲ್ಪಿಸಿದ್ದಾರೆ ಎಂದು ಆರೋಪಿಸಿ  ದೇಶಾದ್ಯಂತ ರಜಪೂತ ಸಂಘಟನೆಗಳು ಮತ್ತು ಹಿಂದೂ ಪರ ಸಂಘಟನೆಗಳು ವ್ಯಾಪಕ ಪ್ರತಿಭಟನೆ ನಡೆಸಿದ್ದರಿಂದ ಚಿತ್ರಕ್ಕೆ ಸಂಕಷ್ಟ ಎದುರಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next