ಹೊಸದಿಲ್ಲಿ /ಲಂಡನ್: ವಿವಾದಕ್ಕೆ ಗುರಿಯಾಗಿ ಸಂದಿಗ್ಧತೆಗೆ ಸಿಲುಕಿರುವ “ಪದ್ಮಾವತಿ’ ಚಿತ್ರಕ್ಕೆ ಭಾರತದ ಸೆನ್ಸಾರ್ ಮಂಡಳಿ ಪ್ರಮಾಣಪತ್ರವೇ ಇನ್ನೂ ಸಿಕ್ಕಿಲ್ಲ. ಅಷ್ಟರಲ್ಲಾ ಗಲೇ ಲಂಡನ್‌ನಲ್ಲಿ ಚಿತ್ರದ ಬಿಡುಗಡೆಗೆ ಬ್ರಿಟಿಷ್ ಬೋರ್ಡ್ ಆಫ್ ಫಿಲಂ ಕ್ಲಾಸಿಫಿ ಕೇಷನ್(ಬಿಬಿಎಫ್ಸಿ) ಹಸಿರು ನಿಶಾನೆ ತೋರಿದೆ. ಚಿತ್ರದ ಯಾವುದೇ ದೃಶ್ಯಕ್ಕೂ ಕತ್ತರಿ ಹಾಕದೇ ಪ್ರದರ್ಶನ ಮಾಡಲು ಅವ ಕಾಶ ನೀಡಲಾಗಿದೆ. ಆದರೆ, ಸಿಬಿಎಫ್ಸಿ ಪ್ರಮಾಣಪತ್ರ ನೀಡುವ ವರೆಗೂ ಜಗತ್ತಿನ ಎಲ್ಲೂ ಸಿನೆಮಾವನ್ನು ಬಿಡುಗಡೆ ಮಾಡುವುದಿಲ್ಲ ಎಂದು ಚಿತ್ರ ನಿರ್ಮಾಣ ಸಂಸ್ಥೆ ಗುರುವಾರ ಸ್ಪಷ್ಟಪಡಿಸಿದೆ.
ಈ ನಡುವೆಯೇ, ಸಿನೆಮಾ ವಿದೇಶಗಳಲ್ಲಿ ಬಿಡುಗಡೆ ಮಾಡಲು ಅವಕಾಶ ನೀಡಬಾರದು ಎಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಹೊಸ ಅರ್ಜಿ ಸಲ್ಲಿಕೆಯಾ ಗಿದೆ. 28ರಂದು ಅರ್ಜಿ ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ಹೇಳಿದೆ.
ಶಾಲೆಯಲ್ಲೂ ನಿಷೇಧ!: ಶಾಲೆಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪದ್ಮಾವತಿ ಸಿನಿಮಾದ ಹಾಡನ್ನು ಹಾಕುವುದಕ್ಕೆ ನಿಷೇಧಿಸಿ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಶಿಕ್ಷಣ ಅಧಿಕಾರಿ ಯೊಬ್ಬರು ಶಾಲೆಗಳಿಗೆ ಸುತ್ತೋಲೆ ಕಳುಹಿ ಸಿದ ಪ್ರಸಂಗ ನಡೆದಿದೆ. ಸಿನಿಮಾದ “ಘೂಮರ್’ ಹಾಡು ಈಗಾಗಲೇ ಜನಪ್ರಿಯವಾಗಿದ್ದು, ಶಾಲಾ ಮಕ್ಕಳು ಆ ಹಾಡಿಗೆ ನೃತ್ಯ ಮಾಡುವುದು, ಅದನ್ನು ಹಾಡುವುದು ಮಾಡುವಂತಿಲ್ಲ ಎಂದು ಸೂಚಿಸಲಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಶಿಕ್ಷಣಾಧಿಕಾರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿರುವ ಜಿಲ್ಲಾಧಿಕಾರಿ, ಕೂಡಲೇ ಸುತ್ತೋಲೆ ವಾಪಸ್ ಪಡೆಯುವಂತೆ ಸೂಚಿಸಿದ್ದಾರೆ.