ವನ್ನು ಖಂಡಿಸಿ ರವಿವಾರ ಭಾರತೀಯ ಚಿತ್ರೋದ್ಯಮವು 15 ನಿಮಿಷಗಳ ಕಾಲ ಚಿತ್ರೀಕರಣ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಿವೆ.
Advertisement
ನಿರ್ದೇಶಕರು, ನಿರ್ಮಾಪಕರಿಂದ ಹಿಡಿದು ಮೇಕಪ್ ಕಲಾವಿದರವರೆಗೂ ಸಾವಿರಾರು ಮಂದಿ “ನಾನು ಸ್ವತಂತ್ರನೇ?'(ಮೇ ಆಜಾದ್ ಹೂಂ?) ಎಂಬ ಹೆಸರಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಕ್ರಿಯಾಶೀಲ ಕ್ಷೇತ್ರದಲ್ಲಿ ದುಡಿಯುವವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವ ಸಲುವಾಗಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಭಾರತೀಯ ಸಿನಿಮಾ ಮತ್ತು ಟಿವಿ ನಿರ್ದೇಶಕರ ಸಂಘ(ಐಎಫ್ಟಿಡಿಎ) ಹಾಗೂ ಚಿತ್ರೋದ್ಯಮದ ಇತರೆ 19 ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿವೆ. ಅದರಂತೆ, ನಟ-ನಟಿಯರು, ನಿರ್ದೇಶಕರು, ಸಿನೆಮಾಟೋಗ್ರಾಫರ್‌ಗಳು, ಸ್ಕ್ರೀನ್ ರೈಟರ್‌ಗಳು, ಧ್ವನಿ ಕಲಾವಿದರು, ಮೇಕಪ್ ಕಲಾವಿದರು, ಕೇಶ ವಿನ್ಯಾಸಕರು, ಸಾಹಸ ಕಲಾವಿದರು ಸಹಿತ ಸಿನಿಮಾ ಕ್ಷೇತ್ರದಲ್ಲಿರುವ ಎಲ್ಲರೂ ಮುಂಬಯಿಯ ಫಿಲಂ ಸಿಟಿಯಲ್ಲಿ ಸಂಜೆ 3.30ಕ್ಕೆ ಪ್ರತಿಭಟನೆ ನಡೆಸಲಿದ್ದಾರೆ. ಅದಕ್ಕೂ ಮುನ್ನ 26/11ರ ದಾಳಿಯಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದೇವೆ. ಜತೆಗೆ, ದೇಶಾದ್ಯಂತ ಸಂಜೆ 4.15ರಿಂದ 4.30ರವರೆಗೆ ಚಿತ್ರೀಕರಣವನ್ನು ಸ್ಥಗಿತಗೊಳಿಸಿ ಖಂಡನೆ ವ್ಯಕ್ತಪಡಿಸಲಿದ್ದಾರೆ ಎಂದು ಐಎಫ್ಟಿಡಿಎ ಸಂಚಾಲಕ ಅಶೋಕ್ ಪಂಡಿತ್ ಹೇಳಿದ್ದಾರೆ.