Advertisement

‘ಪದ್ಮಾವತಿ’ಯ ಗಾನ ಬಜಾನ

04:35 PM Jul 09, 2022 | Team Udayavani |

“ಪದ್ಮಾವತಿ’ – ಹೀಗೊಂದು ಸಿನಿಮಾ ಬಿಡುಗಡೆಯ ಹಂತಕ್ಕೆ ಬಂದಿದೆ. ವಿಕ್ರಂ ಆರ್ಯ ಈ ಚಿತ್ರದಲ್ಲಿ ನಾಯಕರಾಗಿ ನಟಿಸಿ, ನಿರ್ಮಿಸಿದ್ದಾರೆ. ಇತ್ತೀಚೆಗೆ ಈ ಚಿತ್ರದ ಆಡಿಯೋ ಬಿಡುಗಡೆಯಾಗಿದೆ.

Advertisement

ಮಿಥುನ್‌ ಚಂದ್ರಶೇಖರ್‌ ಈ ಚಿತ್ರಕ್ಕೆ ಚಿತ್ರಕತೆ, ಸಂಭಾಷಣೆ ಬರೆದು ಮೊದಲ ಬಾರಿ ನಿರ್ದೇಶನ ಮಾಡಿದ್ದಾರೆ. ತಪ್ಪೇ ಮಾಡಬೇಡಿ, ಮಾಡುವ ತಪ್ಪನ್ನು ತಪ್ಪು ತಪ್ಪಾಗಿ ಮಾಡಬೇಡಿ, ತಪ್ಪು ಮಾಡಿದ ಮೇಲೆ ತಪ್ಪದೆ ತಪ್ಪಾಯಿತು ಎಂದು ಒಪ್ಪಿಕೊಳ್ಳಿ ಎಂಬ ಅಂಶದ ಜೊತೆಗೆ ತಾಯಿ ಮಗನ ಸೆಂಟಿಮೆಂಟ್‌ ಅಂಶಗಳು ಇರಲಿದೆ. ಶಿವಳ್ಳಿಬೆಟ್ಟ, ಸಾಗರ, ಹೊಸನಗರ,ಚಿಕ್ಕಮಗಳೂರು, ಶಿವಮೊಗ್ಗ, ಬೆಂಗಳೂರು ಕಡೆಗಳಲ್ಲಿ  51 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ ಎಂಬ ಮಾಹಿತಿ ಚಿತ್ರತಂಡದ್ದು.

ಮೇಘನಾ ರಾವ್‌ ಈ ಚಿತ್ರದ ನಾಯಕಿ. ಮೂರು ವಿಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರಂತೆ. ಉಳಿದಂತೆ ಸುರೇಶ್‌ ಸ್ವಾಮಿರಾವ್‌, ಕವಿತಾಪ್ರಿಯಾ, ರಾಘವ ಕುಮಾರ್‌, ಅಭಿಲಾಶ್‌ .ಬಿ.ಹೊಸನಗರ, ಶಿವಮೊಗ್ಗ ರಾಮಣ್ಣ, ಅರ್ಚನಾ ಶೆಟ್ಟಿ, ರಾಜೇಶ್ವರಿ ಪಾಂಡೆ ಮುಂತಾ ದವರ ತಾರಾಗಣವಿದೆ.

ಶರಣು ಕುಮಾರ್‌ ಗಜೇಂದ್ರ ಗಡ ನಾಲ್ಕು ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ. ಕೊಪ್ಪಳದ ಗಂಗಮ್ಮ ಒಂದು ಗೀತೆಗೆ ಧ್ವನಿಯಾಗಿದ್ದಾರೆ. ಸಂಗೀತ ದಿನೇಶ್‌ ಕುಮಾರ್‌, ಛಾಯಾಗ್ರಹಣವಿದೆ. ಈ ಚಿತ್ರ ಜುಲೈ 15ರಂದು ತೆರೆಗೆ ಬರುವ ಸಾಧ್ಯತೆ ಇದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next