ಮುಂಬಯಿ: ಪದ್ಮಶಾಲಿ ಸಮಾಜ ಸೇವಾ ಸಂಘ ಮುಂಬಯಿ ಇದರ 23ನೇ ವಾರ್ಷಿಕ ಶ್ರೀ ವೀರಭದ್ರ ಮಹಾಮ್ಮಾಯಿ ಪೂಜೆಯು ಜೂ. 2 ರಂದು ಘೋಡ್‌ಬಂದರ್‌ರೋಡ್, ವಾಗಿºಲ್‌ರೋಡ್, ಪದ್ಮಶಾಲಿ ಕಲಾ ಭವನದ ಮಂಜುನಾಥ ಸಭಾಗೃಹದಲ್ಲಿ ಅದ್ದೂರಿಯಾಗಿ ನಡೆಯಿತು.
ಬೆಳಗ್ಗೆ 8ರಿಂದ ಲಘು ಉಪಾಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಧಾರ್ಮಿಕ ಕಾರ್ಯಕ್ರಮವಾಗಿ ಪೂರ್ವಾಹ್ನ 9 ರಿಂದ ಶ್ರೀ ವೀರಭದ್ರ ಮಹಾಮ್ಮಾಯಿ ಪೂಜೆ, ಪೂರ್ವಾಹ್ನ 11ರಿಂದ ತೀರ್ಥ ಪ್ರಸಾದ ವಿತರಣೆ, ಭಜನಾ ಕಾರ್ಯಕ್ರಮ, ಮಧ್ಯಾಹ್ನ 12ರಿಂದ ಮಹಾಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ಜರಗಿತು. ಸಮಾಜ ಬಾಂಧವರು, ಭಕ್ತಾದಿಗಳು ನೂರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಅನ್ನಪ್ರಸಾದವನ್ನು ಸ್ವೀಕರಿಸಿದರು.
ಮಧ್ಯಾಹ್ನ 1ರಿಂದ ಧಾರ್ಮಿಕ ಪ್ರವಚನ, ಅಪರಾಹ್ನ 2ರಿಂದ ಸಭ ಕಾರ್ಯಕ್ರಮ, ಅಪರಾಹ್ನ 3ರಿಂದ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ, ಸಂಜೆ 4.30ರಿಂದ ಚಹಾದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ಕೋಟೇಶ್ವರದ ವಾಸ್ತುತಜ್ಞ, ಸಾಹಿತಿ, ಜ್ಯೋತಿಷ್ಯ ಚೂಡಾಮಣಿ ಕೆ. ಬಸವರಾಜ ಶೆಟ್ಟಿಗಾರ್ ಅವರಿಂದ ಧಾರ್ಮಿಕ ಪ್ರವಚನ ನಡೆಯಿತು. ಹರ್ಷ್ ಫೌಂಡೇಷನ್ ಮುಂಬಯಿ ಇದರ ಕೃಷ್ಣಾನಂದ ಎಂ. ಶೆಟ್ಟಿಗಾರ್ ಇವರ ಸೇವಾರ್ಥವಾಗಿ ಆರ್ಥಿಕವಾಗಿ ಹಿಂದುಳಿದ ಸಮಾಜದ ಮಕ್ಕಳಿಗೆ ಪುಸ್ತಕ ವಿತರಣೆಯನ್ನು ಆಯೋಜಿಸಲಾಗಿತ್ತು.
ಪದ್ಮಶಾಲಿ ಸಮಾಜ ಸೇವಾ ಸಂಘ ಮುಂಬಯಿ ಇದರ ಅಧ್ಯಕ್ಷ ಉತ್ತಮ್ ಶೆಟ್ಟಿಗಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಅತಿಥಿಗಳಾಗಿ ಊರಿನ ಹದಿನಾರು ಶ್ರೀ ವೀರಭದ್ರ ದೇವಸ್ಥಾನಗಳ ಪ್ರಮುಖರಾದ ಪುರುಷೋತ್ತಮ ಶೆಟ್ಟಿಗಾರ್ ಬಾಕೂìರು, ಬಾಲಕೃಷ್ಣ ಎಂ. ಶೆಟ್ಟಿಗಾರ್ ಸಾಲಿಕೇರಿ, ಶ್ರೀ ಜ್ಯೋತಿಷ್ಯ ಪ್ರಸಾದ್ ಶೆಟ್ಟಿಗಾರ್ ಕಲ್ಯಾಣ್‌ಪುರ, ಪ್ರಭಾಶಂಕರ್ ಪದ್ಮಶಾಲಿ ಕಿನ್ನಿಗೋಳಿ, ಕೆ. ಜನಾರ್ದನ ಶೆಟ್ಟಿಗಾರ್ ಕಾರ್ಕಳ, ಈಶ್ವರ ಎನ್. ಶೆಟ್ಟಿಗಾರ್ ಕಾಪು, ರಾಮ ಶೆಟ್ಟಿಗಾರ್ ಎರ್ಮಾಳ್, ನಾಮದೇವ್ ಕನ್ಹಂಗಾಡ್, ದಾಮೋದರ ಪದ್ಮಶಾಲಿ ಬೋಳೂರು, ಗಂಗಾಧರ ಗುರಿಕಾರ ಸಿದ್ಧಕಟ್ಟೆ, ಆನಂದ ಗುರಿಕಾರ ಸುರತ್ಕಲ್, ರತ್ನಾಕರ ಗುರಿಕಾರ ಕಲ್ಲಾಪು, ಪುರಂದರ ಡಿ. ಶೆಟ್ಟಿಗಾರ್ ಮೂಲ್ಕಿ, ಸುಂದರ ಶೆಟ್ಟಿಗಾರ ಪಡುಬಿದ್ರೆ, ಐತಪ್ಪ ಶೆಟ್ಟಿಗಾರ್ ಉಳ್ಳಾಲ, ಲಕ್ಷ್ಮಣ್ ಶೆಟ್ಟಿಗಾರ್ ಮಂಜೇಶ್ವರ ಅವರು ಉಪಸ್ಥಿತರಿದ್ದರು.
ಪದ್ಮಶಾಲಿ ಸಮಾಜ ಸೇವಾ ಸಂಘ, ಪದ್ಮಶಾಲಿ ಎಜುಕೇಶನ್ ಸೊಸೈಟಿ, ಪದ್ಮಶಾಲಿ ಮಹಿಳಾ ಬಳಗ ಇದರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ಸದಸ್ಯೆಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸಮಾಜ ಬಾಂಧವರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ದಾನಿಗಳು, ವಿವಿಧ ಕ್ಷೇತ್ರಗಳ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಚಿತ್ರ-ವರದಿ: ಸುಭಾಷ್ ಶಿರಿಯಾ