Advertisement

ಪದ್ಮಾವತ್‌ ಚಿತ್ರವನ್ನು ಮುಸ್ಲಿಮರ್ಯಾರೂ ನೋಡಬೇಡಿ: ಓವೈಸಿ 

01:25 PM Jan 19, 2018 | Team Udayavani |

ಹೈದರಾಬಾದ್‌: ವಿವಾದಿತ ಪದ್ಮಾವತ್‌ ಹಿಂದಿ ಚಿತ್ರ ವನ್ನು ಯಾರೂ ನೋಡಬೇಡಿ ಎಂದು ಎಐಎಐಎಂ ಸಂಸದ ಅಸಾದುದ್ದೀನ್‌ ಓವೈಸಿ ಕರೆ ನೀಡಿದ್ದಾರೆ.

Advertisement

ವಾರಂಗಲ್‌ನಲ್ಲಿ ಗುರುವಾರ ಸಂಜೆ ನಡೆದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಓವೈಸಿ ‘ಬಕ್ವಾಸ್‌  ಚಿತ್ರ ವನ್ನು ಯಾವ ಮುಸ್ಲಿಮರೂ ನೋಡಬಾರದು, ಅದರಲ್ಲೂ ಯುವಕರು ಚಿತ್ರ ನೋಡಲು ಹೋಗಿ ಹಣ ಮತ್ತು ಸಮಯ ಹಾಳು ಮಾಡಬೇಡಿ’ ಎಂದರು.

‘ಚಿತ್ರ ರಜಪೂತ ರಾಣಿ ಪದ್ಮಾವತಿ ಮತ್ತು ಮೋಘಲ್‌ ದೊರೆ ಅಲ್ಲಾವುದ್ದೀನ್‌ ಖೀಲ್‌ಜಿ ಯ ಕತೆಯನ್ನಾಧರಿಸಿದ್ದುಇದನ್ನು 1540 ರಲ್ಲಿ ಮುಸ್ಲಿಂ ಕವಿ ಮಲೀಕ್‌ ಮಹಮದ್‌ ಅವರು ಇದಕ್ಕೆ ಐತಿಹಾಸಿಕ ಹಿನ್ನಲೆ ಇಲ್ಲ. ಆದರೂ ಮೋದಿ ಸರ್ಕಾರ ಚಿತ್ರದ ಬಗ್ಗೆ ಭಾರೀ ಆಸಕ್ತಿ ವಹಿಸಿ 12 ಮಂದಿ ಸದಸ್ಯರ ಸಮಿತಿಯನ್ನು ರಚಿಸಿದೆ’ ಎಂದು ಕಿಡಿ ಕಾರಿದರು. 

Advertisement

Udayavani is now on Telegram. Click here to join our channel and stay updated with the latest news.

Next