Advertisement

Padma; ವೆಂಕಯ್ಯನಾಯ್ಡು, ಮಿಥುನ್‌ ಚಕ್ರವರ್ತಿ ಸೇರಿ ಹಲವು ಗಣ್ಯರಿಗೆ ಪದ್ಮ ಪ್ರಶಸ್ತಿ ಪ್ರದಾನ

12:36 AM Apr 23, 2024 | Team Udayavani |

ಹೊಸದಿಲ್ಲಿ: ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಹಿರಿಯ ನಟ ಮಿಥುನ್‌ ಚಕ್ರವರ್ತಿ ಸೇರಿ 2024ನೇ ಸಾಲಿನ ಪದ್ಮ ಪ್ರಶಸ್ತಿಗೆ ಭಾಜನರಾಗಿದ್ದ ಸಾಧಕ ಗಣ್ಯರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸೋಮವಾರ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

Advertisement

ದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಭವ್ಯ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್‌, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಸೇರಿ ಹಲವು ಗಣ್ಯರ ಸಮ್ಮುಖದಲ್ಲಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದರು. ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ಖ್ಯಾತ ಭರತನಾಟ್ಯ ಕಲಾವಿದೆ ಪದ್ಮಾ ಸುಬ್ರಹ್ಮಣ್ಯಮ್‌ ಅವರಿಗೆ ಪ್ರತಿಷ್ಠಿತ ಪದ್ಮವಿಭೂಷಣ ಪ್ರದಾನ ಮಾಡಲಾಯಿತು. ಇನ್ನು, “ಸುಲಭ್‌ ಇಂಟರ್‌ನ್ಯಾಶನಲ್‌’ ಸಂಸ್ಥಾಪಕ ದಿ|ಬಿಂದೇಶ್ವರ್‌ ಪಾಠಕ್‌ರಿಗೆ ಮರಣೋತ್ತರವಾಗಿ ಪದ್ಮ ವಿಭೂಷಣ ಪ್ರಶಸ್ತಿ ಪ್ರದಾನಿಸಲಾಯಿತು. ಹಿರಿಯ ನಟ ಮಿಥುನ್‌ ಚಕ್ರವರ್ತಿ, ಉದ್ಯಮಿ ಸೀತಾರಾಮ್‌ ಜಿಂದಾಲ್‌, ಗಾಯಕಿ ಉಷಾ ಉತ್ತುಪ್‌ ಸೇರಿ 7 ಜನರಿಗೆ ಪದ್ಮ ಭೂಷಣ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಅಲ್ಲದೆ ಕನ್ನಡಿಗ ರೋಹನ್‌ ಬೋಪಣ್ಣ, ಡಾ| ಪ್ರೇಮಾ ಧನ್‌ರಾಜ್‌, ಡಾ|ಸಿ.ಆರ್‌.ಚಂದ್ರಶೇಖರ್‌ ಸೇರಿ ಹಲವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಉಳಿದವರಿಗೆ ಮುಂದಿನ ವಾರ ಪ್ರದಾನ ಮಾಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next