Advertisement

Padma Shri ಸ್ವೀಕರಿಸಿದ ದೇಸಿ ಭತ್ತ ತಳಿ ಸಂರಕ್ಷಕ ಬೆಳೇರಿ

01:27 AM May 11, 2024 | Team Udayavani |

ಕಾಸರಗೋಡು: ದೇಸಿ ಭತ್ತದ ತಳಿ ಸಂರಕ್ಷಕ ಕಾಸರಗೋಡು ಜಿಲ್ಲೆಯ ಬೆಳ್ಳೂರು ನೆಟ್ಟಣಿಗೆಯ ಸತ್ಯನಾರಾಯಣ ಬೆಳೇರಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಹೊಸದಿಲ್ಲಿ ಯಲ್ಲಿ ಮೇ 9ರಂದು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದರು.

Advertisement

ಸಾಧಾರಣ ಕೃಷಿ ಕುಟುಂಬ ಹಿನ್ನೆಲೆಯ ಸತ್ಯನಾರಾಯಣ ಬೆಳೇರಿ ಕಳೆದ ಕೆಲವು ವರ್ಷಗಳಿಂದ ಮರೆ ಯಾಗುತ್ತಿರುವ ದೇಸೀ ಭತ್ತದ ತಳಿಗಳ ಸಂರಕ್ಷಣೆ ಮತ್ತು ಸಂವರ್ಧನೆಯ ಮಹತ್ಕಾರ್ಯಕ್ಕಾಗಿ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದಾರೆ. ದಶಕಗಳ ಹಿಂದೆ ಹಿರಿಯ ಗಾಂಧಿವಾದಿ, ಕೃಷಿ ತಪಸ್ವಿ ಚೇರ್ಕಾಡಿ ರಾಮಚಂದ್ರ ರಾಯರು ನೀಡಿದ ಒಂದು ಮುಷ್ಟಿಯಷ್ಟು “ರಾಜ ಕಯಮೆ’ ಎಂಬ ದೇಸೀ ಭತ್ತದ ತಳಿಯೊಂದಿಗೆ ಆರಂಭವಾದ ಇವರ ಕೆಲಸ ಪ್ರಸ್ತುತ 650ಕ್ಕೂ ಹೆಚ್ಚಿನ ತಳಿಗಳ ಸಂರಕ್ಷಣೆ ಯವರೆಗೆ ತಲುಪಿದೆ.

ರಾಜ ಕಯಮೆ, ಗಂಧಸಾಲೆ, ಅತಿಕಾರ, ನವರ, ಮೈಸೂರು ರಾಜರು ಬಳಸುತ್ತಿದ್ದ ರಾಜಮುಡಿ ಮತ್ತು ರಾಜಭೋಗ, ಉಪ್ಪು ನೀರಿನಲ್ಲಿಯೂ ಬೆಳೆಯುವ ಕಗ್ಗ, ಬರ ನಿರೋಧಕ ಪುಟ್ಟ ಭತ್ತ, ಅವಲಕ್ಕಿಗೆ ಬೇಕಾದ ಸ್ವರಟಾ, ಫಿಲಿಪೈನ್ಸ್‌ ದೇಶದ ಮನಿಲಾ, ಸುಶ್ರುತನ ಕಾಲದ ಕಳಮೆ, ಬುದ್ಧನ ಕಾಲದ ಕಲಾ ನಾಮಕ್‌, ನೇರಳೆ ಬಣ್ಣದ ಡಾಂಬಾರ್‌ ಕಾಳಿ, ಕಾರ್‌ ರೆಡ್‌ ರೈಸ್‌, ಕಲಾಬತಿ, ನಜರ್‌ ಬಾತ್‌ ಅಲ್ಲದೆ ಮಣಿಪುರ, ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ಸಹಿತ ಭಾರತದ ಹೆಚ್ಚಿನೆಲ್ಲ ಪ್ರದೇಶಗಳ ಭತ್ತದ ತಳಿಗಳ ಸಂಗ್ರಹ ಅವರಲ್ಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next