ಚಾಂಪಿಯನ್ ರೆಸ್ಲರ್ ಭಜರಂಗ್ ಪೂನಿಯ, ಹಿರಿಯ ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್, ಚೆಸ್ ಗ್ರ್ಯಾನ್‌ಮಾಸ್ಟರ್ ದ್ರೋಣವಲ್ಲಿ ಹರೀಕಾ, ಭಾರತದ ಕಬಡ್ಡಿ ತಂಡದ ನಾಯಕ ಅಜಯ್ ಠಾಕೂರ್ ಅವರೆಲ್ಲ ಪದ್ಮಶ್ರೀ ಪ್ರಶಸ್ತಿಯಿಂದ ಪುರಸ್ಕೃತರಾದರು.
ಹಿರಿಯ ಪರ್ವತಾರೋಹಿ ಬಚೇಂದ್ರಿ ಪಾಲ್ ಪದ್ಮಭೂಷಣಕ್ಕೆ ಭಾಜನರಾದರು. ಉಳಿದವರಿಗೆ ಮಾ. 16ರಂದು ನಡೆಯುವ ಮತ್ತೂಂದು ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಗೃಹ ಕಚೇರಿಯ ಪ್ರಕಟನೆ ತಿಳಿಸಿದೆ.
ಕಳೆದ ಗಣರಾಜ್ಯೋತ್ಸವದಂದು ಒಟ್ಟು 112 ಮಂದಿ ವಿವಿಧ ಸಾಧಕರನ್ನು ಪದ್ಮ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.
ಪದ್ಮಶ್ರೀಗೆ ಆಯ್ಕೆಯಾದ ಉಳಿದ ಕ್ರೀಡಾಪಟುಗಳೆಂದರೆ ಫುಟ್ಬಾಲಿಗ ಸುನೀಲ್ ಚೆಟ್ರಿ, ಕ್ರಿಕೆಟಿಗ ಗೌತಮ್ ಗಂಭೀರ್, ಬಿಲ್ಲುಗಾರ್ತಿ ಬೊಂಬಾಯ್ಲದೇವಿ ಲೈಶ್ರಮ್ ಮತ್ತು ಬಾಸ್ಕೆಟ್‌ಬಾಲ್ ಆಟಗಾರ್ತಿ ಪ್ರಶಾಂತಿ ಸಿಂಗ್.
Advertisement