Advertisement

ಪದ್ಮಪುರಸ್ಕೃತ ಶೇಖರ್‌ ನಾಯ್ಕ್ ಇಂದಿಗೂ ನಿರುದ್ಯೋಗಿ!

10:16 AM Feb 04, 2017 | Team Udayavani |

“ಒಂದು ಕಡೆ ಪದ್ಮಶ್ರೀ ಗೌರವ ಬಂದಿರುವ ಖುಷಿ. ಮತ್ತೂಂಡೆದೆ ಹೊಟ್ಟೆ ತುಂಬಿಸಿಕೊಳ್ಳಲು ಒಂದು ಉದ್ಯೋಗವಿಲ್ಲ ಅನ್ನುವ ಬೇಸರ’ ಇದು ಭಾರತ ಅಂಧರ ಕ್ರಿಕೆಟ್‌ ತಂಡದ ಮಾಜಿ ನಾಯಕ ಶೇಖರ್‌ ನಾಯ್ಕ್ ವಿಷಾದದ ನುಡಿ.

Advertisement

ಶೇಖರ್‌ ನಾಯ್ಕ ಮೂಲತಃ ಶಿವಮೊಗ್ಗದವರು. ಇವರಿಗೆ ಬಾಲ್ಯದಲ್ಲಿಯೇ ಅಂಧತ್ವ ಬಂದಿದೆ. ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಕಣ್ಣುಗಳು ಕಾಣಿಸುತ್ತದೆ. ಶಾಲೆಗೆ ಹೋಗುತ್ತಿರುವಾಗಲೇ ಕ್ರಿಕೆಟ್‌ನಲ್ಲಿ ಆಸಕ್ತಿ ಬೆಳೆಸಿಕೊಂಡು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇವರ ನಾಯಕತ್ವದಲ್ಲಿ ಭಾರತ ಅಂಧರ ತಂಡ ವಿಶ್ವಕಪ್‌ ಗೆದ್ದಿದೆ. ಈ ಸೇವೆಯನ್ನು ಪರಿಣಗಣಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ನೀಡಿ ಗೌರವಿಸಿದೆ. ಆದರೆ ಉದ್ಯೋಗವಿಲ್ಲ ಅನ್ನುವ ನೋವು ಮಾತ್ರ ಶೇಖರ್‌ ಅವರನ್ನು ಬಿಟ್ಟಿಲ್ಲ.

ಕ್ರಿಕೆಟ್‌ನಲ್ಲಿ ಇಷ್ಟು ಸಾಧನೆ ಮಾಡಿದಾಗ್ಯೂ ಸರ್ಕಾರ ತನಗೆ ಒಂದು ಉದ್ಯೋಗ ಕೊಟ್ಟಿಲ್ಲ. ಪದ್ಮಶ್ರೀ ಬಂದಿರುವುದು ನಿಜಕ್ಕೂ ಖುಷಿಯ ಸಂಗತಿ. ಆದರೆ ಪ್ರಶಸ್ತಿಯಿಂದಲೇ ಹೊಟ್ಟೆ ತುಂಬುವುದಿಲ್ಲವಲ್ಲ. ಜೀವನದಲ್ಲಿ ಆರ್ಥಿಕ ಭದ್ರತೆ ಬೇಕು ಅನ್ನುವುದು ಶೇಖರ್‌ ಮಾತು.

ಶೇಖರ್‌ 2012 ರಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ. ಆನಂತರ ರೈಲ್ವೆ, ಬ್ಯಾಂಕಿಂಗ್‌ ಸೇರಿದಂತೆ ಅನೇಕ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆದಿದ್ದಾರೆ. ಆದರೆ ಎಲ್ಲಿಯೂ ಅದೃಷ್ಟ ಕೈಹಿಡಿದಿಲ್ಲ. ನ್ಪೋರ್ಟ್ಸ್ ಕೋಟಾದಲ್ಲಿಯೂ ಅವಕಾಶ ಸಿಕ್ಕಿಲ್ಲ!

ಸದ್ಯ ಪ್ರಾರ್ಥನಮ್‌ ಟ್ರಸ್ಟ್‌ ಫಾರ್‌ ಡಿಸೆಬಲ್‌ ಸಂಸ್ಥೆಯಲ್ಲಿ ನ್ಪೋರ್ಟ್ಸ್ ಕೋ-ಆರ್ಡಿನೇಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲಿ ಸಿಗುವ ಅಲ್ಪಸ್ವಲ್ಪ ಸಂಬಳ ಮತ್ತು ಕ್ರಿಕೆಟ್‌ನಿಂದ ಬಂದ ಸ್ವಲ್ಪ ಆದಾಯದಲ್ಲಿಯೇ ಜೀವನ ಸಾಗಿಸಬೇಕಾಗಿದೆ.

Advertisement

ಶೇಖರ್‌ ಪತ್ನಿ ಗೃಹಿಣಿಯಾಗಿದ್ದು, ಬೇರೆ ಕೆಲಸ ಮಾಡುತ್ತಿಲ್ಲ. ಇಬ್ಬರು ಮಕ್ಕಳಿದ್ದಾರೆ. ಹೀಗಾಗಿ ಸಂಸಾರ ನಿಭಾಯಿಸಲು ಸರಿಯಾದ ಉದ್ಯೋ ಗಬೇಕಿದೆ. ಸರ್ಕಾರ ನನಗೊಂದು ಉದ್ಯೋಗ ನೀಡಿದರೆ ನಿಜಕ್ಕೂ ನನ್ನ ಜೀವನ ಗಟ್ಟಿಯಾಗುತ್ತದೆ ಎಂಬುದೇ ಅವರ ಅಳಲು.

ಶೇಖರ್‌ 2012ರಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ. ಆನಂತರ ರೈಲ್ವೆ, ಬ್ಯಾಂಕಿಂಗ್‌ ಸೇರಿದಂತೆ ಅನೇಕ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆದಿದ್ದಾರೆ. ಆದರೆ ಎಲ್ಲಿಯೂ ಅದೃಷ್ಟ ಕೈಹಿಡಿದಿಲ್ಲ. ನ್ಪೋರ್ಟ್ಸ್ ಕೋಟಾದಲ್ಲಿಯೂ ಅವಕಾಶ ಸಿಕ್ಕಿಲ್ಲ !

ಗೋಪಾಲ್‌ ಯಡಗೆರೆ

Advertisement

Udayavani is now on Telegram. Click here to join our channel and stay updated with the latest news.

Next