Advertisement
ಮದಿಪು ಚಿತ್ರ 64ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ “ಅತ್ಯುತ್ತಮ ಪ್ರಾದೇಶಿಕ ಚಿತ್ರ’ ಎಂಬ ಗೌರವಕ್ಕೆ ಎ. 8ರಂದು ಭಾಜನವಾಗಿತ್ತು. ಇದೀಗ ಮತ್ತೆ ಇದೇ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಲಭಿಸುವ ಮೂಲಕ ತುಳು ಚಿತ್ರರಂಗಕ್ಕೆ ಇನ್ನಷ್ಟು ಬಲ ಬಂದಂತಾಗಿದೆ. ಆಸ್ಥಾ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾದ “ಮದಿಪು’ ಚಿತ್ರದ ಕಥೆ, ಚಿತ್ರಕಥೆ, ಕಲಾ ನಿರ್ದೇಶನವನ್ನು ಚೇತನ್ ಮುಂಡಾಡಿ ಮಾಡಿದ್ದು, ಸಂದೀಪ್ ಕುಮಾರ್ ನಂದಳಿಕೆ ನಿರ್ಮಾಪಕರು. ಈ ಚಿತ್ರ ಮಾ. 10ರಂದು ನಗರದ ಸುಚಿತ್ರಾ ಟಾಕೀಸ್ ಸೇರಿದಂತೆ ಕರಾವಳಿಯ 9 ಥಿಯೇಟರ್‌ನಲ್ಲಿ ಬಿಡುಗಡೆಗೊಂಡಿತ್ತು.
ಈ ಹಿಂದೆ “ಕೋಟಿ ಚೆನ್ನಯ’ ಚಿತ್ರದ ನೀತು ಅವರಿಗೆ ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿ ಹಾಗೂ “ಗಗ್ಗರ’ ಚಿತ್ರದಲ್ಲಿ ಎಂ.ಕೆ. ಮಠ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ದೊರಕಿತ್ತು. ಈ ಮಧ್ಯೆ ಕರಾವಳಿ ಮೂಲದವರಾದ ರಕ್ಷಿತ್ ಶೆಟ್ಟಿ ನಿರ್ಮಾಣ ಹಾಗೂ ಅಭಿನಯದ ರಿಷಭ್ ಶೆಟ್ಟಿ ನಿರ್ದೇಶನದ “ಕಿರಿಕ್ ಪಾರ್ಟಿ’ ಕನ್ನಡ ಚಿತ್ರ ಅತ್ಯುತ್ತಮ ಮನೋರಂಜನಾ ಚಿತ್ರ ಎಂಬ ಗೌರವಕ್ಕೆ ಪಾತ್ರವಾಗಿದೆ. ಈ ಚಿತ್ರ ಇತ್ತೀಚೆಗೆ ತೆರೆಕಂಡು ರಾಜ್ಯವ್ಯಾಪಿ ಉತ್ತಮ ಗಳಿಕೆಯೊಂದಿಗೆ ಸದ್ದು ಮಾಡಿತ್ತು.
Related Articles
ತುಳು ಭಾಷೆ ಮೇಲಿನ ಪ್ರೀತಿಯಿಂದ ನನ್ನನ್ನು ಆಶೀರ್ವದಿಸಿದ ತುಳುನಾಡಿನ ಸರ್ವ ಧರ್ಮದ ಸಮಸ್ತ ಜನರಿಗೆ ಸಂದ ಗೌರವ ಇದಾಗಿದೆ. ರಂಗಭೂಮಿಯ ಮೂಲಕ, ತುಳು, ಕನ್ನಡ ಚಿತ್ರರಂಗದಲ್ಲಿ ಸಾಧನೆ ಮಾಡಲು ಕಾರಣವಾದ ನನ್ನ ತಾಯ್ನೆಲ ಹಾಗೂ ಬೆಂಬಲಿಸಿದ ಸರ್ವರಿಗೂ ಆಭಾರಿ. ಈ ಪ್ರಶಸ್ತಿ ಮೂಲಕ ತುಳುಚಿತ್ರರಂಗಕ್ಕೆ ಇನ್ನಷ್ಟು ಸ್ಫೂರ್ತಿ ಸಿಗುವಂತಾಗಲಿ.
– ನವೀನ್ ಡಿ. ಪಡೀಲ್, ಖ್ಯಾತ ನಟ
Advertisement