Advertisement

ನಷ್ಟಕ್ಕೀಡಾದ ಭತ್ತದ ಬೆಳೆ

06:55 PM Jul 23, 2021 | Team Udayavani |

ಮದ್ದೂರು: ಕಳೆದ ಹಲವು ದಿನಗಳಿಂದಸುರಿದ ಮಳೆಯಿಂದಾಗಿ ಕಟಾವಿಗೆಬಂದಿದ್ದ ಭತ್ತದ ಬೆಳೆ ಜಮೀನಿನಲ್ಲೇಹಾನಿಯಾಗಿರುವ ಘಟನೆ ತಾಲೂಕಿನಕೊಪ್ಪ ಹೋಬಳಿಯ ಡಿ.ಮಲ್ಲಿಗೆರೆ ಗ್ರಾಮದಲ್ಲಿ ಜರುಗಿದೆ.

Advertisement

ತಾಲೂಕಿನ ಡಿ.ಮಲ್ಲಿಗೆರೆ ಗ್ರಾಮದಚಿಕ್ಕಬಿಳೀಗೌಡ ಹಾಗೂ ಕೆಂಪಮ್ಮಎಂಬುವರಿಗೆ ಸೇರಿದ ಸುಮಾರು ನಾಲ್ಕುಎಕರೆ ಜಮೀನಿನಲ್ಲಿ ಬೆಳೆದಿದ್ದ ಭತ್ತದಬೆಳೆಯನ್ನು ಕೊಯ್ಲು ಮಾಡಿತ್ತಾದರೂಕಳೆದ ದಿನಗಳಿಂದ ಸುರಿದಮಳೆಯಿಂದಾಗಿ ಒಕ್ಕಣೆ ಮಾಡದಪರಿಸ್ಥಿತಿ ನಿರ್ಮಾಣವಾಗಿ ಜಮೀನಿನಲ್ಲೇ ಭತ್ತ ಮೊಳಕೆ ಹೊಡೆದು ಸುಮಾರು 3ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ.ಸಾಲ ಸೋಲ ಮಾಡಿ ಬೆಳೆದಬೆಳೆಯು ಕೈತಪ್ಪಿರುವ ಹಿನ್ನೆಲೆಯಲ್ಲಿಸರ್ಕಾರದಿಂದ ಸಿಗುವ ಪರಿಹಾರವನ್ನುದೊರಕಿಸಿಕೊಡುವಂತೆ ಜಮೀನಿನಮಾಲೀಕ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

ಈ ಸಂಬಂಧ ಕಂದಾಯ ನಿರೀಕ್ಷಕ ಹಾಗೂ ಗ್ರಾಮಲೆಕ್ಕಿಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿಸಂಗ್ರಹಿಸಿದ್ದು, ಪರಿಹಾರ ನೀಡುವಸಂಬಂಧ ತಹಶೀಲ್ದಾರ್‌ ಅವರುಜಿಲ್ಲಾಧಿಕಾರಿಗಳಿಗೆ ಮಾಹಿತಿ ಸಲ್ಲಿಸಿದ್ದು,ಕೂಡಲೇ ಪರಿಹಾರ ಒದಗಿಸುವಂತೆರೈತರು ಜಿಲ್ಲಾಡಳಿತವನ್ನುಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next