Advertisement

ಬಡ ನಿರುದ್ಯೋಗಿಗಳಿಗೆ ವಾರ್ಷಿಕ 5,000 ಭತ್ತೆ?

03:45 AM Jan 13, 2017 | Team Udayavani |

– ಬಜೆಟ್‌ನಲ್ಲಿ  ಹೊಸ ಯೋಜನೆ ಘೋಷಣೆ ಸಂಭವ
– ಆಹಾರ, ಆರೋಗ್ಯ, ಇಂಧನ ಸಬ್ಸಿಡಿಗೆ ಕತ್ತರಿ?

Advertisement

ಹೊಸದಿಲ್ಲಿ: ನಿರುದ್ಯೋಗಿ ಯುವ ಸಮುದಾಯವನ್ನು ಓಲೈಸಲು ಮುಂದಾಗಿರುವ ಕೇಂದ್ರ ಸರಕಾರ, ಬಡತನ ರೇಖೆಗಿಂತ ಕೆಳಗಿರುವ ನಿರುದ್ಯೋಗಿಗಳಿಗೆ ವಾರ್ಷಿಕ 5,000 ರೂ. ನಿರುದ್ಯೋಗ ಭತ್ತೆ ನೀಡುವ ಕುರಿತು ಗಂಭೀರ ಚಿಂತನೆಯಲ್ಲಿ  ಮುಳುಗಿದೆ.

ಫೆ.1ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್‌ನಲ್ಲಿ ಈ ಕುರಿತು ಘೋಷಣೆ ಹೊರಬೀಳ ಬಹುದು ಎಂದು ಹೇಳಲಾಗುತ್ತಿದೆ. ಉದ್ದೇಶಿತ ನಿರುದ್ಯೋಗ ಭತ್ತೆಗೆ ಹಣಕಾಸು ಹೊಂದಿಸಲು ಆಹಾರ, ಆರೋಗ್ಯ ಹಾಗೂ ಇಂಧನ ಕ್ಷೇತ್ರ
ಗಳಿಗೆ ನೀಡಲಾಗುತ್ತಿರುವ ಸಬ್ಸಿಡಿಯನ್ನು ಕಡಿತ ಗೊಳಿಸುವ ಸಂಭವವಿದೆ. ಇದು ರಾಜಕೀಯ ಜಟಾಪಟಿಗೂ ನಾಂದಿ ಹಾಡಬಹುದು ಎಂದು ಮೂಲಗಳು ತಿಳಿಸಿವೆ.

ಕೇರಳ, ಮಧ್ಯಪ್ರದೇಶ, ಹರಿಯಾಣ, ಛತ್ತೀಸ್‌ಗಢ ಹಾಗೂ ಪಂಜಾಬ್‌ನಂತಹ ಕೆಲ ರಾಜ್ಯಗಳು ನಿರುದ್ಯೋಗಿಗಳಿಗೆ ಭತ್ತೆ ನೀಡುವ ಯೋಜನೆಯನ್ನು ಹೊಂದಿವೆ. ಆದರೆ ಇಂತಹ ಒಂದು ಯೋಜನೆಯನ್ನು ಕೇಂದ್ರ ಸರಕಾರ ಜಾರಿಗೆ ತರುತ್ತಿರುವುದು ಇದೇ ಮೊದಲು.

ನಿರುದ್ಯೋಗ ಭತ್ತೆ ಯೋಜನೆ ಜಾರಿ ಸಂಬಂಧ ನೀತಿ ಆಯೋಗ ಈಗಾಗಲೇ ಕಾರ್ಯೋ ನ್ಮುಖವಾಗಿದೆ. ವಾರ್ಷಿಕ 5,000 ರೂ. ನಿಗದಿಪಡಿ ಸಿದರೆ ನಿರುದ್ಯೋಗಿಗಳಿಗೆ ಮಾಸಿಕ 416 ರೂ. ಸಿಗಲಿದೆ. ಇದಕ್ಕೆ ಹಣಕಾಸು ಹೊಂದಿಸುವುದು ಒಂದು ಸಮಸ್ಯೆಯಾದರೆ, ನಿರುದ್ಯೋಗಿಗಳು ದೇಶದಲ್ಲಿ ಎಷ್ಟು ಮಂದಿ ಇದ್ದಾರೆ ಎಂಬ ಕುರಿತು ನಿಖರ ಲೆಕ್ಕ ಇಲ್ಲದಿರುವುದು ಮತ್ತೂಂದು ತೊಂದರೆಯಾಗಿ ಪರಿಣಮಿಸಿದೆ.

Advertisement

ನಿರುದ್ಯೋಗ ಭತ್ತೆ ಬದಲಿಗೆ ಏಕರೂಪದ ಕನಿಷ್ಠ ಆದಾಯ ಯೋಜನೆಯನ್ನು ಕೆಲವು ದೇಶಗಳು ಪರಿಶೀಲಿಸುತ್ತಿವೆ. ಆದರೆ ಸಂಪನ್ಮೂಲದ ಕೊರತೆಯಿಂದಾಗಿ ಕೇಂದ್ರ ಸರಕಾರ ಅದರ ಬಗ್ಗೆ ಚಿಂತನೆ ನಡೆಸುತ್ತಿಲ್ಲ. ಒಂದು ವೇಳೆ ಅಂಥದ್ದೊಂದು ಯೋಜನೆ ಜಾರಿಗೆ ತಂದರೂ ಜಿಡಿಪಿಯ ಶೇ.12.5ರಷ್ಟು ಪಾಲನ್ನು ಆ ಕಾರ್ಯಕ್ರಮಕ್ಕೇ ಮೀಸಲಿಡಬೇಕಾಗುತ್ತದೆ. ಆದರೆ ಅದು ಸಾಧ್ಯವಿಲ್ಲದ ಮಾತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next